top of page

1 Jul 2025
ಚಿತ್ರದುರ್ಗ : ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿಂದು (2-7-2025)ರ ಬುಧವಾರ ಮುಂಜಾನೆ 8-30ಗಂಟೆಗೆ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ 145ನೇ ಜಯಂತ್ಯುತ್ಸವ ಮತ್ತು ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಜರುಗಲಿದೆ.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ವಿದ್ಯಾಪೀಠದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಯೋಗಿ. ಸಿ. ಕಳಸದ್, ಐ.ಎ.ಎಸ್.(ನಿ.) ಇವರು ಅಧ್ಯಕ್ಷತೆ ವಹಿಸುವರು. ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಮೈಸೂರಿನ ಲೇಖಕ, ಪ್ರಕಾಶಕ ಗಣೇಶ ಅಮೀನಗಡ ಅವರು ಫ.ಗು.ಹಳಕಟ್ಟಿಯವರ ವ್ಯಕ್ತಿತ್ವ ಮತ್ತು ಸಾಧನೆ ಕುರಿತಾಗಿ ವಿಷಯಾವಲೋಕನ ಮಾಡುವರು. ಸದಸ್ಯರುಗಳಾದ ಡಾ. ಪಿ.ಎಸ್. ಶಂಕರ್ ಹಾಗೂ ಚಂದ್ರಶೇಖರ್ ಎಸ್.ಎನ್. ಇವರುಗಳು ಉಪಸ್ಥಿತರಿರುವರು.
bottom of page