3 Apr 2025
ಚಿತ್ರದುರ್ಗ, ಏ. 04 : ನಗರದ ಶ್ರೀ ಮುರುಘರಾಜೇಂದ್ರ
ಬೃಹನ್ಮಠದ ಅನುಭವ ಮಂಟಪದಲ್ಲಿ (4.04.2025) ಬೆಳಗ್ಗೆ
10.00 ಗಂಟೆಗೆ ಎಸ್.ಜೆ.ಎಂ. ಫಾರ್ಮಸಿ ಮಹಾವಿದ್ಯಾಲಯದ ಬಿ-ಫಾರ್ಮ,
ಫಾರ್ಮ-ಡಿ ಮತ್ತು ಎಂ-ಫಾರ್ಮ ಪದವೀಧರರಿಗೆ ಪದವಿ ಪ್ರಧಾನ
ಸಮಾರಂಭ ನಡೆಯಲಿದೆ.
ಸಮಾರಂಭದಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ
ಬೃಹನ್ಮಠ ಮತ್ತು ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿ
ಅಧ್ಯಕ್ಷ ಶಿವಯೋಗಿ ಸಿ.ಕಳಸದ ಗೌರವಾನ್ವಿತ ಅತಿಥಿಯಾಗಿ
ಭಾಗವಹಿಸುವರು. ಶ್ರೀ ಜಗದ್ಗುರು ಮುರುಘರಾಜೇಂದ್ರ
ಬೃಹನ್ಮಠ ಮತ್ತು ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿ
ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ದಿವ್ಯಸಾನಿಧ್ಯ
ವಹಿಸುವರು. ವಿಶೇಷ ಆಹ್ವಾನಿತರಾಗಿ ಮಂಗಳೂರು ಪಿ.ಎ. ಫಾರ್ಮಸಿ
ಕಾಲೇಜಿನ ಪ್ರಾಚಾರ್ಯ ಡಾ. ಸಲೀಂವುಲ್ಲಾಖಾನ್, ಶ್ರೀ ಜಗದ್ಗುರು
ಮುರುಘರಾಜೇಂದ್ರ ಬೃಹನ್ಮಠ ಮತ್ತು ಎಸ್.ಜೆ.ಎಂ. ವಿದ್ಯಾಪೀಠ
ಆಡಳಿತ ಮಂಡಳಿ ಸದಸ್ಯರಾದ ಡಾ. ಪಿ.ಎಸ್. ಶಂಕರ್ ಮತ್ತು ಎಸ್.ಎನ್.
ಚಂದ್ರಶೇಖರ್ ಅವರುಗಳು ಪಾಲ್ಗೊಳ್ಳುವರು. ಕಾಲೇಜಿನ
ಪ್ರಾಚಾರ್ಯ ಡಾ. ಟಿ.ಎಸ್. ನಾಗರಾಜ ಅಧ್ಯಕ್ಷತೆ ವಹಿಸುವರು.