
24 Sept 2024
ಚಿತ್ರದುರ್ಗ, ಸೆ. 24 ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ತ್ರಿವಿಧದಾಸೋಹ ತತ್ವದ ರೂವಾರಿ, ಶ್ರೀಮನ್ಮಹಾರಾಜ ನಿರಂಜನ ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತ್ಯುತ್ಸವ ವರ್ಷ 2024-25 ದಿನಾಂಕ-24-09-2024 ರಿಂದ 26-09-2024 ರವರೆಗೆ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಚಿತ್ರದುರ್ಗದ ಸುಮಾರು ಪ್ರತಿಷ್ಟಿತ ಕ್ರಿಕೆಟ್ ತಂಡಗಳು ಭಾಗವಹಿಸಿದ್ದು ನಾಕೌಟ್ ಮಾದರಿಯಲ್ಲಿ ಪಂದ್ಯಾವಳಿ ನಡೆಸಲಾಗುತ್ತಿದ್ದು, ಇಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಗೌ। ಅಧ್ಯಕ್ಷರಾದ ಸಿ. ನಾಗರಾಜ್, ಉಸ್ತುವಾರಿಗಳಾದ ರವಿಶಂಕರ್ ರೆಡ್ಡಿ, ಅಧ್ಯಕ್ಷರಾದ ಶ್ರೀರಾಮ್, ಪ್ರಧಾನ ಕಾರ್ಯದರ್ಶಿಗಳಾದ ಸೈಯ್ಯದ್ ಆನಿಸ್, ಗೊಪ್ಪೆ ಮಂಜುನಾಥ್, ಸಿರಾಜ್, ಮಂಜುನಾಥ್ ಹೆಚ್.ಎಮ್., ಜಿ.ದೇವೇಂದ್ರಪ್ಪ, ಸಯ್ಯದ್ ಖುದ್ದೂಸ್, ಪ್ರಕಾಶ್ ರಾಮಾನಾಯ್, ಬಿ.ಮಂಜುನಾಥ್, ಕಾರ್ತಿಕ್, ಹಳಿಯೂರು ನಾಗರಾಜ್, ಚೇತನ್‌ಕುಮಾರ್ ಕುಮ್ಮಿ, ಓಬಳೇಶ್ ನಾಯಕ, ವಿಜಯ್ ದೊಡ್ಡಾಲಗಟ್ಟ, ಪೈಲಟ್ ನಾಗರಾಜ್, ಶಂಕರಮೂರ್ತಿ, ಜೆ. ನಟರಾಜ್, ಮಂಜು ಮೆದೇಹಳ್ಳಿ ಮತ್ತಿತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




