top of page

ಗುರುವಂದನಾ ಕಾರ್ಯಕ್ರಮ

12 Sept 2024

ಚಿತ್ರದುರ್ಗ, ಸೆ. 12 ಇದೇ 14ರಂದು ಶನಿವಾರ ಬೆಳಗ್ಗೆ 10.30ಗಂಟೆಗೆ ಬಸವೇಶ್ವರ ಮೆಡಿಕಲ್ - ಕಾಲೇಜು ಆಡಿಟೋರಿಯಂನಲ್ಲಿ ಎಸ್.ಜೆ.ಎಂ. ಪಾಲಿಟೆಕ್ನಿಕ್‌ನ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ನೂರಕ್ಕು ಹೆಚ್ಚು ನಿವೃತ್ತ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಂವರ್ಗದವರಿಗೆ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ದಿವ್ಯಸಾನ್ನಿಧ್ಯ ವಹಿಸುವರು. ಮುಖ್ಯಅತಿಥಿಗಳಾಗಿ ಆಡಳಿತ ಮಂಡಳಿ ಸದಸ್ಯರಾದ ಪಿ.ಎಸ್. ಶಂಕರ್, ಎಸ್.ಎನ್. ಚಂದ್ರಶೇಖರ್ ಭಾಗವಹಿಸುವರು. ಎಸ್.ಜೆ.ಎಂ. ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯರಾದ ಎಸ್.ವಿ. ರವಿಶಂಕರ್ ಅಧ್ಯಕ್ಷತೆ ವಹಿಸುವರು. ಹಳೆಯ ವಿದ್ಯಾರ್ಥಿಯಾದ ಬಿ.ಪಿ. ಉಮಾಶಂಕರ್, ಅಪರ ಸಾರಿಗೆ ಆಯುಕ್ತರು (ಆಡಳಿತ), ಬೆಂಗಳೂರು, ಕಾಂಟ್ರ್ಯಾಕ್ಟರ್ ಎನ್. ಜಯಣ್ಣ, ಟಿ.ಎಸ್.ಎನ್. ಕನ್‌ಸ್ಟ್ರಕ್ಷನ್ಸ್, ಚಿತ್ರದುರ್ಗ ಇವರುಗಳು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page