top of page

12 Jul 2024
ಚಿತ್ರದುರ್ಗ, ಜು. 12 : ನಗರದ ಎಸ್.ಜೆ.ಎಂ. ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಸೋಮವಾರದಿಂದ ಶನಿವಾರದವರೆಗೆ ಪ್ರತಿನಿತ್ಯ ಸಂಜೆ 5.00 ರಿಂದ 8.00ರವರೆಗೆ ಕಾರ್ಯನಿರ್ವಹಿಸಲಿರುವ ಸಂಜೆ ವಿಶೇಷ ದಂತ ಚಿಕಿತ್ಸಾಲಯವನ್ನು ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ|| ರಘುನಾಥರೆಡ್ಡಿ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಚಿಕಿತ್ಸಾಲಯದಲ್ಲಿ ಎಲ್ಲ ತರಹದ ದಂತ ಚಿಕಿತ್ಸೆಗಳನ್ನು ನುರಿತ ವೈದ್ಯರು ನೀಡಲಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಲು ಪ್ರಕಟಣೆಯಲ್ಲಿ ಕೋರಿದೆ.
bottom of page






