
28 Mar 2025
ಎಸ್.ಜೆ.ಎಂ. ಪಾಲಿಟೆಕ್ನಿಕ್ : ಪಾಲಿಫೆಸ್ಟ್ 2025
ಮೊಬೈಲ್ ಆರೋಗ್ಯಪೂರ್ಣ ಸಮಾಜದ ಬೆಳವಣಿಗೆಗೆ ಪೂರಕವಲ್ಲ : ಡಾ. ಬಸವಕುಮಾರ ಸ್ವಾಮಿಗಳು
ಚಿತ್ರದುರ್ಗ, ಮಾ. ೨೮ : ಮನುಷ್ಯ ಬಾಹ್ಯ ಪ್ರಪಂಚದ ಆಡಂಬರ ಜೀವನಪದ್ಧತಿಗೆ ಒಳಗಾಗಿ ಅಂತರAಗದ ಅರಿವಿನ ಜಾಗೃತಿ ಉದ್ದೀಪನಗೊಳಿಸಿಕೊಳ್ಳುವಲ್ಲಿ ವಿಫಲನಾಗುತ್ತಿರುವುದು ಆಧುನಿಕ ಜಗತ್ತಿನ ವಿಪರ್ಯಾಸಗಳ¯್ಲೆÆಂದು. ಮೊಬೈಲ್ ಎನ್ನುವ ಸಾಧನ ನಮ್ಮನ್ನು ಆಳುವುದರ ಜೊತೆಗೆ ಮರಳುಗೊಳಿಸಿ ಕ್ರಿಯಾಶೀಲತೆಯನ್ನು ಕಸಿದುಕೊಂಡು ಜಡತ್ವಕ್ಕೆ ತಳ್ಳಿರುವುದು ಆರೋಗ್ಯಪೂರ್ಣ ಸಮಾಜದ ಬೆಳವಣಿಗೆಗೆ ಪೂರಕವಾದುದಲ್ಲ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ವಿಷಾದ ವ್ಯಕ್ತಪಡಿಸಿದರು.
ನಗರದ ಎಸ್.ಜೆ.ಎಂ. ಪಾಲಿಟಿಕ್ನಿಕ್‌ನಲ್ಲಿ ಏರ್ಪಡಿಸಿದ್ದ ೨೦೨೪-೨೫ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಪಾಲಿಫೆಸ್ಟ್-೨೦೨೫ರ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಬೌದ್ಧಿಕ ಮತ್ತು ಭೌತಿಕ ಬೆಳವಣಿಗೆಗೆ ಬೇಕಾದ ಆರೋಗ್ಯಕರ ಅಭಿರುಚಿಗಳನ್ನು ರೂಢಿಸಿಕೊಳ್ಳುವತ್ತ ವಿದ್ಯಾರ್ಥಿಗಳ ಗಮನ ಕೇಂದ್ರೀಕೃತವಾಗಬೇಕಿದೆ. ನಮ್ಮ ಜೀವನ ಕ್ರೀಡಾ ಮಾದರಿಯಲ್ಲಿರಬೇಕು. ಕ್ರೀಡೆ ವ್ಯಕ್ತಿತ್ವ ರೂಪಿಸುವ ಜತೆಗೆ ಏಕಾಗ್ರತೆಯನ್ನು ತಂದುಕೊಡುತ್ತದೆ. ನಾವು ಈಗ ಕ್ರೀಡೆಗಳಿಂದ ವಿಮುಖರಾಗುತ್ತಿz್ದÉÃವೆ. ಕಳೆದೆರಡು ದಶಕಗಳಲ್ಲಿ ಎ¯್ಲÁ ಆಟದ ಮೈದಾನಗಳು ಬಣಗುಡುತ್ತಿವೆ. ಹಿಂದೆ ಎ¯್ಲÁ ಮೈದಾನಗಳು ಆಟಗಾರರಿಂದ ತುಂಬಿ ತುಳುಕುತ್ತಿದ್ದವು. ಪಠ್ಯದ ಜೊತೆಗೆ ಕಲೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಮೌಲ್ಯಯುತ ಚಿಂತನೆಗಳ ಅಧ್ಯಯನವು ಮಾನಸಿಕ ಬೆಳವಣಿಗೆಗೆ ಪ್ರೇರಕ ಶಕ್ತಿಯಾಗಬಲ್ಲವು ಎಂದರು.
ಆಧುನಿಕತೆಗೆ ಒಗ್ಗಿಕೊಂಡAತೆ¯್ಲÁ ಮಾನವೀಯತೆ, ಮನುಷ್ಯತ್ವ ನಮ್ಮಿಂದ ದೂರವಾಗಿ ದ್ವೇಷ, ಅಸೂಯೆ ತುಂಬಿ ತುಳುಕುತ್ತಿದೆ. ಒಳ್ಳೆಯ ಹವ್ಯಾಸಗಳು ನಮ್ಮಿಂದ ದೂರವಾಗುತ್ತಿವೆ. ತಂದೆ ತಾಯಿಗಳು ನಮ್ಮ ಮಕ್ಕಳು ಚೆನ್ನಾಗಿ ಓದಿ ಅದ್ಯಯನಶೀಲರಾಗಿ, ಒಳ್ಳೆಯ ಹೆಸರು ಮತ್ತು ಉದ್ಯೋಗವನ್ನು ಪಡೆಯಲಿ ಎಂಬ ಸದಿಚ್ಛೆಯಿಂದ ತಮ್ಮ ಬದುಕನ್ನೇ ತ್ಯಾಗ ಮಾಡುತ್ತಾರೆ. ಮಕ್ಕಳ ಹಿತಕ್ಕೆ ಅವರ ಕೊಡುಗೆ ಅಪಾರವಾದುದು. ಅಂಥ ತ್ಯಾಗವನ್ನು ನಿಷ್ಪçಯೋಜನ ಮಾಡದೆ, ಅವರ ಋಣವನ್ನು ತೀರಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಗಳ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಅನೇಕರು ಬಡತನದಲ್ಲಿ ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಿ, ಕಷ್ಟಪಟ್ಟು ಓದಿ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉನ್ನತ ಅಧಿಕಾರವನ್ನು ಪಡೆದಿರುತ್ತಾರೆ. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನವೂ ಅವರಿಗೆ ಸಿಕ್ಕಿರುತ್ತದೆ. ಅಂತಹವರು ಭ್ರಷ್ಟತನಕ್ಕೆ ಹೊಂದಿಕೊಳ್ಳಲಿಲ್ಲ ಎಂಬ ಕಾರಣದಿಂದ ವಿನಾಕಾರಣ ಅವರ ಮೇಲೆ ಸುಳ್ಳು ವಂಚನೆಯ ಆರೋಪ ಹೊರಿಸಿ ಅವರು ಈ ಬದುಕಿನಿಂದ ದೂರವಾಗುವಂತಹ ಆತ್ಮಹತ್ಯೆ ಮಾಡಿಕೊಳ್ಳುವಂತಹ ಹಂತಕ್ಕೆ ಇಂದಿನ ಕೆಲವರು ಕುಮ್ಮಕ್ಕು ನೀಡುತ್ತಿರುವುದು, ಅವರು ಸತ್ತನಂತರ ಅವರ ಗುಣಗಾನ ಮಾಡುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಹೇಳಿದರು.
ನಮ್ಮ ಚಿತ್ರದುರ್ಗದ ಬೃಹನ್ಮಠದ ಜಯದೇವ ಜಗದ್ಗುರುಗಳು ಬಡ ವಿದ್ಯಾರ್ಥಿಗಳಿಗಾಗಿ ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪನೆ ಮಾಡುವುದರ ಮೂಲಕ ವಿದ್ಯಾರ್ಥಿಗಳ ಆಶಾಕಿರಣವಾಗಿದ್ದರು. ಅದರಂತೆ ಮಧ್ಯ ಕರ್ನಾಟಕದ ಈ ಬಯಲು ಸೀಮೆಯಲ್ಲಿ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳವರು ವಿದ್ಯಾಪೀಠದ ವತಿಯಿಂದ ಶಾಲಾಕಾಲೇಜು ಸ್ಥಾಪಿಸುವ ಮೂಲಕ ಶೈP್ಷÀಣಿಕ ಪ್ರಗತಿಗೆ ಕಾರಣರಾದರು ಎಂದು ಸ್ಮರಿಸಿದ ಅವರು, ತ್ರಿವಿಧ ದಾಸೋಹಕ್ಕೆ ಹೆಸರಾದ ಬೃಹನ್ಮಠದ ಮೂಲಕ ಓದಿದ ಅನೇಕರು ಮಹಾನ್ ಸಾಧಕರಾಗಿz್ದÁರೆ. ಅವರೆಲ್ಲರೂ ಈಗಿನ ವಿದ್ಯಾರ್ಥಿ ಸಮೂಹಕ್ಕೆ ಪ್ರೇರಣೆಯಾಗಲಿ ಎಂದು ನುಡಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಚಿತ್ರದುರ್ಗ ಭದ್ರಾ ಮೇಲ್ದಂಡೆ ಯೋಜನೆಯ ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಇಂಜಿನಿಯರ್ ಗುರುಬಸವರಾಜ್ ಬಿ.ಎನ್. ಅವರು ಮಾತನಾಡಿ, ನಾನು ಸಹ ನಿಮ್ಮಂತೆ ೨೦೦೦ ಇಸವಿಯಲ್ಲಿ ಸಿವಿಲ್ ವಿಭಾಗದ ವಿದ್ಯಾರ್ಥಿಯಾಗಿz್ದÉ. ಕಡೆಯ ಸೆಮಿಸ್ಟರ್ ಬರುವಷ್ಟರಲ್ಲಿ ಉದ್ಯೋಗ ಖಾತ್ರಿಯಾಗಿ ಪ್ರಥಮ ದರ್ಜೆ ಗುತ್ತಿಗೆದಾರರ ಬಳಿ ಫಲಿತಾಂಶ ಬರುವ ಮುನ್ನವೇ ಕೆಲಸ ಸಿಕ್ಕಿತ್ತು. ಆಗ ಚಿತ್ರದುರ್ಗ ನಗರದ ಬೆಂಗಳೂರು ರಸ್ತೆಯ ಕಾರಾಗೃಹ, ಐಯುಡಿಪಿ ಬಡಾವಣೆಯ ಪ್ರಗತಿ ಗ್ರಾಮೀಣ ಬ್ಯಾಂಕ್ ಕಟ್ಟಡ, ಮೈಸೂರು ಆರ್ಕ್ಯಲಾಜಿಕಲ್ ಸರ್ವೆ ಕಟ್ಟಡ, ದಾವಣಗೆರೆ ರೈಲ್ವೆ ನಿಲ್ದಾಣ ಮತ್ತು ವಸತಿಗೃಹ ಕಟ್ಟಡಗಳನ್ನು ಕಟ್ಟಿದ ಸಾರ್ಥಕತೆ ನನಗಿದೆ. ನಂತರ ಬೆಂಗಳೂರಿನ ಸ್ನೇಹಿತರ ಕರೆಯ ಮೇರೆಗೆ ಅಲ್ಲಿಗೆ ಹೋಗಿ, ಕೆಲಸದ ನಡುವೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕಟ್ಟಿ ಪಾಸು ಮಾಡಿದೆ. ನಂತರ ಇದೀಗ ಸರ್ಕಾರದ ಉದ್ಯೋಗ, ಕರ್ತವ್ಯ ನಿರ್ವಹಿಸುವ ಅವಕಾಶ ದೊರೆತಿದೆ. ಡಿಪ್ಲೋಮಾ ಅಂದರೆ ಉದ್ಯೋಗ ಸಿಗುವುದಿಲ್ಲ ಎನ್ನುವ ಕೀಳರಿಮೆ ಬೇಡ. ಓದುವಾಗ ಶ್ರದ್ಧೆ ವಹಿಸಿದರೆ ಎಲ್ಲವೂ ಸಾಧ್ಯವಿದೆ ಎನ್ನುವುದಕ್ಕೆ ನಾನೇ ನಿಮ್ಮ ಮುಂದೆ ಇz್ದÉÃನೆ. ನನಗೆ ಈ ಕೆಲಸ ಸಂತೃಪ್ತಿ ಕೊಟ್ಟಿದೆ ಎಂದು ತಮ್ಮ ಬದುಕಿನ ನಾನಾ ಘಟನೆಗಳನ್ನು ವಿದ್ಯಾರ್ಥಿಗಳ ಮುಂದೆ ಇಟ್ಟರು.
ಮುಖ್ಯಅತಿಥಿ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪಿ.ಬಿ. ಭರತ್ ಮಾತನಾಡಿ, ಶಿP್ಷÀಣ ಅಂದರೆ ನಾವು ಮೂರ್ತಿಯಾಗುವ ಮಾಧ್ಯಮ ಎಂದರ್ಥ. ನಾವು ಯಾವುದೇ ಕ್ಷೇತ್ರದಲ್ಲಿದ್ದರೂ ಅಲ್ಲಿ ಅಡೆತಡೆಗಳು ಇz್ದÉÃ ಇರುತ್ತದೆ. ಅವನ್ನು ಮೆಟ್ಟಿ ನಿಲ್ಲುವ ಜಾಣ್ಮೆ ಕರಗತ ಮಾಡಿಕೊಂಡಾಗ ಯಶಸ್ಸು ಸಿಗುತ್ತದೆ. ಎಲ್ಲರೂ ಸಹ ನೂರಕ್ಕೆ ನೂರು ಯಶಸ್ವಿ ವ್ಯಕ್ತಿಗಳಾಗಿರುವುದಿಲ್ಲ. ಎಲ್ಲರ ಬದುಕಿನಲ್ಲಿ ಒಂದಲ್ಲ ಒಂದು ರೀತಿಯ ಕೊರತೆಗಳು ಇz್ದÉÃ ಇರುತ್ತವೆ. ಅವುಗಳನ್ನು ಸರಿಪಡಿಸಿಕೊಂಡು ಹೋದಾಗ ಎಲ್ಲವೂ ಸಾಧ್ಯವಾಗುತ್ತದೆ ಎಂದ ಅವರು, ಇದೇ ಎಸ್‌ಜೆಎಂ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೋಮಾ ಮುಗಿಸಿ, ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗುರುಬಸವರಾಜರನ್ನೇ ಆದರ್ಶ ವ್ಯಕ್ತಿಯಾಗಿ ಸ್ವೀಕರಿಸಬೇಕೆಂದು ಸಲಹೆ ನೀಡಿದರು.
ಸಮಾರಂಭದ ಅಧ್ಯP್ಷÀತೆಯನ್ನು ಕಾಲೇಜಿನ ಪ್ರಾಚಾರ್ಯ ಎಸ್.ವಿ. ರವಿಶಂಕರ್ ವಹಿಸಿ ಕಾಲೇಜಿನ ಬೆಳವಣಿಗೆಯ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಮತ್ತು ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಪಾರಿತೋಷಕ ಹಾಗೂ ಪ್ರಮಾಣ ಪತ್ರಗಳನ್ನು ನೀಡಲಾಯಿತು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಹಮೀದ್ ರಜಾಕ್ ಖಾನ್ ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥ ಪಿ.ಬಿ. ರಾಜೇಶ್ ವಾರ್ಷಿಕ ವರದಿ ವಾಚಿಸಿದರು.