
10 Aug 2024
ಚಿತ್ರದುರ್ಗ : ಆ. 10 ನಗರದ ಎಸ್ ಜೆ ಎಂ ಫಾರ್ಮಸಿ ಕಾಲೇಜು ವತಿಯಿಂದ "ವಿಶ್ವ ಸ್ತನ್ಯಪಾನ ಸಪ್ತಾಹ-2024" ಕಾರ್ಯಕ್ರಮವನ್ನು ತಮಟಗಲ್ಲು ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾಂಶುಪಾಲರಾದ ಡಾ. ಟಿಎಸ್ ನಾಗರಾಜ್, ಔಷಧ ಉಪಚಾರ ವಿಭಾಗದ ಮುಖ್ಯಸ್ಥರಾದ ಡಾ ಯೋಗಾನಂದ ಆರ್ ಹಾಗೂ ತಮಟಗಲ್ಲು ಗ್ರಾಮದ ಶ್ರೀ ಪ್ರಶಾಂತ್ ಎಚ್‌ಐಒ. ಶಬಾನಬಾನು ಸಿಎಚ್‌ಒ ಮತ್ತು ಶ್ರೀಮತಿ ರುದ್ರಮ್ಮ ಅಧ್ಯಕ್ಷರು ಗ್ರಾಮ ಪಂಚಾಯಿತಿ ತಮಟಗಲ್ಲು ಶ್ರೀ ಸಣ್ಣ ಹನುಮಂತಪ್ಪ ಸದಸ್ಯರು ಗ್ರಾಮ ಪಂಚಾಯಿತಿ. ಬಿಟಿ ಸಾಕಮ್ಮ ಶ್ರೀ ದೊಡ್ಡ ಕರಬಸಪ್ಪ ಶ್ರೀ ಕೆಂಚಣ್ಣ ಮುಖಂಡರು ತಮಟಗಲ್ಲು ಗ್ರಾಮ ಶ್ರೀ ಶಬನ ಬಾನು ಕಮ್ಯುನಿಟಿ ಹೆಲ್ತ್ ಆಫೀಸರ್ ಆಶಾ ಕಾರ್ಯಕರ್ತರಾದ ಶಿವಮಾಲಾ ಮತ್ತು ಗೀತಾ ಉದ್ಘಾಟನೆಯನ್ನು ನೆರವೇರಿಸಿದರು.
ಡಾ ಟಿ.ಎಸ್ ನಾಗರಾಜ್ ಮಾತನಾಡಿ ತಾಯಿಯ ಹಾಲು ಅಮೃತಕ್ಕೆ ಸಮಾನ ಈ ದಿನಗಳಲ್ಲಿ ಭೂಮಿಯ ಮೇಲೆ ಎಲ್ಲವೂ ಕಲುಷಿತವಾಗಿದೆ ಅದರಿಂದ ನಾನು ರೋಗಗಳು ಹರಡುತ್ತಿವೆ. ಏಕೆಂದರೆ ಮಗುವಿಗೆ ಬೇಕಾದ ದೈಹಿಕ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿಯನ್ನು ಪಡೆಯುವಲ್ಲಿ ತಾಯಿಯ ಹಾಲು ಬಲುಮುಖ್ಯ ಪಾತ್ರವನ್ನು ವಹಿಸುತ್ತದೆ. ತಾಯಿ ಹಾಲು ಕುಡಿಯದ ಮಕ್ಕಳು ಬಹಳ ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಈ ವಿಚಾರ ತಾಯಂದರಿಗೆ ಮನಮುಟ್ಟುವಂತೆ ತಿಳಿಯಪಡಿಸಿದರು.
ಡಾ ಯೋಗಾನಂದ ಮಾತನಾಡಿ ಯಾಂತ್ರಿಕ ಬದುಕು ಹಾಗೂ ಯುವ ಪೀಳಿಗೆ ಎದೆ ಹಾಲು ಉಣಿಸುವಲ್ಲಿ ಹಿಂದೆ ಉಳಿಯುತ್ತಿದ್ದಾರೆ ಅದರಿಂದ ಮಗುವಿನ ಆರೋಗ್ಯಕ್ಕೆ ತುಂಬಾ ಗಂಭೀರವಾದ ಪರಿಣಾಮ ಬೀರುತ್ತದೆ. ತಾಯಿ ಹಾಲು ಸಿಕ್ಕ ಮಗುವೆ ಭಾಗ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಮಾರಿ ಪೂಜಾ ಬಿಸಿ ತಾಯಿ ಹಾಲು ಮಹತ್ವವನ್ನು ತಿಳಿಸಿದರು.
ಪ್ರಶಾಂತ್ ಜಿಆರ್ ಹಳ್ಳಿ ತಮಟೆಗಲ್ಲು ಇಂತಹ ವಿಶೇಷ ಕಾರ್ಯಕ್ರಮವನ್ನು ಕೊಂಡಾಡಿದರು.
ಫಾರ್ಮ ಡಿ ವಿದ್ಯಾರ್ಥಿಗಳಿಗೆ ಎಸ್ ಜೆ ಎಂ ಫಾರ್ಮಸಿ ಕಾಲೇಜಿನಲ್ಲಿ ಡಾ ಲತಾ ವಿ ಮುಖ್ಯಸ್ಥರು ಓಬಿಜಿ ವಿಭಾಗ ಬಸವೇಶ್ವರ ಮೆಡಿಕಲ್ ಕಾಲೇಜು ಇವರು ವಿದ್ಯಾರ್ಥಿಗಳಿಗೆ ತಾಯಿ ಎದೆ ಹಾಲಿನ ಮಹತ್ವದ ಬಗ್ಗೆ ವಿಚಾರ ಸಂಕೀರ್ಣ ನಡೆಸಿಕೊಟ್ಟರು. ತಾಯಿಯ ಎದೆ ಹಾಲಿನ ಪ್ರಕಾರಗಳು ಅದರ ಬೇರೆ ಹಾಲಿನ ಜೊತೆ ವ್ಯತ್ಯಾಸ ತಿಳಿಸಿದರು.
ಕೆಲಸಕ್ಕೆ ಹೋಗುವ ಮಹಿಳೆಯರು ಹಾಲುಣಿಸುವುದು ತುಂಬಾ ಕಷ್ಟಕರವಾಗುತ್ತದೆ ಅದರಿಂದ ಉಂಟಾಗುವ ಮಾನಸಿಕ ಒತ್ತಡ ಅವರ ದೇಹದ ಆರೋಗ್ಯದ ಮೇಲೆ ಆಗುವ ಅಪಾಯಗಳು ಹೆಚ್ಚು ಸ್ತನ ಕ್ಯಾನ್ಸರ್ ಬರುವ ಸಾಧ್ಯತೆಗಳು ಉಂಟು ಎಂದು ತಿಳಿಸಿದರು.
ತಾಯಿ ಎದೆಹಲು ಉಣಿಸುವುದರಿಂದ ತಾಯಿಯ ಆರೋಗ್ಯ ಸುಧಾರಿಸುತ್ತದೆ ಪ್ರೋಲ್ಯಾಕ್ಟಿನ್ ಮತ್ತು ಆಕ್ಸಿಟೋಸಿನ್ ಹರ್ಮೋನುಗಳ ಲಾಭವನ್ನು ಪಡೆಯುತ್ತಾಳೆ. ಹಾರ್ಮೋನುಗಳು ಹಾಲು ಉಳಿಸದ ತಾಯಿಯಲ್ಲಿ ಬಿಡುಗಡೆ ಆಗುವುದಿಲ್ಲ. ಈ ವರ್ಷ ತಾಯಿ ಹಾಲಿನ ಮಹತ್ವದ ಕುರಿತಾದ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಸುಷ್ಮಾ ಹಾಗೂ ಅನುಷಾ ನಡೆಸಿಕೊಟ್ಟರು ಸ್ವಾಗತವನ್ನು ಶಮಂತಕಮಣಿ ನೆರವೇರಿಸಿದಳು. ವಂದನಾರ್ಪಣೆಯನ್ನು ಪೂಜಾ ಬಿ ಸಿ ಮಾಡಿದರು. ಕಾರ್ಯಕ್ರಮದ ಲಾಭವನ್ನು ತಮಟೆಗಲ್ಲು ನಿವಾಸಿಗಳು, ತಾಯಂದಿರು, ಗರ್ಭಿಣಿಯರು ಪಡೆದರು ಹಾಗೂ ಕಾರ್ಯಕ್ರಮದಲ್ಲಿ ಡಾ ವಿಜಯಕುಮಾರ್ ಎಂ ಎಂ ಜೆ ಡಾ ಬಸವರಾಜ್ ಎಚ್‌ಎಸ್ ಡಾ ಸ್ನೇಹಲತಾ. ಡಾ ಸೌಮ್ಯ ಹಾಗೂ ಫಾರ್ಮ ಡಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.






