top of page

ಜಯದೇವ ಜಂಗೀಕುಸ್ತಿ ನಡೆಸಲು ಸಭೆ

27 Sept 2024

ಚಿತ್ರದುರ್ಗ ಸೆ. 27. ನಗರದ ಐತಿಹಾಸಿಕ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಶರಣಸಂಸ್ಕೃತಿ ಉತ್ಸವದಲ್ಲಿ ಜಯದೇವ ಜಂಗೀ ಕುಸ್ತಿಯನ್ನು ಶ್ರೀಗಳವರ ಪ್ರಸ್ತುತ ಅವರ 150ನೇ ಜಯಂತ್ಯುತ್ಸವದ ಅಂಗವಾಗಿ ಅರ್ಥಪೂರ್ಣವಾಗಿ ನಡೆಸಲು ಸ್ವಾಮಿಗಳು, ಹಿರಿಯ ಪೈಲ್ವಾನರು, ಸಂಘಟಕರು ಸೇರಿದ ಪೂರ್ವಭಾವಿಸಭೆಯಲ್ಲಿಂದು ತೀರ್ಮಾನಿಸಲಾಯಿತು.
ಜಯದೇವ ಜಗದ್ಗುರುಗಳ 150ನೇ ವರ್ಷದ ಜಯಂತ್ಯುತ್ಸವವಾಗಿರುವ ಕಾರಣ ಅವರದೇ ಹೆಸರಿನಲ್ಲಿ ನಡೆಯುವ ಈ ಬಾರಿಯ ಜಯದೇವ ಜಂಗೀ ಕುಸ್ತಿ ವಿಶೇಷವಾಗಿ ಗಮನ ಸೆಳೆಯುವ ಪೈಲ್ವಾನರು ಅವರ ಅಮೋಘ, ಮನಮೋಹಕ ಸೆಣಸಾಟವನ್ನು ಜನ ನೋಡುವಂತಾಗಬೇಕು ಎಂದು ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಸದಸ್ಯರಾದ সে. ಬಸವಕುಮಾರ ಸ್ವಾಮಿಗಳವರು ಆಶಯ ವ್ಯಕ್ತಪಡಿಸಿದರು.
ಹಾಗೆಯೇ ಈ ವರ್ಷ ಆಹ್ವಾನಿತ ಮಹಿಳಾ ಕುಸ್ತಿ ಪಂದ್ಯಾವಳಿಯನ್ನು ನಡೆಸಲು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕುಸ್ತಿ ಪಂದ್ಯಾವಳಿಯ ವ್ಯವಸ್ಥಾಪಕರು, ನ್ಯಾಯವಾದಿಗಳು ಆದ ಪಾಥ್ಯರಾಜನ್, ಹಿರಿಯ ಪೈಲ್ವಾನ್‌ರುಗಳಾದ ಮರಡಿ ತಿಪ್ಪೇಸ್ವಾಮಿ, ಭರತಮೂರ್ತಿ, ಆಸಿಫ್ ಸೇರಿದಂತೆ ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ನಾಗರಾಜ್, ಕುಮಾರಸ್ವಾಮಿ, ಪ್ರಶಾಂತ್, ರಾಜನಾಯಕ್ ಸೇರಿದಂತೆ ನಗರದ ದೊಡ್ಡಗರಡಿ, ಸಣ್ಣಗರಡಿ, ಬುರುಜನಹಟ್ಟಿ ಹಾಗೂ ಮಠದಹಟ್ಟಿ ಮುರುಘರಾಜೇಂದ್ರ ಗರಡಿ ಮನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಪಂದ್ಯಾವಳಿಯ ಸಂಯೋಜಕ ಪಿ. ವೀರೇಂದ್ರ ಕುಮಾರ್ ಸ್ವಾಗತಿಸಿ, ನಿರೂಪಿಸಿದರು.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page