
24 Sept 2024
ದಿನಾಂಕ 24-09-2024 ರಂದು ಎಸ್ ಜೆ ಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ದಿನ ವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರು, ಹಾಗೂ ಮಾಜಿ ಜಿಲ್ಲಾ NSS ನೂಡಲ್ ಅಧಿಕಾರಿಯಾವರಾದ ಪ್ರೊ. ಸಿ. ಬಸವರಾಜಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿ NSS ನ ಹುಟ್ಟು ಹಾಗೂ ಅದರಿಂದ ಆಗುವ ಪ್ರಾಯೋಜನಗಳೇನು ಎಂಬುದರ ಬಗ್ಗೆ ವಿಸ್ತರವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಜೊತೆಗೆ ರಾಷ್ಟ್ರೀಯ ಸೇವೆಯು ವಿದ್ಯಾರ್ಥಿಗಳ ಬದುಕನ್ನು ಹಸನು ಮಾಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲಾರದ ಡಾ. ಎಲ್. ಈಶ್ವರಪ್ಪ ನವರು ಮಾತನಾಡಿ NSS ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವಾಗುವಲ್ಲಿ ತುಂಬಾ ಸಹಕರಿಯಾಗಿದೆ ಜೊತೆಗೆ ವಿದ್ಯಾರ್ಥಿಗಳು ಸೇವೆಯನ್ನು ಮೈಗೂಡಿಸಿಕೊಳ್ಳುವುದರ ಮೂಲಕ ರಾಷ್ಟ್ರಕ್ಕೆ ಕೊಡುಗೆ ನೀಡಬೇಕು ಎಂದರು. ರಾಷ್ಟ್ರ ಕಟ್ಟುವ ಕೆಲಸ NSS ಮಾಡುತ್ತದೆ. ರಾಷ್ಟ್ರ ಕಾಪಾಡುವ ಕೆಲಸ NCC ಮಾಡುತ್ತದೆ ಎಂದರು.
ರಾ, ಸೇ ಯೋ ಘಟಕ -1 ರ ಕಾರ್ಯಕ್ರಮಾಧಿಕಾರಿಗಳಾದ ಕೆ. ಹೆಚ್ ಶಿವಕುಮಾರ ಪ್ರಾಸ್ತವಿಕ ನುಡಿ ನುಡಿದರು. IQAC ಸಂಚಾಲಕರು ಹಾಗೂ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾದ 5. ಎಸ್ ಪರಮೇಶ್ವರ, ಉಪನ್ಯಾಸಕರುಗಳಾದ ವಿಶ್ವನಾಥ್, ಮಧು, ಡಾ. ಸಿ.ಸುಧಾರಾಣಿ ಹಾಗೂ ಬೋಧಕ ಬೋಧಕೇತರ ವರ್ಗದವರು ಭಾಗವಹಿಸಿದ್ದರು ಕು. ಚಂದನ ಪ್ರಾರ್ಥಿಸಿದರು, ಕು. ಉಷ ನಿರೂಪಣೆ ಮಾಡಿದರು. ಕು ನಯನ ಸ್ವಾಗತಿಸಿದರು. ಕು ಬೇಬಿ ವಂದನಾರ್ಪಣೆ ಮಾಡಿದರು.
