top of page

ಯೋಗ ಆರೋಗ್ಯ ಅಧ್ಯಾತ್ಮ ಶಿಬಿರ

7 Oct 2024

ದಿ.06-10-2024 ರ ಸಂಜೆ 6 ಗಂಟೆಗೆ ಯೋಗ ಆಧ್ಯಾತ್ಮ ಆರೋಗ್ಯ ಶಿಬಿರದಲ್ಲಿ ವೈದ್ಯಶ್ರೀ ಯೋಗ ಗುರು ಚನ್ನಬಸವಣ್ಣ ಮಾತನಾಡಿ ಭಾರತ ದೇಶ ಆಧ್ಯಾತ್ಮಿಕವಾದ ತವರೂರು, ಆಧ್ಯಾತ್ಮ ಕೇವಲ ಕಥೆಯಲ್ಲ ಅದು ಪ್ರಾಯೋಗಿಕ, ಅನ್ನದಾಸೋಹ, ಅರಿವಿನ ದಾಸೋಹವನ್ನು ನೀಡಿದ ಕೀರ್ತಿ ಶ್ರೀ ಜಯದೇವ ಜಗದ್ಗುರುಗಳಿಗೆ ಸಲ್ಲುತ್ತದೆ. ಮಹಾತ್ಮರಿಗೆ ಮರಣವಿಲ್ಲ ಅಂತವರ ಸಾಲಿನಲ್ಲಿ ಶ್ರೀ ಜಯದೇವ ಜಗದ್ಗುರುಗಳು ಸೇರುತ್ತಾರೆಂದು ತಿಳಸಿದರು.
ರಾವಂದೂರಿನ ಮೋಕ್ಷಪತಿ ಮಹಾಸ್ವಾಮಿಗಳು ಮಾತನಾಡಿ ಶ್ರೀ ಜಯದೇವ ಜಗದ್ಗುರುಗಳು ಅವರು ನಾಡಿನಾಂದ್ಯತ ಶಾಖಾ ಮಠಗಳನ್ನು ಜೀರ್ಣೋದ್ದಾರ ಮಾಡಿದಲ್ಲದೆ ಮತ್ತು ಶೈಕ್ಷಣಿಕ ಸಂಸ್ಥೆಗಳು ವಸತಿ ನಿಲಯ ಕಟ್ಟಿಸಿದರು. ಬಸವಣ್ಣನವರ ವಚನಗಳನ್ನು ತಮ್ಮ ಆಚಾರ ವಿಚಾರಗಳನ್ನು ನಡೆ ನುಡಿಗಳಲ್ಲಿ ಅಳವಡಿಸಿದಕೊಂಡು ಮುರುಘಾ ಪರಂಪರೆಯನ್ನು ಬೆಳೆಸಿದವರು ಎಂದು ತಿಳಿಸಿದರು.
ಸಿರಸಂಗಿ ಮುರುಘಾಮಠದ ಶ್ರೀ ಬಸವಮಹಾಂತಸ್ವಾಮಿಗಳು ಮಾತನಾಡಿ ಇಂದಿನ ಸಮಾಜದಲ್ಲಿ ನಾವುಗಳು ಟಿ ವಿ ಮೊಬೈಲ್‌ಗೆ ಹೊಂದಿಕೊಂಡಿದ್ದೇವೆ, ನಮ್ಮ ಸಂಸ್ಕರವನ್ನೇ ಮರೆತಿದ್ದೇವೆ. ಆದ್ದರಿಂದ ಶರಣ ವಿಚಾರಗಳನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ ಎಂದರು.
ಹಿರಿಯ ಇತಿಹಾಸ ಸಂಶೋಧಕರಾದ ಡಾ.ಲಕ್ಷ್ಮಣ ತೆಲಗಾವಿ ಮಾತನಾಡಿ ಕೆಳೆದ 50 ವರ್ಷಗಳಿಂದ ಮುರುಘಾ ಪರಂಪರೆಯನ್ನು ಕಂಡಿದ್ದೇನೆ. ಶ್ರೀ ಜಯದೇವ ಜಗದ್ಗುರುಗಳ 100 ವರ್ಷದ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿರುವುದನ್ನ ನೋಡಿದ್ದೇನೆ. ಶ್ರೀ ಮಠದಲ್ಲಿನ ತಾಳೆಗರಿಗಳ ಮುಖಾಂತರ ಶ್ರೀ ಮಠದ ಪರಂಪರೆಯನ್ನು ಬೇಳಕಿಗೆ ತಂದವರು ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಎಂದರು.
ಮೌಡ್ಯ ಆಚರಣೆಗಳ ವಿರೋಧಿ ಹೋರಟಗಾರ ಶ್ರೀ ಹುಲಿಕಲ್ ನಟರಾಜ್ ಮಾತನಾಡಿ, ಇಂದು ಬಸವ ತತ್ವ ಮತ್ತು ಶರಣರ ವಿಚಾರಗಳನ್ನು ಕೆಲವ ಅಧ್ಯಾಯನಕ್ಕೆ ಮಾತ್ರ ಬಳಸಿಕೊಂಡಿದ್ದೇವೆ, ಅದರೆ ಆಚರಣೆಗೆ ತಂದಿಲ್ಲ, ನಾವು ಶರಣರ ನಿಜವಾದ ಅನುಯಾಯಿಗಳಾಗ ಬೇಕದರೆ ಜೀವನದಲ್ಲಿ ಅಳವಡಿಸಿಕೊಂಡಗ ಮಾತ್ರ ಸಾಧ್ಯ ಎಂದರು.
ಶ್ರೀ ಗುರುಬಸವ ಮಹಾಸ್ವಾಮಿಗಳು ಮಾತನಾಡಿ ಭಕ್ತಿಯೆಂಬದು ಬಹಳ ದೊಡ್ಡ ಸಂಪತ್ತು. ಆರೋಗ್ಯ ಸಂಪತ್ತು, ಧನ
ಸಂಪತ್ತುಗಿಂತ ಭಕ್ತಿ ಸಂಪತ್ತು ಬಹಳ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಮೆದೆಹಳ್ಳಿಯ ಬಸವರಾಜ ಮಾತನಾಡಿ ಬಡ ರೋಗಿಗಳಿಗೆ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ 66 ಸರ್ಕಾರದ ಸಚಿವರ ಸಹಕಾರದಿಂದ ಜಯದೇವ ಕಾಡಿಯಾಲಜಿಸ್ಟ್” ವಿಭಾಗವನ್ನು ಸ್ಥಾಪಿಸಿದವರು ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಎಂದರು.
ಕಾರ್ಯಕ್ರಮದಲ್ಲಿ ಡಾ.ಬಸವಕುಮಾರ ಸ್ವಾಮಿಜಿ ಮತ್ತು ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page