top of page

ದಿನಾಂಕ 07.10.2024ರ ಸಹಜ ಶಿವಯೋಗ ಕಾರ್ಯಕ್ರಮ ವರದಿ

7 Oct 2024

ಭೌತಿಕ ಶ್ರೀಮಂತಿಕೆಗಿಂತ ಹೃದಯ ಶ್ರೀಮಂತಿಕೆ ದೊಡ್ಡದು ಎಂದು ದಾವಣಗೆರೆಯ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮಿಜಿ ತಿಳಿಸಿದರು. ಅವರು ದಿನಾಂಕ 0710.2024 ರ ಬೆಳಿಗ್ಗೆ 7.00ಗಂಟೆಗೆ ನಡೆದ ಸಹಶಿವಯೋಗ ಪ್ರಾತ್ಯಕ್ಷಿಕ ನಡೆಸಿಕೊಟ್ಟು ಮಾತನಾಡುತ್ತಾ ಮಾನವ ಜೀವನದಲ್ಲಿ ಮೂರು ರೀತಿಯ ಜನರಿದ್ದಾರೆ. ಅದರಲ್ಲಿ ಮೊದಲನೆಯವರು ಅತೃಪ್ತರು ಎಷ್ಟು ಗಳಿಸಿದರು ಅವರಿಗೆ ತೃಪ್ತಿ ಎಂಬುದು ಇರುವುದಿಲ್ಲ. ಇವರಿಗೆ ಇನ್ನೂ ಬೇಕೇ ಬೇಕು ಎನ್ನುವ ಭಾವನೆ ಸದಾ ಇರುತ್ತದೆ. ಎರಡನೇಯವರು ಅಲ್ಪ ತೃಪ್ತರು ಇರುವುದರಲ್ಲಿ ಜೀವನ ಮಾಡುವವರು ಇವರು. ಯಾವುದಕ್ಕು ಅತಿ ಆಸೆ ಪಡದೇ ಇದ್ದುದ್ದರಲ್ಲಿ ಬದುಕುವವರು. ಮೂರನೆಯವರು ಸಂತೃಪರು. ನಿತ್ಯ ತೃಪ್ತರು. ಹಾಗಾದರೇ ಯಾರು ಸಂತಪರು?, 12 ನೇಯ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವವನ್ನು ನೋಡಿ ಇಡೀ ಭಾರತಾದಾಂದ್ಯಂತ ಇರುವ ಶರಣ-ಶರಣೆಯರು ಅನುಭವ ಮಂಟಪ ನೀಡಿದರು. ಇದರಿಂದ ಬಸವಣ್ಣನವರ ವ್ಯಕ್ತಿತ್ವ ಎಷ್ಟು ದೊಡ್ಡದಿರಬಹುದು ಎಂದು ಅರ್ಥವಾಗುತ್ತದೆ. ಮಾಳಿಗೆ ಮಾರಯ್ಯನನ್ನು ಪರೀಕ್ಷಿಸಲು ಬಸವಣ್ಣನವರು ಬಂಗಾರದ ನಾಣ್ಯಗಳ ಚೀಲವನ್ನು ಬಿಟ್ಟು ಬಂದಿರುತ್ತಾರೆ. ಅದನ್ನು ನೋಡಿದ ಮಾಳಿಗೆ ಮಾರಯ್ಯ ಇದು ನಮಗೆ ಸೇರಿದ್ದಲ್ಲ ನಮಗೆ ಬೇಡವೇ ಬೇಡ ಎಂದುಕೊಂಡನು. ಶಿವಶರಣರು ನಮ್ಮದಲ್ಲದ ವಸ್ತುಗಳು ಕಸವೆಂದು ಹೇಳಿದ್ದು ನೆನಪಿಸಿಕೊಂಡನು. ನಮ್ಮ ಮನಸ್ಸು ಎಷ್ಟು ಪರಿಪೂರ್ಣವಾಗಿದೆ ಎಂದು ತಿಳಿಯಲು ಬಸವಣ್ಣನವರು ಮಾಡಿದ ಪರೀಕ್ಷೆ ಇದು ಎಂದು ತನ್ನ ಹೆಂಡತಿಗೆ ಹೇಳಿದನು. ಜೀವನದಲ್ಲಿ ಅತೃಪ್ತಿಗಿಂತ, ಅಲ್ಪ ತೃಪ್ತಿಗಿಂತ ಸಂತೃಪ್ತಿಯನ್ನು ಗಳಿಸಬೇಕು. ಬಸವಣ್ಣನವರು ನೀಡಿರುವ ಇಷ್ಟಲಿಂಗದ ಮುಖಾಂತರ ಇಲ್ಲ ಶರಣ-ಶರಣೆಯರು ಸಂತೃಪ್ತಿಯನ್ನು ಗಳಿಸಿದರು. 12ನೇಯ ಶತಮಾನದಲ್ಲಿ ಶರಣರು ಕಲ್ಯಾಣದಲ್ಲಿರುವ ಸಣ್ಣ ಸಣ್ಣ ಗವಿಗಳಲ್ಲಿಯೇ ಜೀವನ ಮಾಡುತ್ತಿದ್ದರು. ದೊಡ್ಡ ದೊಡ್ಡ ಬಂಗಲೆಯಲ್ಲಿ ವಾಸ ಮಾಡುವ ನಮಗೆ ಸಂತೃಪ್ತಿಯಿಲ್ಲ. ಆದರೆ ಶರಣರು ಸಂತೃಪ್ತಿಯ ಬದುಕನ್ನು ನಡೆಸಿದರು. ಅವರ ಪಾಲಿನ ಕಾಯಕ ಮಾಡಿ ದಾಸೋಹ ಮಾಡುತ್ತಿದ್ದರು. ಹೆಚ್ಚಿನ ಸಮಯವನ್ನು ಅನುಭವ ಮಂಟಪದಲ್ಲಿ ಚರ್ಚಾ ಗೋಷ್ಠಿಯಲ್ಲಿ ಕಳೆಯುತ್ತಿದ್ದರು. ಇಷ್ಟಲಿಂಗ ಪೂಜೆ, ಧ್ವಾನ ಶಿವಯೋಗ ಮಾಡಿ ಸಂತೃಪ್ತಿ ಪಡೆಯುತ್ತಿದ್ದರು. ಯಾರು ಶಿವಯೋಗವನ್ನು ಮಾಡುತ್ತಾರೋ ಅವರು ಆಸೆಯನ್ನು ಗೆಲ್ಲುತ್ತಾರೆ, ಆಸೆಯನ್ನು ಗೆದ್ದವರೇ ಮಹಾತ್ಮರಾಗುತ್ತಾರೆ. ಶರಣರಾಗುತ್ತಾರೆ. ಯಡಿಯೂರಪ್ಪನವರು ಬಸವಕಲ್ಯಾಣ ಆಭಿವೃದ್ಧಿ ನಿಗಮ ಸ್ಥಾಪಿಸಿ ಕಲ್ಯಾಣದಲ್ಲಿನ ಗವಿಗಳನ್ನು ಅಭಿವೃದ್ಧಿ ಮಾಡಿರುತ್ತಾರೆ. ಯಾರು ಶಿವಯೋಗ ಮಾಡುತ್ತಾರೋ ಅವರ ಜೀವನದಲ್ಲಿ ಸದಾ ನೆಮ್ಮದಿ, ಸಂತೃಪ್ತಿ ನೆಲೆಸಿರುತ್ತದೆ. ಬೇಕೆ ಬೇಕು ಎನ್ನುವ ದುರಾಸೆ ಗೆಲ್ಲಲು ಶಿವಯೋಗ ತುಂಬಾ ಅಗತ್ಯ ನಾವು ಜೀವನದಲ್ಲಿ ಆಶಾವಾದಿಗಳಾಗಬೇಕು. ಆದರೆ ದುರಾಸೆ ಬೇಡ. ಅದು ಅತೃಪ್ತರನ್ನಾಗಿಸಿ ದುಖಿಃತರನ್ನಾಗಿಸುವುದು. ಎಲ್ಲರೂ ಪ್ರತಿದಿನ ಮನೆಯಲ್ಲಿ 15 ನಿಮಿಷವಾದರೂ ಶಿವಯೋಗ ಮಾಡಬೇಕು. ಶಿವಯೋಗ ನಮ್ಮ ಮನಸ್ಸುಗಳನ್ನು ಅರಳಿಸುತ್ತದೆ. ಬದುಕಿನ ಕಷ್ಟಗಳು ನಿವಾರಣೆಯಾಗುತ್ತವೆ. ಅಂತಹ ಶಕ್ತಿ ಇಷ್ಟಲಿಂಗದಲ್ಲಿದೆ. ಸಂಪತ್ತಿಗಿಂತ ಸಂತೃಪ್ತಿ ದೊಡ್ಡದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ತಿಗ್ಗಾಂವಿ ವಿರಕ್ತಮಠದ ಶ್ರೀ ಸಂಗನಬಸವ ಸ್ವಾಮಿಗಳು ಉಪ್ಪುಣಸ ಶ್ರೀಮುರುಘಾಮಠದ ಶ್ರೀ ಜಯಬಸವೇಶ್ವರ ಸ್ವಾಮಿಗಳು, ಶಿರಸಂಗಿ ಖಾಸಾಮಠದ ಶ್ರೀ ಬಸವ ಮಹಾಂತ ಸ್ವಾಮಿಗಳು ರಾಣೆಬೆನ್ನೂರು ವಿರಕ್ತಮಠದ ಶ್ರೀ ಗುರುಬಸವ ಸ್ವಾಮಿಗಳು ಹಾಗೂ ತಿಳುವಳ್ಳಿ ಕಲ್ಮಠ(ಮುರುಘಾಮಠ)ದ ಶ್ರೀ ಬಸವ ನಿರಂಜನ ಸ್ವಾಮಿಗಳು ಶ್ರೀ. ಬಸವಭೂಷಣ ಸ್ವಾಮಿಗಳು, ಶ್ರೀ. ಶಾಂತವೀರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಹೊಸಕೋಟೆ ಲಿಂಗಾಯತ-ವೀರಶೈವ ಮಹಾಸಭಾದ ಶ್ರೀ ಗುರುಬಸಪ್ಪ ನರಗುಂದ ಬಸವಕೇಂದ್ರದ ಶ್ರೀ ಸಿ.ಹೆಚ್.ಕೋರಿ, ಹುಬ್ಬಳ್ಳಿ ಬಸವಕೇಂದ್ರದ ಶ್ರೀ ಕುಮಾರಣ್ಣ ಹುಗ್ಗಿ ಶೆಟ್ಟರ್, ಹಾವೇರಿ ಬಸವಕೇಂದ್ರದ ಶ್ರೀ ಮುರಿಗೆಪ್ಪ ಕಡೇಕೊಪ್ಪ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಕೆಂಚಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಡಾ.ಬಸವಕುಮಾರಸ್ವಾಮಿಜೀ ಯವರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿ, ಡಾ.ಬಸವಕುಮಾರ ಸ್ವಾಮಿಜೀ ಸ್ವಾಗತಿಸಿ, ಶರಣು ಸಮರ್ಪಣೆ www ನಡೆಸಿಕೊಟ್ಟರು.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page