
3 Apr 2025
ಚಿತ್ರದುರ್ಗ, ಏ. 3 : ಮಾನವನ ಆರೋಗ್ಯದ ಹಿತದೃಷ್ಟಿಯಿಂದ ತನ್ಮೂಲಕ ಸಮಾಜದ ಸ್ವಾಸ್ಥö್ಯವನ್ನು ಕಾಪಾಡಲು ಮಾರಣಾಂತಿಕ ಏಡ್ಸ್ ರೋಗವನ್ನು ನಿಯಂತ್ರಿಸುವುದು ಅತ್ಯವಶ್ಯವಾಗಿದೆ. ಪ್ರಸ್ತುತ ಏಡ್ಸ್ ನಿರ್ಮೂಲನೆಯತ್ತ ದೇಶ ಸಾಗುತ್ತಿದ್ದು, ಯುವಪೀಳಿಗೆ ಇದರ ಬಗ್ಗೆ ಹೆಚ್ಚು ಜಾಗೃತರಾಗಿರಬೇಕಿದೆ ಎಂದು ಪ್ರಾಚಾರ್ಯರಾದ ಡಾ. ಎಲ್. ಈಶ್ವರಪ್ಪ ತಿಳಿಸಿದರು.
ನಗರದ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಎನ್.ಎಸ್.ಎಸ್. ಘಟಕ, ಯೂತ್ ರೆಡ್‌ಕ್ರಾಸ್ ಹಾಗೂ ರೆಡ್ ರಿಬ್ಬನ್ ಸಹಯೋಗದಲ್ಲಿ ಗುರುವಾರ ನಡೆದ ಏಡ್ಸ್ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಚಿತ್ರದುರ್ಗ ಜಿಲ್ಲಾ ಏಡ್ಸ್ ನಿಯಂತ್ರಣ & ತಡೆ ಘಟಕದ ಜಿಲ್ಲಾ ಮೇಲ್ವಿಚಾರಕ ಡಾ. ಅಶೋಕ್ ವಿ. ಅವರು ವಿದ್ಯಾರ್ಥಿನಿಯರೊಟ್ಟಿಗೆ ಆಪ್ತ ಸಮಾಲೋಚನೆ ಮಾಡುತ್ತ, ಏಡ್ಸ್ ಬಗ್ಗೆ ಹೆಚ್ಚು ಜಾಗೃತರಾಗಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆರೋಗ್ಯದ ದೃಷ್ಠಿಯಿಂದ ಸ್ತಿçÃ-ಪುರುಷರು, ಒಬ್ಬ ಸ್ತಿçÃಗೆ ಒಬ್ಬ ಪುರುಷನಂತೆ ತಮ್ಮ ಲೈಂಗಿಕ ಸಂಪರ್ಕವನ್ನು ಹೊಂದುವ ಮೂಲಕ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು. ಎಂದ ಜಾಗೃತಿ ಮೂಡಿಸಿದರು.
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಡಿ.ಎಸ್.ಆರ್.ಸಿ ಆಪ್ತ ಸಮಾಲೋಚಕ ರವೀಂದ್ರ ಜಿ. ಮಾತನಾಡಿದರು. ಎನ್.ಎಸ್.ಎಸ್. ಅಧಿಕಾರಿ ಕೆ.ಹೆಚ್. ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಐಕ್ಯುಎಸಿ ಸಂಚಾಲಕ ಎಂ.ಎಸ್. ಪರಮೇಶ್ವರ, ಎನ್.ಎಸ್.ಎಸ್. ಅಧಿಕಾರಿ ಡಾ. ಸಿ.ಟಿ. ಜಯಣ್ಣ, ಯೂತ್ ರೆಡ್‌ಕ್ರಾಸ್ ಸಂಚಾಲಕ ಜಿ.ಎಸ್. ನಾಗರಾಜ ಹಾಗೂ ಕಾಲೇಜಿನ ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಕು. ಚಂದನ ಎಂ. ಪ್ರಾರ್ಥಿಸಿದರು. ಕು. ಉಷಾ ಎಸ್. ಪ್ರಾರ್ಥಿಸಿದರು. ಕು. ರುಚಿತ ಎಲ್. ವಂದಿಸಿದರು.
ಕು. ಬಿಂದುಶ್ರೀ ಎಸ್. ನಿರೂಪಿಸಿದರು.