top of page

ಎಸ್.ಜೆ.ಎಂ. ಫಾರ್ಮಸಿ ಕಾಲೇಜಿನಿಂದ ಫಾರ್ಮ ದೀಕ್ಷಾಂತ್-2025

5 Apr 2025

ಚಿತ್ರದುರ್ಗ, ಏ. 4 : ನಗರದ ಎಸ್.ಜೆ.ಎಂ. ಫಾರ್ಮಸಿ ಕಾಲೇಜಿನ ಫಾರ್ಮ ದೀಕ್ಷಾಂತ್-2025 ಔಷಧ ತಜ್ಞರ ಪದವಿ ಪ್ರದಾನ ಸಮಾರಂಭವು ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ನೆರವೇರಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿವಯೋಗಿ ಸಿ. ಕಳಸದ ಅಧ್ಯP್ಷÀರು, ಎಸ್.ಜೆ.ಎಂ. ವಿದ್ಯಾಪೀಠ ಇವರು ಮಾತನಾಡುತ್ತ, ವಿದ್ಯಾರ್ಥಿಗಳು ಭವಿಷ್ಯದ ಕನಸುಗಳನ್ನು ಹೊತ್ತು ಕಾಲೇಜಿಗೆ ಸೇರಿ, ಪದವಿ ಪೂರೈಸಿದ್ದೀರಿ. ಈ P್ಷÀಣ ನಿಮ್ಮ ಕನಸುಗಳು ನನಸಾಗಿದೆ. ಇದಕ್ಕೆ ಕಾರಣ ನಿಮ್ಮ ಪರಿಶ್ರಮ. ಪಾಲಕರ ಹಾಗೂ ಶಿP್ಷÀಕರ ಆಶೀರ್ವಾದ. ನಿಮ್ಮ ಕಲಿಕೆ ನಿರಂತರ ಸಾಗಲಿ. ಪುಸ್ತಕದಿಂದ ಕಲಿತ ವಿಷಯಗಳು ಹಳೆಯದಾಗುತ್ತವೆ. ಹೊಸ ತಂತ್ರe್ಞÁನದ ಅರಿವು ಮತ್ತು ಕಲಿಕೆ ಸದಾ ಕಾಲ ರೂಢಿಸಿಕೊಳ್ಳಿರಿ. ಮನುಷ್ಯನ ಆರೋಗ್ಯಕ್ಕಾಗಿ ಔಷಧಿಗಳ ಆವಿಷ್ಕಾರ ನಿರಂತರ ನಡೆಯುತ್ತಿರುತ್ತದೆ. ಅಂಥ ಆವಿಷ್ಕಾರಗಳನ್ನು ನಮ್ಮವರೇ ಮಾಡಿದಾಗ ತುಂಬಾ ಹೆಮ್ಮೆ ಪಡುತ್ತೇವೆ. ಅಂತಹ ಫಾರ್ಮಸಿಸ್ಟ್ಗಳು ನೀವಾಗಿ. ಎಐ ತಂತ್ರe್ಞÁನ ಮತ್ತು ಡಾಟಾ ತಂತ್ರe್ಞÁನ ಬಳಸಿಕೊಂಡು ವಿಶೇಷ ಔಷಧಿ ತಜ್ಞರಾಗಿ ಹೊರಹೊಮ್ಮುವಂತೆ ಹಾರೈಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಶಿವಯೋಗಿ ಸಿ ಕಳಸದ ಅಧ್ಯP್ಷÀರು ಆಡಳಿತ ಮಂಡಳಿ ಎಸ್ ಜೆ ಎಂ ವಿದ್ಯಾಪೀಠ, ಡಾ ಡಾ ಪಿ ಎಸ್ ಶಂರ್ಕ, ಶ್ರೀ ಎಸ್ ಎನ್ ಚಂದ್ರಶೇರ್ಖ ಸದಸ್ಯರು ಆಡಳಿತ ಮಂಡಳಿ ಎಸ್ ಜೆ ಎಂ ವಿದ್ಯಾಪೀಠ, ಡಾ ಟಿಎಸ್ ನಾಗರಾಜ್ ಪ್ರಾಂಶುಪಾಲರು ಎಸ್ ಜೆ ಎಂ ಫಾರ್ಮಸಿ ಕಾಲೇಜು, ಡಾ ಸಲೀಂವು¯್ಲÁಖಾನ್ ಬಿಒಎಸ್ ಚೆರ್ಮನ್ ಆð ಜಿ ಯು ಎಚ್ ಎಸ್ ಬೆಂಗಳೂರು, ಸದಸ್ಯರು ಪಿಸಿಐ ನವದೆಹಲಿ ಮತ್ತು ವಿವಿಧ ವಿಭಾಗದ ಮುಖ್ಯಸ್ಥರಾದ ಡಾ ಮಾರುತಿ ಎಕ್ಬೋಟೆ, ಡಾ ಯೋಗಾನಂದ ಆð, ಡಾ ಸ್ನೇಹಲತಾ ಡಾ. ಬಸವರಾಜ್ ಹರ್ತಿ ಹಾಗೂ ಡಾ ನಟರಾಜ್ ಹಾಜರಿದ್ದರು.
ಡಾ ಪಿ.ಎಸ್. ಶಂಕರ್ ಸದಸ್ಯರು, ಆಡಳಿತ ಮಂಡಳಿ ಎಸ್.ಜೆ.ಎಂ ವಿದ್ಯಾಪೀಠ ಇವರು ಮಾತನಾಡಿ, ಫಾರ್ಮಸಿ ಶಿP್ಷÀಣವು ನಡೆದು ಬಂದ ದಾರಿ ಮತ್ತು ಇಂದಿನ ತಂತ್ರe್ಞÁನ ಯುಗದಲ್ಲಿ ಸ್ಟಾರ್ಟ್ ಆಫ್ ಇಂಡಿಯಾ ಕೌಶಲ್ಯ ತರಬೇತಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂತಹ ವಿನೂತನ ಆವಿಷ್ಕಾರಗಳ ಸದ್ಬಳಕೆ ಮಾಡಿಕೊಂಡು ಉತ್ತಮ ಔಷಧ ತಜ್ಞರಾಗುವಂತೆ ಶುಭ ಕೋರಿದರು.
ಮುಖ್ಯಅತಿಥಿ ಡಾ. ಸಲೀಂವು¯್ಲÁಖಾನ್ ಮಾತನಾಡುತ್ತ, ಔಷಧಿ ಅಂಗಡಿಯಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾಗಿ ಕೆಲಸಕ್ಕೆ ಇರುವ ಕೆಲಸಗಾರ ಔಷಧಿ ಕೊಡುತ್ತಾನೆ. ಆದರೆ ಔಷಧಿ ತಜ್ಞರ ಬಳಿ ಔಷಧಿಯನ್ನು ಕೇಳಲು ಬಂದಾಗ ಯಾರಿಗೆ, ಯಾಕೆ, ಎಷ್ಟು ಸಾರಿ, ಸರಿಯಾದ ಸಮಯ, ಅಡ್ಡ ಪರಿಣಾಮಗಳು, ಎಷ್ಟು ದಿನದವರೆಗೆ ತೆಗೆದುಕೊಳ್ಳಬೇಕೆಂಬ ಉಪಯುಕ್ತ ಮಾಹಿತಿಯನ್ನು ಔಷಧಿ ಜೊತೆಗೆ ತಿಳಿಸುತ್ತಾ ನೈತಿಕ ಅಭ್ಯಾಸ ಮಾಡಿಕೊಂಡಲ್ಲಿ ಮಾತ್ರ ಉತ್ತಮ ಫಾರ್ಮಸಿಸ್ಟ್ಗಳಾಗಿ ಬೆಳೆಯಲು ಸಾಧ್ಯ. ಔಷಧಿಗಳ ಬಗ್ಗೆ ತಿಳಿದಿರುವ ಮಾಹಿತಿ ನಿಮ್ಮ ಶಕ್ತಿ. ನೊಂದು ಬಂದ ರೋಗಿಗಳಿಗೆ ನಿಮ್ಮ ಅತ್ಯಮೂಲ್ಯವಾದ ಸಮಯವನ್ನು ಮೀಸಲು ಇಡಿ. ಔಷಧಿ ಕ್ಷೇತ್ರದ ವಿವಿಧ ವಿಭಾಗದಲ್ಲಿ ಹೊಸ ತಂತ್ರe್ಞÁನ ತಯಾರಿಕೆಯಲ್ಲಿ ಅನ್ವೇಷಣೆಯಲ್ಲಿ ಮತ್ತು ವ್ಯಾಪಾರ ಮತ್ತು ನಿಯಂತ್ರಣ ವಿಭಾಗದಲ್ಲಿ ಉಪಯೋಗಿಸಿ ಉತ್ತಮ ಔಷಧ ತಜ್ಞರಾಗಿ ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕ ನುಡಿಗಳನ್ನು ಹಂಚಿಕೊAಡ ಪ್ರಾಂಶುಪಾಲ ಡಾ. ಟಿ.ಎಸ್. ನಾಗರಾಜ್, ಈಗಾಗಲೇ ಪದವಿಯನ್ನು ಮುಗಿಸಿ ಕೆಲಸಕ್ಕೆ ತೆರಳಿರುವ ವಿದ್ಯಾರ್ಥಿಗಳಿಗೆ ಶುಭಾಶಯಗಳು ಮತ್ತು ಇನ್ನು ಕೆಲಸದ ಹುಡುಕಾಟದಲ್ಲಿ ಇರುವ ವಿದ್ಯಾರ್ಥಿಗಳಿಗೆ ಕಡಿಮೆ ಸಂಬಳ, ದೂರದ ಊರು ಅಂತ ಕೈಕಟ್ಟಿ ಕೂರಬೇಡಿ. ಔಷಧಿ ಕ್ಷೇತ್ರವು ತುಂಬಾ ವಿಸ್ತಾರವಾಗಿ ದೇಶಗಳ ಗಡಿಯನ್ನು ದಾಟಿ ಬೆಳೆದಿದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಔಷಧಿ ಕ್ಷೇತ್ರದಲ್ಲಿ ಹಿಂದೆ ಬೀಳಬಾರದು. ನಿಮಗೆ ಉತ್ತಮ ಕೆಲಸ ಕೊಡಿಸುವಲ್ಲಿ ಕಾಲೇಜಿನ ಪ್ಲೇಸ್‌ಮೆಂಟ್ ಸೆಲ್ ವಿಭಾಗ ಮತ್ತು ನಮ್ಮ ಹಳೆ ವಿದ್ಯಾರ್ಥಿಗಳ ಸಮೂಹ ಯಾವಾಗಲೂ ನಿಮ್ಮ ಜೊತೆ ಇರುತ್ತದೆ. ಕೆಲಸ ಕಲಿಯಲು ಹಿಂದೆ ಬೀಳಬೇಡಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪದವಿ ಪೂರೈಸಿದ 104 ಬಿ-ಫಾರ್ಮ, 19 ಎಂ-ಫಾರ್ಮ ಹಾಗೂ 22 ಫಾರ್ಮ-ಡಿ ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಗಳನ್ನು ಪಡೆದರು.
ಡಾ. ಟಿ.ಎಸ್. ನಾಗರಾಜ್ ಸ್ವಾಗತಿಸಿದರು. ಗಗನ್, ಸಹನಾ, ಚಿನ್ಮಯ್ ಪ್ರಾರ್ಥಿನೆ ಮಾಡಿದರು. ತೇಜಸ್ವಿನಿ ವಂದಿಸಿದರು.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page