top of page

ಗಿಲಿಕೇನಹಳ್ಳಿಯಲ್ಲಿ ನಡೆದ ಅನುಭಾವ ಶ್ರಾವಣ

10 Aug 2024

ವ್ಯಕ್ತಿಗೆ ಸಾವು ಸಹಜ. ಸತ್ತ ನಂತರವೂ ಆತ ಮಾಡಿದ ಘನತೆವೆತ್ತ ಸಮಾಜಮುಖಿ ಕಾರ್ಯಗಳ ಮೂಲಕ ಸದಾ ನಮ್ಮೊಡನಿರುತ್ತಾರೆ. ಅಂಥವರ ಸಾಲಿಗೆ ಚಿತ್ರದುರ್ಗ ಬೃಹನ್ಮಠದ ಶೂನ್ಯಪೀಠ ಹಾಗೂ ಮುರುಗಿ ಪರಂಪರೆಯ ಮಹಾನುಭಾವರಿದ್ದು, ಅವರ ಸಾಧನೆಯು ಚಿರಸ್ಮರಣೀಯ ಎಂದು ಗುರುಮಠಕಲ್‌ನ ಖಾಸಾ ಮುರುಘಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿಗಳು ಸ್ಮರಿಸಿದರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಿಂದ ಹೊಳಲ್ಕೆರೆ ತಾಲ್ಲೂಕು ಗಿಲಿಕೇನಹಳ್ಳಿ ಗ್ರಾಮದಲ್ಲಿ ನಡೆದ ಅನುಭಾವ ಶ್ರಾವಣದ 3ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ಸರ್ವಕ್ಷೇತ್ರಗಳಲ್ಲಿ ಶ್ರೀಮಠದ ಗುರುತರವಾದ ಕೊಡುಗೆ ಕಾಣಬಹುದಾಗಿದೆ. ಹಾಗಾಗಿ ಈ ಗ್ರಾಮವೂ ಸಹ ಪೀಠ ಪರಂಪರೆಯ ಜತೆಗೆ ಗುರುತಿಸಿಕೊಂಡಿರುವುದು ಸಹಿತವಾಗಿದೆ ಎಂದು ನುಡಿದರು.
ಜನಮಾನಸದಲ್ಲಿ ಮುರುಘಾಮಠವು ಮುರಿಗಿಮಠವೆಂದೇ ಜನಜನಿತವಾಗಿದೆ. ಸಾರ್ವಜನಿಕರ ಹಿತಕ್ಕಾಗಿಯೇ ಶ್ರೀಮಠದ ಎಲ್ಲ ಕಾರ್ಯಗಳು ಯೋಜನೆಗಳು ಇವೆ. ಮಹಾತ್ಮರನ್ನು ನೆನೆಯುವ ಈ ಶ್ರಾವಣ ಒಳ್ಳೆಯದನ್ನೇ ಶ್ರವಣ ಮಾಡಿಕೊಳ್ಳಲು ಇರುವುದು ಎಂದು ರಾವಂದೂರು ಮುರುಘಾಮಠದ ಶ್ರೀ ಮೋಕ್ಷಪತಿ ಸ್ವಾಮಿಗಳು ತಿಳಿಸಿದರು.
ಡಾ. ಬಸವಪ್ರಭು ಸ್ವಾಮಿಗಳು ಮಾತನಾಡಿ, ಗಣ್ಯ ಪರಂಪರೆ ಹೊಂದಿರುವ ಮುರುಘಾಮಠವು ಸಾಮಾಜಿಕ, ಧಾರ್ಮಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತ ಬಂದಿದೆ. ಶ್ರೀಮಠವು ನಾಡಿನಾದ್ಯಂತ ಸ್ಥಾಪಿಸಿರುವ ಹಾಸ್ಟೆಲ್‌ಗಳಲ್ಲಿದ್ದು ಓದಿದವರು ಸಮಾಜದಲ್ಲಿ ಅತ್ಯುನ್ನತ ಸ್ಥಾನದಲ್ಲಿರುವು ಈ ನಾಡಿಗೆ ಶೋಭೆ ತರುವ ವಿಚಾರವೆಂದರು.
ಮುರುಘಾಮಠ ಎಂದರೆ ಅದೊಂದು ಶಕ್ತಿಪೀಠ, ಮುರಿಗಿ ಶಾಂತವೀರ ಸ್ವಾಮಿಗಳ ಗದ್ದುಗೆ ಪವಾಡ ಸದೃಶವಾದದ್ದು ಎಂದೇ ಜನ ಭಾವಿಸಿದ್ದಾರೆ. ಜನ ಯಾವುದನ್ನು ಸುಲಭವಾಗಿ ಪರಿಗಣಿಸಬಾರದು ಮತ್ತು ಅಲಕ್ಷ್ಯ ವಹಿಸಬಾರದು. ಅರಿತು ನಡೆದರೆ ಆರು ಪಟ್ಟ ಮರೆತು ನಡೆದರೆ ಮೂರೇ ಅಥವಾ ಮುಗಿದ ಪಟ್ಟ ಎನ್ನುವ ಮಾತಿದೆ. ನಾವು ಜೀವನದಲ್ಲಿ ಅರಿತು ನಡೆಯಲಿಕ್ಕೆ ಮುರುಘಾಮಠವೇ ಸಾಕ್ಷಿ ಎಂದು ಮುರುಘಾಮಠ ಗುರುಕುಲದ ಶ್ರೀ ಮುರುಘಶ ಸ್ವಾಮಿಗಳು ಹೇಳಿದರು.
ಶ್ರೀಮುರುಘಾಮಠ ಮತ್ತು ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಮಾತನಾಡಿ, ಸಾಮಾಜಿಕ ಕಳಕಳಿಯೇ ಮುರುಘಾಮಠದ ಮೂಲ ಧೈಯವಾಗಿತ್ತು. ಅದು ಈಗಲೂ ನಡೆದಿದೆ ಎಂದು ನುಡಿದರು.
ಬಸವಕಲ್ಯಾಣದ ಶಿವಕುಮಾರ ಸ್ವಾಮಿಗಳು, ಒಂಟಿಕುಂಬ ಮುರುಘಾಮಠದ ಶ್ರೀ ತಿಪ್ಪೇರುದ್ರ ಸ್ವಾಮಿಗಳು, ಕಲ್ಕೆರೆಯ ಶ್ರೀ ಪೂರ್ಣಾನಂದ ಸ್ವಾಮಿಗಳು ವೇದಿಕೆಯಲ್ಲಿದ್ದರು.
ಮುರಿಗೆ ಶಾಂತವೀರ ಸ್ವಾಮಿಗಳ ಕಾಲದಿಂದ ಸಾಗಿಬಂದಿರುವ ಗುರುಪರಂಪರೆಯ ಒಂದನೇಯ ಮುರಿಗೆ ಶಾಂತವೀರ ಸ್ವಾಮಿಗಳಿಂದ ಹಿಡಿದು ಒಟ್ಟು ಪೀಠ ಪರಂಪರೆಯ ಇಪ್ಪತ್ತು ಪೀಠಾಧೀಶರ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕೆಲಸಗಳನ್ನು ಅಲ್ಲಮಪ್ರಭು ಸಂಶೋಧನಾ ಕೇಂದ್ರದ ಡಾ. ವಿ. ನಾಗರಾಜ್ ಸವಿಸ್ತಾರವಾಗಿ ಸಭೆಯಲ್ಲಿ ವಿವರಿಸಿದರು.
ಸಮಾರಂಭಕ್ಕು ಮುನ್ನ ಗ್ರಾಮದಲ್ಲಿ ಸಸಿ ನಡೆಲಾಯಿತು. ಬಸವೇಶ್ವರ ಆಸ್ಪತ್ರೆಯ ತಜ್ಞವೈದ್ಯರ ತಂಡ ಗ್ರಾಮದ 166 ಜನರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿ, ಔಷಧಿ ವಿತರಣೆ ಮಾಡಿದರು.
ಸಮಾರಂಭದ ಆರಂಭಕ್ಕೆ ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ರಂಗಸ್ವಾಮಿ ಸ್ವಾಗತಿಸಿದರು. ಪ್ರಶಾಂತ್ ಕಾಠ್ಯಕ್ರಮ ನಿರೂಪಿಸಿದರು.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page