top of page

ಫಾಲಿಫೆಸ್ಟ್ ಉತ್ಸವ

28 Oct 2024

ಪಾಲಿಫೆಸ್ಟ್ ಉತ್ಸವ - 2024ಕ್ಕೆ ಚಾಲನೆ ನೀಡಿದ ಡಾ. ಬಸವಕುಮಾರ ಸ್ವಾಮೀಜಿ
ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆಗೆ ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳು ಪ್ರೇರಕವಾಗಿರುತ್ತವೆ. ಶಾಲಾ-ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದವರು ಕಲೆ, ಕ್ರೀಡೆ , ಸಾಂಸ್ಕೃತಿಕ ಸೇರಿದಂತೆ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡುವುದು ಅತಿ ಮುಖ್ಯ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆ ಎಂ ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಬಸವಕುಮಾರ ಸ್ವಾಮೀಜಿ ಅವರು ಕರೆ ನೀಡಿದರು.
ಶ್ರೀಗಳವರು ಇಂದು ನಗರದ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಪಾಲಿಟೆಕ್ನಿಕ್ ವತಿಯಿಂದ ಪಾಲಿಫೆಸ್ಟ್ ಉತ್ಸವ- 2024ರ ಅಂಗವಾಗಿ ಇಲ್ಲಿನ ಶ್ರೀ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ವಿದ್ಯಾರ್ಥಿ ಹಾಗೂ ಸಿಬ್ಬಂದಿ ವರ್ಗದವರಿಗಾಗಿ ಏರ್ಪಡಿಸಿರುವ ಎರಡು ದಿನಗಳ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಉತ್ಸವಕ್ಕೆ ಸ್ವತಃ ಫೀಲ್ಡ್ ಗೆ ಇಳಿದು ಬ್ಯಾಟ್ ಹಿಡಿದು, ಬಂದ ಬಾಲನ್ನು ಎತ್ತಿ ಕ್ರೀಡಾಂಗಣದ ಮುಂಚೂಣಿಗೆ ತಳ್ಳುವ ಮುಖಾಂತರ ಉದ್ಘಾಟಿಸಿ ಕ್ರೀಡಾಸಕ್ತರಿಗೆ ಹುರಿದುಂಬಿಸಿದರು, ಹಾಗೆಯೇ ಬೋಲಿಂಗ್ ಕೂಡ ಮಾಡಿ ಹುರುಪು ನೀಡಿದ ಅವರು ಹಲವರಲ್ಲಿ ಹಲವಾರು ವಿಧದ ಅಭಿರುಚಿ ಹವ್ಯಾಸಗಳಿರುತ್ತವೆ. ಅವುಗಳನ್ನು ವಿದ್ಯಾರ್ಥಿಗಳಲ್ಲಿ ಹೊರತೆಗೆಯುವ ಪ್ರಯತ್ನ ಶಿಕ್ಷಣ ಸಂಸ್ಥೆಗಳಿಂದ ಆದಾಗ ಅಲ್ಲಿ ಅನೇಕ ಪ್ರತಿಭೆಗಳು ಹೊರ ಹೊಮ್ಮುಲು ಸಾಧ್ಯವಾಗುತ್ತದೆ.ಅದಕ್ಕೆ ಪೂರಕ ವಾತಾವರಣ ಅಗತ್ಯ. ಓದಿನ ಜೊತೆಗೆ ಜೊತೆಗೆ ಇತರ ಎಲ್ಲ ರೀತಿಯ ಪಠ್ಯೇತರ ಚಟುವಟಿಕೆಗಳು ಘನ ವ್ಯಕ್ತಿತ್ವವನ್ನು ರೂಪಿಸಲಿಕ್ಕೆ ಸಹಕಾರಿಯಾಗುತ್ತವೆ ಎಂದು ಕಿವಿಮಾತು ಹೇಳಿದರು.
ಜಗದ್ಗುರು ಶ್ರೀಮಲ್ಲಿಕಾರ್ಜುನ ಮುರುಘರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಭರತ್, ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಫಾರ್ಮಸಿಯ ಪ್ರಾಚಾರ್ಯರಾದ ನಾಗರಾಜ್, ದೈಹಿಕ ನಿರ್ದೇಶಕರಾದ ಕುಮಾರಸ್ವಾಮಿ ಪಾಲಿಟೆಕ್ನಿಕ್ ನ ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಪಿ.ಬಿ ರಾಜೇಶ್ ,ನಳಿನಾಕ್ಷಿ , ಎಸ್ ಮೋಹನ್ ಕುಮಾರ್ ಪಿ.ಎ .ರಘು ಹಾಗೂ ಪಾಲಿಟೆಕ್ನಿಕ್ ನ ಬೋಧಕರು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಾಚಾರ್ಯರದ ಎಸ್ .ವಿ .ರವಿಶಂಕರ್ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page