
6 Oct 2024
ಜಯದೇವ ಸ್ವಾಮಿಗಳ ತೇರು ಎಳೆಯುವುದೇ ನಮ್ಮ ಪುಣ್ಯ ಎಂದು ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಶ್ರೀ.ಬಸವಕುಮಾರಸ್ವಾಮೀಜಿ ನುಡಿದರು. ಅವರು ದಿನಾಂಕ 06.10.2024ರ ಬೆಳಿಗ್ಗೆ 10.00 ಗಂಟೆಗೆ ಹಳೆಯ ಮಾಧ್ಯಮಿಕ ಶಾಲಾ ಆವರಣದಲ್ಲಿ ಜಯದೇವ ಶ್ರೀಗಳ 150ನೇ ಜಯಂತ್ಯುತ್ಸವ ಅಂಗವಾಗಿ ಆಯೋಜಸಿದ್ದ ಮಹಿಳಾ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡುತ್ತ, ಈ ನಾಡಿನಾದ್ಯಾಂತ ಸಮಾಜ ಸೇವೆ ಮಾಡಿದ ವ್ಯಕ್ತಿಗಳು ಶ್ರೀ.ಜಯದೇವಸ್ವಾಮಿಗಳು. ಚಿತ್ರದುರ್ಗದಲ್ಲಿ ತಾಯಿಮಕ್ಕಳ ಆಸ್ಪತ್ರೆಯನ್ನು ಕಟ್ಟಿಸಿಕೊಟ್ಟರು. ಮೈಸೂರು ಸಂಸ್ಥಾನವೂ ಮಾಡಿರುವಷ್ಟೇ ಸಮಾಜಮುಖಿ ಕೆಲಸ ಕಾರ್ಯಗಳನ್ನು ಜಯದೇವ ಸ್ವಾಮಿಗಳು ಮಾಡಿ ತೋರಿಸಿ ಕೊಟ್ಟಿದ್ದಾರೆ. ಜಯದೇವ ಸ್ವಾಮಿಗಳು ಮಾಡಿರುವ ಕೆಲಸಗಳನ್ನು ಮಾದಾರ ಚೆನ್ನಯ್ಯ ಸ್ವಾಮಿಜಿಗಳು ಲೇಸರ್ ಶೋ ಮೂಲಕ ಈ ನಾಡಿಗೆ ತೋರಿಸಿಕೊಟ್ಟಿದ್ದಾರೆ ಎಂದು ನುಡಿದರು.
ಕ.ರ.ವೇ.ಮಹಿಳಾ ಘಟಕದ ಗೌ.ಅಧ್ಯಕ್ಷೆ ಹಾಗೂ ಚಲನಚಿತ್ರಕಲಾವಿದೆ ಅಶ್ವಿನಿಗೌಡ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಮಹಿಳಾ ಕ್ರೀಡಾವನ್ನು ಉದ್ಘಾಟಿಸಿದ್ದು ನನ್ನ ಸೌಭಾಗ್ಯ ಹೆಣ್ಣು ಮಕ್ಕಳೇ ಸ್ಟ್ರಾಂಗು ಗುರು ಎಂದು ಹೇಳುತ್ತಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಮಹಿಳೆಯರನ್ನು ಹುರಿದುಂಬಿಸಿದರು.
ಕ್ರೀಡಾಕೂಟದ ಸಮ್ಮುಖವನ್ನು ವಹಿಸಿ ಮಾತನಾಡಿದ ಬಸವಕಲ್ಯಾಣ ಬಸವ ಮಹಾಮನೆಯ ಶರಣೆ ಸತ್ಯಕ್ಕ, ಗೃಹಿಣಿಯರು ಆಸಕ್ತಿಯಿಂದ ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ದೈಹಿಕವಾಗಿ ಉಲ್ಲಾಸ, ಮನಸ್ಸಿಗೆ ಸಂತೋಷ ಸಿಗುವುದು ಕ್ರೀಡೆಯಿಂದ ಮಾತ್ರ. ಕ್ರೀಡೆಯಲ್ಲಿ ಭಾಗವಹಿಸುವವರಲ್ಲಿ ಏಕಾಗ್ರತೆ ಮತ್ತು ದೈಹಿಕ ಸಾಮರ್ಥ್ಯ ಸಧೃಡವಾಗಿರುತ್ತದೆ. ಆರೋಗ್ಯ ಮತ್ತು ಮನಸ್ಸು ಎರಡನ್ನು ಸಮತೋಲನದಲ್ಲಿಡಲು ಕ್ರೀಡೆಯು ತುಂಬಾ ಸಹಕಾರಿಯಾಗಿದೆ ಎಂದು ತಿಳಿಸಿದರು.
ಶ್ರೀಮತಿ. ವೀಣಾ ಸುರೇಶ್ ಬಾಬು ಮಾತನಾಡಿ, ಶರಣ ಸಂಸ್ಕೃತಿ ಉತ್ಸವ ಮಹಿಳೆಯರಿಗೆ ಒಂದು ವೇದಿಕೆ ಕಲ್ಪಿಸಿಕೊಟ್ಟಿದೆ. ಜಯದೇವ ಶ್ರೀಗಳ 150ನೇ ಜಯಂತ್ಯುತ್ಸವ ಅಂಗವಾಗಿ ಹಮ್ಮಿಕೊಂಡಿರುವ ಈ ಕ್ರೀಡಾಕೂಟವು ಮಹಿಳೆಯರ ಪಾಲಿಗೆ ಭಾಗ್ಯವೇ ಸರಿ. ಹೆಣ್ಣುಮಕ್ಕಳು ಸದಾ ಮನೆ ಸಂಸಾರ ಎಂಬ ಜಂಜಾಟದಿಂದ ಹೊರಬಂದು ಇಂತಹ ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕ್ರೀಡಾಕೂಟದಲ್ಲಿ ಟೈಕೊಂಡೋ ಕ್ರೀಡಾಪಟು ಶ್ರೀಮತಿ ಎಂ ಅನಿತ ಹಾಗು ಚಲನಚಿತ್ರ ಕಲಾವಿದೆ ಅಶ್ವಿನಿಗೌಡರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬೀರವಳ್ಳಿ ಶ್ರೀಗುರುದೇವ ತಪೋವನದ ಶರಣೆ ನಂದಾತಾಯಿ, ಕವಲೆತ್ತು ಬಸವಕೇಂದ್ರದ ಶರಣೆ ಮುಕ್ತಾಯಕ್ಕ, ಲಾಳನಹಳ್ಳಿ ಗುರುಮಲ್ಲೇಶ್ವರ ದಾಸೋಹ ಮಠದ ಶರಣೆ ಜಯದೇವಿ ತಾಯಿ ಹಾಗೂ












