12 Sept 2024
ಚಿತ್ರದುರ್ಗ,ಸೆ.12 : ಚಿತ್ರದುರ್ಗದ ಐತಿಹಾಸಿಕ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಪ್ರತಿ
ವರ್ಷದಂತೆ ನಡೆಸುವ ಶರಣಸಂಸ್ಕೃತಿ ಉತ್ಸವ ನಡೆಸಲು ಉದ್ದೇಶಿಸಿದ್ದು. ಈ ಬಾರಿಯ ವಿಶೇಷ ಅಂದರೆ ಬೃಹನ್ಮಠದ 24ನೆಯ ಅಧ್ಯಕ್ಷರಾಗಿದ್ದ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತ್ಯುತ್ಸವದ ವಿಶೇಷ ಸಂದರ್ಭ ಒದಗಿಬಂದಿರುವುದು. ಈ ಬಾರಿಯೂ ಕೃಷಿ, ಕೈಗಾರಿಕಾ ಮೇಳದೊಂದಿಗೆ ವಸ್ತು ಪ್ರದರ್ಶನವನ್ನು ಏರ್ಪಡಿಸುವ ಕುರಿತು ಇದೇ ತಿಂಗಳ 16ರ ಸೋಮವಾರ ಅಪರಾಹ್ನ 4 ಗಂಟೆಗೆ ಶ್ರೀ ಮುರುಘಾಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಶರಣಸಂಸ್ಕೃತಿ ಉತ್ಸವ ಸಮಿತಿಯ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಮಾಲೋಚನಾ ಸಭೆಯನ್ನು ಕರೆಯಲಾಗಿದೆ.
ಕೃಷಿಕರು, ರೈತಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕೃಷಿ ಚಟುವಟಿಕೆಯ ಬಗ್ಗೆ ಆಸಕಿವುಳ್ಳವರು, ವ್ಯವಸಾಯೋತ್ಪನ್ನ ವಸ್ತುಗಳ ಮಾರಾಟಗಾರರು ಸಭೆಗೆ ಆಗಮಿಸಿ ಸೂಕ್ತ ಸಲಹೆ ಸಹಕಾರ ನೀಡುವುದರ ಮೂಲಕ ಈ ವರ್ಷದ ಕೃಷಿ ಕೈಗಾರಿಕಾ ಮೇಳ ಹಾಗೂ ವಸ್ತು ಪ್ರದರ್ಶನವನ್ನು ಯಶಸ್ವಿಯಾಗಿ ಸಂಘಟಿಸಲು ಸಹಕರಿಸಬೇಕೆಂದು ಸಂಘಟಕ ಪಿ. ವೀರೇಂದ್ರ ಕುಮಾರ್ ದೂ. 9845396588 ಕೋರಿದ್ದಾರೆ.