
2 Jul 2025
ಚಿತ್ರದುರ್ಗದ ಬೃಹನ್ಮಠದಲ್ಲಿ
ವಚನ ಪಿತಾಮಹ, ಸಂಶೋಧಕ,ವಚನ ಸಂರಕ್ಷಣೆ ಮಾಡಿದ ಡಾ.ಫ.ಗು.ಹಳಕಟ್ಟಿ ಅವರ 145ನೇ ಜಯಂತ್ಯುತ್ಸವ
ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಇಂದು ಮುಂಜಾನೆಯ 8-30ಗಂಟೆಯಿಂದ ವಚನ ಪಿತಾಮಹ, ಸಂಶೋಧಕ,ವಚನ ಸಂರಕ್ಷಣೆ ಮಾಡಿದ ಡಾ.ಫ.ಗು.ಹಳಕಟ್ಟಿ ಅವರ 145ನೇ ಜಯಂತ್ಯುತ್ಸವ ನಿಮಿತ್ತ ವಚನ ಸಾಹಿತ್ಯ ಸಂರಕ್ಷಣೆಯ ದಿನ ಆಚರಣೆ ಏರ್ಪಡಿಸಲಾಗಿತ್ತು.
ಅಂದಿನ ಸಮಾರಂಭದ ಸಾನಿಧ್ಯವನ್ನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ನಡೆಯಿತು.
ಫ.ಗು.ಹಳಕಟ್ಟಿಯವರ ವ್ಯಕ್ತಿತ್ವ ಮತ್ತು ಸಾಧನೆ ಕುರಿತಾಗಿ ವಿಷಯಾವಲೋಕನವನ್ನ, ಮೈಸೂರಿನ ಲೇಖಕ, ಪ್ರಕಾಶಕ ಗಣೇಶ ಅಮಿನಗಡ ಅವರು ನಡೆಸಿಕೊಟ್ಟರು.ನಿಪ್ಪಾಣಿಯ ಮಲ್ಲಿಕಾರ್ಜುನ ಶ್ರೀಗಳು,ಶ್ರೀಮಠದ ಮುರುಘೇಂದ್ರ ಶ್ರೀಗಳು,ನಗರದ ವಿವಿಧ ಸಮಾಜಗಳ ಮುಖಂಡರುಗಳು,ಶ್ರೀಮಠದ ಅಭಿಮಾನಿ ಭಕ್ತರುಗಳು,ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು,ವಿದ್ಯಾರ್ಥಿಗಳು,ಸಿಬ್ಬಂದಿ,ಕವಿ,ಸಾಹಿತಿಗಳು ,ಮಹಿಳಾಪರ ಸಂಘದ ಪದಾಧಿಕಾರಿಗಳು ಸೇರಿದಂತೆ ಭಾಗವಹಿಸಿ ವಚನ ಪಿತಾಮಹರ ವ್ಯಕ್ತಿತ್ವ ಸಾಧನೆಯ ಚಿಂತನ ಆಲಿಸಿದರು.