
8 Oct 2024
ಚಿತ್ರದುರ್ಗ, ಅ. 8 : ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ
ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತ್ಯುತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ 2024ರ ಅಂಗವಾಗಿ ಕೃಷಿ ಮೇಳ ಏರ್ಪಡಿಸಿದ್ದು. ಅದರಲ್ಲಿ ಕೃಷಿ ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ವಿವಿಧ ಇಲಾಖೆಯ 50ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗಿದೆ. ಅದರಲ್ಲಿ ಪ್ರಮುಖವಾಗಿ ಕೃಷಿ, ತೋಟಗಾರಿಕೆ, ರೇಷ್ಮೆ, ಅಪ್ಪರ್ ಭದ್ರಾ, ಧರ್ಮಸ್ಥಳ ಸ್ವಸಹಾಯ ಸಂಘ, ಪಶುಸಂಗೋಪನಾ ಇಲಾಖೆ, ಬಸವೇಶ್ವರ ಆಸ್ಪತ್ರೆ, ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯ, ಖಾದಿ ಮತ್ತು ಗ್ರಾಮೋದ್ಯೋಗ, ಜವಳಿ ಮತ್ತು ಕೈಮಗ್ಗ, ಮಹಿಳಾ ಮತ್ತು ಮಕ್ಕಳ ಇಲಾಖೆ, ಅರಣ್ಯ, ಆಯುಷ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಭಾಗವಹಿಸಿದ್ದವು.
ಅದರಲ್ಲಿ ತೋಟಗಾರಿಕೆ ಇಲಾಖೆ ಏರ್ಪಡಿಸಿದ್ದು ಆ ಇಲಾಖೆಯ ಮಾದರಿಗೆ ಪ್ರಥಮ ಬಹುಮಾನ ಲಭಿಸಿದ್ದು, ಕೃಷಿ ಇಲಾಖೆಗೆ ದ್ವಿತೀಯ ಬಹುಮಾನ, ಅಪ್ಪರ್ ಭದ್ರಾ ಇಲಾಖೆಗೆ ತೃತೀಯ ಹಾಗೂ ರೇಷ್ಮೆ ಇಲಾಖೆಗೆ ನಾಲ್ಕನೇ ಬಹುಮಾನ ಲಭಿಸಿದೆ.
ಇದರಲ್ಲಿ ವಿವಿಧ ತಳಿಯ ಹಸು, ಎಮ್ಮೆ, ಕುರಿ, ಕೋಳಿ, ನಾಯಿ, ಬೆಕ್ಕುಗಳ ಪ್ರದರ್ಶನವೂ ಸಹ ಇದ್ದು. ಸುಮಾರು 50 ಜೊತೆ ಎತ್ತುಗಳು ಇದ್ದದ್ದು ವಿಶೇಷವಾಗಿತ್ತು. 3 ಲಕ್ಷ ಬೆಲೆಬಾಳುವ ಎಮ್ಮೆಗಳು ವಿಶೇಷ ಗಮನ ಸೆಳೆದವು.





