top of page

ದಿನಾಂಕ:08.10.2024 ಮಂಗಳವಾರದ ಕಾರ್ಯಕ್ರಮಗಳು

7 Oct 2024

ಶ್ರೀ ಜಯದೇವ ಜಗದ್ಗುರುಗಳ 150ನೇ ಜಯಂತ್ಯುತ್ಸವ ಹಾಗೂ ಶರಣಸಂಸ್ಕೃತಿ ಉತ್ಸವ -2024
ದಿನಾಂಕ:08.10.2024 ಮಂಗಳವಾರದ ಕಾರ್ಯಕ್ರಮಗಳು
ಬೆಳಿಗ್ಗೆ 7.30 ಗಂಟೆಗೆ ಬಸವತತ್ತ್ವ ಧ್ವಜಾರೋಹಣ ಕಾರ್ಯಕ್ರಮದ ಸಮ್ಮುಖವನ್ನು ಮೈಸೂರು ಶ್ರೀ ಸಿದ್ದರಹಳ್ಳಿ ಶ್ರೀ ಪಾರಮಾರ್ಥ ಗವಿಮಠದ ಶ್ರೀ ನಿ.ಪ್ರ.ಸ್ವ.ಮಲ್ಲಿಕಾರ್ಜುನ ಸ್ವಾಮಿಗಳು ವಹಿಸಲಿದ್ದು, ಬಸವ ಸಮಿತಿ ಅಧ್ಯಕ್ಷರಾದ ಶ್ರೀ ಅರವಿಂದ ಜತ್ತಿ ಬಸವತತ್ತ್ವ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಬೆಳಿಗ್ಗೆ 8.00 ಗಂಟೆಗೆ ಅನುಭವಮಂಟಪದಲ್ಲಿ ಶಿವಯೋಗ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಇಳಕಲ್ ವಿಜಯಮಹಾಂತೇಶ್ವರ ಮಠದ ಶ್ರೀ ನಿ.ಪ್ರ.ಸ್ವ.ಗುರುಮಹಾಂತ ಸ್ವಾಮಿಗಳು ನಡೆಸಿಕೊಡಲಿದ್ದು, ಕಾರ್ಯಕ್ರಮದ ಸಮ್ಮುಖವನ್ನು ಕೊಡ್ಲಿಪೇಟೆ ಶ್ರೀ ಕಲ್ಲಳ್ಳಿಮಠದ ಶ್ರೀ ರುದ್ರಮುನಿ ಸ್ವಾಮಿಗಳು, ಮೇಟಿಕುರ್ಕೆ ಶ್ರೀವಿರಕ್ತಮಠದ ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮಿಗಳು, ಚಿತ್ರದುರ್ಗ ಶ್ರೀ ಛಲವಾದಿ ಗುರುಪೀಠದ ಶ್ರೀ ಬಸವ ನಾಗಿದೇವ ಸ್ವಾಮಿಗಳು, ತಂಗಡಗಿ ಹಡಪದ ಅಪ್ಪಣ್ಣ ಗುರುಪೀಠದ ಶ್ರೀ ಅನ್ನದಾನಿ ಭಾರತಿಪ್ರಿಯ ಅಪ್ಪಣ್ಣ ಸ್ವಾಮಿಗಳು, ತೆಲಸಂಗ ಶ್ರೀ ಕುಂಬಾರ ಗುಂಡಯ್ಯ ಗುರುಪೀಠದ ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮಿಗಳು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಜಯಪುರ ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ.ಮಹಾಂತೇಶ ಬಿರದಾರ, ಸಿಂಧನೂರು ಬಸವಕೇಂದ್ರದ ಶ್ರೀ ವೀರಭದ್ರಪ್ಪ ಕುರಕುಂದಿ, ಗದಗದ ಬಸವತತ್ತ್ವ ಚಿಂತಕರಾದ ಶ್ರೀ ಅಶೋಕ ಬರಗುಂಡಿ, ಬೀದ‌ರ್ ಬಸವಕೇಂದ್ರದ ಶ್ರೀ ಶರಣಪ್ಪ ಮಿಠಾರೆ, ಹಳಿಯಾಳ ಬಸವಕೇಂದ್ರದ ಶ್ರೀಮತಿ ಸುಮಂಗಲಾ ಅಂಗಡಿ, ಕಲಬುರ್ಗಿ ಜಾ.ಲಿಂ.ಮಹಿಳಾ ಘಟಕದ ಅಧ್ಯಕ್ಷೆ ಶರಣೆ ನಳಿನ ಮಹಾಗಾಂವಕರ ಆಗಮಿಸುವರು.
ಬೆಳಿಗ್ಗೆ 10.00ಗಂಟೆಗೆ ಶ್ರೀಮಠದ ಆವರಣದಲ್ಲಿ ಕೃಷಿ ಮತ್ತು ಕೈಗಾರಿಕೆ ವಸ್ತು ಪ್ರದರ್ಶನವನ್ನು ಸಾರಿಗೆ ಸಚಿವ ಶ್ರೀ ರಾಮಲಿಂಗಾ ರೆಡ್ಡಿ ಉದ್ಘಾಟಿಸುವರು.
ಬೆಳಿಗ್ಗೆ 10.00ಗಂಟೆಗೆ ಜೋಡೆತ್ತು ಪ್ರದರ್ಶನ.
ಬೆಳಿಗ್ಗೆ 10.30 ಗಂಟೆಗೆ ಅನುಭವಮಂಟಪದಲ್ಲಿ ಕೃಷಿ-ಸಮಸ್ಯೆ ಮತ್ತು ಪರಿಹಾರೋಪಾಯಗಳು ಕುರಿತಾದ ಕೃಷಿಮೇಳದ ಸಾನ್ನಿಧ್ಯವನ್ನು ಶ್ರೀ ಸಿದ್ಧಗಂಗಾ ಕ್ಷೇತ್ರದ ಶ್ರೀ ನಿ.ಪ್ರ.ಸ್ವ. ಸಿದ್ಧಲಿಂಗ ಮಹಾಸ್ವಾಮಿಗಳು, ಹೊಸದುರ್ಗ ಶ್ರೀ ಕುಂಚಿಟಿಗ ಮಹಾಸಂಸ್ಥಾನದ ಜಗದ್ಗುರು ಡಾ.ಶಾಂತವೀರ ಮಹಾಸ್ವಾಮಿಗಳು ವಹಿಸಲಿದ್ದು, ಕೃಷಿಮೇಳವನ್ನು ಕೃಷಿ ಸಚಿವ ಶ್ರೀ ಎನ್ ಚೆಲುವರಾಯಸ್ವಾಮಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್, ತೋಟಗಾರಿಕೆ ಸಚಿವರಾದ ಶ್ರೀ ಎಸ್.ಎಸ್.ಮಲ್ಲಿಕಾರ್ಜುನ್, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಇಲಾಖೆ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪುರ, ಪಾಂಡವಪುರ ಶಾಸಕ ಶ್ರೀ ದರ್ಶನ್ ಪುಟ್ಟಣ್ಣಯ್ಯ, ನಿವೃತ್ತ ಐ.ಎ.ಎಸ್. ಅಧಿಕಾರಿ ಶ್ರೀ ಆಶೋಕ ದಳವಾಯಿ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಪ್ರಕಾಶ್ ಕಮ್ಮರಡಿ, ಪ್ರಗತಿಪರ ರೈತರಾದ ಶ್ರೀ ತೇಜಸ್ವಿ ವಿ.ಪಟೇಲ್, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಅಭಿಯಂತರರಾದ ಶ್ರೀ ಎಫ್.ಎಚ್.ಲಮಾಣಿ, ರಾಜ್ಯ ರೈತ ಸಂಘ
ಹಸಿರುಸೇನೆಯ ಅಧ್ಯಕ್ಷರಾದ ಶ್ರೀ ಸಿದ್ಧವೀರಪ್ಪ ಈಚಗಟ್ಟ, ರಾಜ್ಯ ರೈತ ಸಂಘದ ಅಧ್ಯಕ್ಷರಾದ ಶ್ರೀ ಬಡಗಲಪುರ ನಾಗೇಂದ್ರ ಆಗಮಿಸುವರು. ಕಾರ್ಯಕ್ರಮದಲ್ಲಿ ಹಿರಿಯೂರಿನ ರೈತ ಮುಖಂಡ ಶ್ರೀ ಸಿ.ಸಿದ್ಧರಾಮಪ್ಪ, ಪ್ರಗತಿಪರ ರೈತರುಗಳಾದ ದೊಣೆಹಳ್ಳಿ ಶ್ರೀ ವೈ.ಎನ್.ಸಂತೋಷ್ ಕುಮಾರ್, ಗಜ್ಜಗನಹಳ್ಳಿ ಶ್ರೀಮತಿ ಪಿ.ಭಾಗ್ಯಮ್ಮ ಕುರಕಾಲಹಟ್ಟಿ ಶ್ರೀ ಟಿ.ರವಿಕುಮಾರ್ ಇವರುಗಳಿಗೆ ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಸಿದ್ದಯ್ಯನಕೋಟೆ ವಿಜಯಮಹಾಂತೇಶ್ವರ ಕಲಾಬಳಗದವರಿಂದ ಸಂಗೀತ, ನಾಟ್ಯರಂಜನಿ ನೃತ್ಯ ಕಲಾಕೇಂದ್ರದವರಿಂದ ನೃತ್ಯ ಪ್ರದರ್ಶನ, ಕು.ಹಂಸ ಹಾಗೂ ಎಸ್.ಜೆ.ಎಂ. ಕನ್ನಡ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ.
ಸಂಜೆ 6.00 ಗಂಟೆಗೆ ಅನುಭವ ಮಂಟಪದಲ್ಲಿ ಶ್ರೀ ಜಯದೇವ ಜಗದ್ಗುರುಗಳ 150ನೇ ಜಯಂತ್ಯುತ್ಸವದ
ಸಾನ್ನಿಧ್ಯವನ್ನು ನಿಡಸೋಸಿ ಶ್ರೀ ದುರದುಂಡೇಶ್ವರ ಸಿದ್ಧ ಸಂಸ್ಥಾನಮಠದ ಶ್ರೀ ಜಗದ್ಗುರು ಪಂಚಮ
ಶಿವಲಿಂಗೇಶ್ವರ ಮಹಾಸ್ವಾಮಿಗಳು, ಸಾಣೇಹಳ್ಳಿ ಶ್ರೀ ತರಳಬಾಳು ಬೃಹನ್ಮಠ ಶಾಖಾಮಠದ
ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ
ಉಸ್ತುವಾರಿ ಸಚಿವ ಶ್ರೀ ಡಿ.ಸುಧಾಕರ್, ಅರಣ್ಯ ಸಚಿವ ಶ್ರೀ ಈಶ್ವರ ಖಂಡ್ರೆ, ಶಾಸಕ ಶ್ರೀ ಕೆ.ಸಿ.ವೀರೇಂದ್ರ
(ಪಪ್ಪಿ), ಮುಖ್ಯಮಂತ್ರಿಗಳ ಸಲಹೆಗಾರರು ಹಾಗೂ ಶಾಸಕರಾದ ಶ್ರೀ ಬಿ.ಆರ್.ಪಾಟೀಲ್, ಅಥಣಿ
ಶಾಸಕರು ಹಾಗೂ ಮಾಜಿ ಸಚಿವ ಶ್ರೀ ಲಕ್ಷ್ಮಣ ಎಂ ಸವದಿ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ
ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಶ್ರೀ ಟಿ ರಘುಮೂರ್ತಿ, ಮೊಳಕಾಲ್ಕೂರು ಶಾಸಕ ಶ್ರೀ ಎನ್
ವೈ ಗೋಪಾಲಕೃಷ್ಣ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕರು ಶ್ರೀ ಬಿ
ಜಿ ಗೋವಿಂದಪ್ಪ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ ಮಹೇಶ್ ಜೋಶಿ, ವಿಧಾನಪರಿಷತ್
ಸದಸ್ಯ ಶ್ರೀ ಡಿ.ಟಿ.ಶ್ರೀನಿವಾಸ್, ಇಂಡಿ ಶಾಸಕ ಶ್ರೀ ಯಶವಂತರಾಯಗೌಡ ಪಾಟೀಲ್, ಕೆ.ಪಿ.ಸಿ.ಸಿ.
ಉಪಾಧ್ಯಕ್ಷರು ಹಾಗೂ ಮಾಜಿ ಸಚಿವ ಶ್ರೀ ಹೆಚ್ ಆಂಜನೇಯ ಆಗಮಿಸಲಿದ್ದು, ಬೆಂಗಳೂರು
ಶ್ರೀ ಜಯದೇವ ವಿದ್ಯಾರ್ಥಿನಿಲಯದ ಆಡಳಿತಮಂಡಳಿ ಸದಸ್ಯರು ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಡಾ.ಶಾಮನೂರು ಶಿವಶಂಕರಪ್ಪರವರನ್ನು,
ಬೆಂಗಳೂರಿನ ಕೆ.ವಿ.ವಿ. ಸಂಸ್ಥೆ, ಶ್ರೀ ಜಯದೇವ ವಿದ್ಯಾರ್ಥಿನಿಲಯದ ಶ್ರೀ ಬಿ.ಎಸ್.ಪರಮಶಿವಯ್ಯ,
ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ನಾಡೋಜ ಗೊ.ರು.ಚನ್ನಬಸಪ್ಪ, ಜಯದೇವ
ವಿದ್ಯಾರ್ಥಿನಿಲಯದ ಹಳೆಯ ವಿದ್ಯಾರ್ಥಿ ಎನ್‌ಜಿಇಎಫ್ ಲಿ. ನಿವೃತ್ತ ಜನರಲ್ ಮ್ಯಾನೇಜರ್ ಶ್ರೀ ಎನ್
ಟಿ ಸಿದ್ಧರಾಮಣ್ಣನವ‌ರ್ ಇವರುಗಳನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಬಾಪೂಜಿ ವಿದ್ಯಾ
ಸಂಸ್ಥೆಯ ವಿದ್ಯಾರ್ಥಿಗಳು, ರಂಗಭಂಡಾರ ಕಲಾ ತಂಡದವರು ನೃತ್ಯ ಪ್ರದರ್ಶನ ನೀಡಲಿದ್ದು, ಜೀ ಕನ್ನಡ
ಟಿವಿ ಹೆಸರಾಂತ ಕಲಾವಿದರಾದ ಸುಪ್ರೀತ್ ಫಾಲ್ಗುಣ, ಶರದ್ಧಿ ಪಾಟೀಲ್ ಮತ್ತು ಡಾ.ಶ್ರಾವ್ಯರವರಿಂದ
ಸಂಗೀತ ಕಾರ್ಯಕ್ರಮ ಹಾಗೂ ಕೆ.ಜಿ.ಎಫ್. ಚಲನಚಿತ್ರ ಖ್ಯಾತಿಯ ಮೋಹನ್ ಮಾಸ್ಟರ್ ತಂಡದವರಿಂದ
ನೃತ್ಯ ಪ್ರದರ್ಶನ.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page