top of page

ಡಾಕ್ಟರೇಟ್ ಪದವಿಗೆ ಭಾಜನರಾದ ಡಾ. ಬಸವಪ್ರಭು ಸ್ವಾಮೀಜಿ ಅವರಿಗೆ ಸನ್ಮಾನ

8 Feb 2025

ನಗರದ ನೀಲಕಂಠೇಶ್ವರ ದೇವಸ್ಥಾನದಲ್ಲಿಂದು ವೀರಶೈವ ಸಮಾಜದ ವತಿಯಿಂದ
ಕುವೆಂಪು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಗೆ ಭಾಜನರಾದ ಡಾ. ಬಸವಪ್ರಭು ಸ್ವಾಮೀಜಿ
ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶ್ರೀಗಳು ಡಾ. ಸಣ್ಣರಾಮಪ್ಪ ಅವರ ಮಾರ್ಗದರ್ಶನದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರ
ಸಾಹಿತ್ಯ ಮತ್ತು ಸಂಸ್ಕೃತಿ ವಿಷಯ ಮೇಲೆ ಪಿಎಚ್.ಡಿ. ಮಹಾಪ್ರಬಂಧವನ್ನು ಮಂಡಿಸಿದ್ದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಬಸವಪ್ರಭು ಸ್ವಾಮಿಗಳು, ಜೀವನದಲ್ಲಿ ಋಣಾನುಬಂಧ ಇರುತ್ತದೆ.
ತಂದೆ, ತಾಯಿ, ಗುರುಗಳ ಋಣ ಎಲ್ಲರಲ್ಲೂ ಇರುತ್ತೆ. ನನ್ನ ಗುರುಗಳನ್ನು ನಾನು ಯಾವತ್ತೂ
ಮರೆಯುವುದಿಲ್ಲ. ಓದಲು ಮುರುಘಾಮಠಕ್ಕೆ ಬಂದೆ. ನಂತರದಲ್ಲಿ ನನಗೆ ದಾವಣಗೆರೆ ವಿರಕ್ತಮಠದ
ಜವಾಬ್ದಾರಿ ವಹಿಸಿದರು. ನಮ್ಮ ಪೂರ್ವಿಕರಿಗೆ ಶ್ರೀಮಠದ ಬಗ್ಗೆ ಅಪಾರ ಭಕ್ತಿ ಇತ್ತು. ನನ್ನನ್ನು
ಸಮಾಜದವರು ಗುರುತಿಸಿ ಸನ್ಮಾನಿಸಿರುವುದು ಅತೀವ ಸಂತಸವನ್ನುಂಟು ಮಾಡಿದೆ. ನನಗೆ ಭಕ್ತಾದಿಗಳೇ
ದೇವರು ಎಂದು ಹೇಳಿದರು.
ವೀರಶೈವ ಸಮಾಜದ ಅಧ್ಯಕ್ಷ ಹೆಚ್.ಎನ್. ತಿಪ್ಪೇಸ್ವಾಮಿ ಮಾತನಾಡಿದರು. ಎಸ್.ಜೆ.ಎಂ. ಬ್ಯಾಂಕ್‌ನ
ಮ್ಯಾನೇಜರ್ ಟಿ.ಕೆ. ರಾಜಶೇಖರ್, ವೈಜ್ಞಾನಿಕ ಪರಿಷತ್‌ನ ನಾಗರಾಜ್ ಸಂಗಮ್, ವಿವಿಧ ಸಂಘಟನೆಗಳು
ಶ್ರೀಗಳನ್ನು ಸನ್ಮಾನಿಸಿದರು.
ಕಾರ್ಯದರ್ಶಿ ಪಿ.ವೀರೇಂದ್ರಕುಮಾರ್, ಸಹಕರ‍್ಯದರ್ಶಿ ಜಿತೇಂದ್ರ ಎನ್.ಹುಲಿಕುಂಟೆ, ನಿರ್ದೇಶಕರಾದ
ಎಸ್.ವಿ. ನಾಗರಾಜಪ್ಪ ಸಿದ್ದಾಪುರ, ಡಿ.ಎಸ್. ಮಲ್ಲಿಕಾರ್ಜುನ, ಎಸ್. ಷಡಾಕ್ಷರಯ್ಯ, ಎಸ್.ವಿ.ಕೊಟ್ರೇಶ್,
ಡಿ.ವಿ.ಎಸ್. ಪ್ರದೀಪ್, ಕೆ.ಎನ್. ವಿಶ್ವನಾಥಯ್ಯ, ನಿರಂಜನ ದೇವರಮನೆ, ಚಿನ್ಮಯಾನಂದ, ಶ್ರೀಮತಿ ಲತಾ
ಉಮೇಶ್, ದಾವಣಗೆರೆ ಟ್ರಸ್ಟಿಗಳು ಇದ್ದರು.
ಜಿತೇಂದ್ರ ಎನ್.ಹುಲಿಕುಂಟೆ ಸ್ವಾಗತಿಸಿದರು.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page