
4 Oct 2024
ಯೋಗಾಭ್ಯಾಸದಿಂದ ಆರೋಗ್ಯ ಸುಧಾರಣೆ ಸಾಧ್ಯ
ಚಿತ್ರದುರ್ಗ, ಅ. 4 ವ್ಯಕ್ತಿಯ ಜೀವನದಲ್ಲಿ ಹಣ ಅಂತಸ್ತು ಮಾಡುವುದೇ ಮುಖ್ಯವಲ್ಲ. ಅತಿಯಾದ ಅವಸರ, ಕೆಲಸದೊತ್ತಡ, ಕಲುಷಿತ ಗಾಳಿ, ನೀರು, ಆಹಾರ ಸೇವೆನೆಯಿಂದಾಗಿ ಬಿಪಿ, ಸಕ್ಕರೆ ಕಾಯಿಲೆಗಳು ಆವರಿಸಿವೆ. ಇಂಥ ಸಂದಿಗ್ಧತೆಯಲ್ಲಿ ಯೋಗಾಭ್ಯಾಸದಿಂದ ಮಾತ್ರ ಆರೋಗ್ಯ ಸುಧಾರಿಸಿಕೊಳ್ಳಲು ಸಾಧ್ಯವಿದೆ ಎಂದು ಯೋಗಗುರು ಚೆನ್ನಬಸವಣ್ಣನವರು ಹೇಳಿದರು.
ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಜಯದೇವ ಜಗದ್ಗುರುಗಳ 150ನೇ ಜಯಂತೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ನಡೆಯುತ್ತಿರುವ ಯೋಗ ಶಿಬಿರದಲ್ಲಿ ಇಂದು ಬೆಳಗ್ಗೆ ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡುತ್ತ, ಮಾತನಾಡಿದರು. ಸರಳ ಆರೋಗ್ಯಕ್ಕಾಗಿ ಯೋಗದ ಅಭ್ಯಾಸದ ಕುರಿತು ಅನೇಕ ಯೋಗಾಸನಗಳನ್ನು ಕರಗತ ಮಾಡಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಾ.ಬಸವಕುಮಾರ ಸ್ವಾಮೀಜಿ ಯೋಗ ಆಸಕ್ತರನ್ನು ಕುರಿತು ಮಾತನಾಡುತ್ತ, ಆರೋಗ್ಯಕ್ಕಾಗಿ ಯೋಗ ಅಭ್ಯಾಸ ಅಗತ್ಯ. ಕಳೆದ ಹತ್ತು ದಿನಗಳ ಕಾಲ ನಡೆದ ಈ ಶಿಬಿರದ ಅನುಭವಗಳನ್ನು ಹಂಚಿಕೊಂಡರು.
ಶಿಬಿರದಲ್ಲಿ ಭಾಗವಹಿಸಿದ್ದ ಹಲವರು, ಈ ಶಿಬಿರವು ತಮಗೆ ಅತ್ಯಂತ ಉಪಯುಕ್ತವಾಗಿದೆ ಮತ್ತು ಇಂತಹ ಯೋಗ ಶಿಬಿರಗಳು ಪ್ರಸ್ತುತ ಸಮಾಜಕ್ಕೆ ಅತ್ಯಗತ್ಯವಾಗಿದ್ದು ಹೆಚ್ಚು ಹೆಚ್ಚು ಶಿಬಿರಗಳು ನಡೆಯಬೇಕಿದೆ ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮವನ್ನು ಎಸ್.ಜೆ.ಎಮ್. ರೆಸಿಡೆನ್ಶಿಯಲ್ ಶಾಲಾ ಸಿಬ್ಬಂದಿಗಳು ಅಚ್ಚುಕಟ್ಟಾಗಿ ಆಯೋಜಿಸಿ, ನಿರ್ವಹಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣೀಕರ್ತರಾದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಶ್ರೀಮತಿ ಹರ್ಷಿಣಿ ಸ್ವಾಗತಿಸಿದರು. ಶ್ರೀಮತಿ ಅನಿತಾ ನಿರೂಸಿದರು.



