6 Apr 2025
ಬಸವ ಜಯಂತಿ ಅಂಗವಾಗಿ ಪೂರ್ವಭಾವಿ ಸಭೆ
ಮಹಾಮಾನವತಾವಾದಿ,ಸಾಂಸ್ಕೃತಿಕ ನಾಯಕ, ಮಹಾತ್ಮ ಬಸವೇಶ್ವರರ ಜಯಂತಿ – 2025 ರ ಆಚರಣೆ ಕುರಿತಾಗಿ ಚಿತ್ರದುರ್ಗದ ಜಗದ್ಗುರು ಶ್ರೀ ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಪೂರ್ವಭಾವಿ ಸಭೆಯನ್ನು ಶ್ರೀಮಠದ ಅನುಭವ ಮಂಟಪದಲ್ಲಿ ದಿನಾಂಕ 08/04/2025 ರ ಮಂಗಳವಾರ ಸಂಜೆ 5 ಗಂಟೆಯಿಂದ ಆಯೋಜಿಸಲಾಗಿದೆ.
ಶ್ರೀಶಿವಯೋಗಿಸಿ.ಕಳಸದ(ಐಎಎಸ್),ನಿ,ಅಧ್ಯಕ್ಷರು,ಆಡಳಿತ ಮಂಡಳಿ,ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠ,ಚಿತ್ರದುರ್ಗ, ಇವರ ಅಧ್ಯಕ್ಷತೆಯಲ್ಲಿ
ಪೂರ್ವಭಾವಿ ಸಭೆ ಏರ್ಪಡಿಸಲಾಗಿದೆ. ಶ್ರೀ ಮಠದ ಭಕ್ತರು, ಅಭಿಮಾನಿಗಳು, ಬಸವತತ್ವಾನುಯಾಯಿಗಳು, ಸರ್ವ ಸಮಾಜಗಳ ಬಾಂಧವರು,ಜನಪ್ರತಿನಿಧಿಗಳು, ಮುಖಂಡರು, ಶಿಕ್ಷಣ ಸಂಸ್ಥೆಯ ಪ್ರಮುಖರು ಮತ್ತು ಸಂಘ ಸಂಸ್ಥೆಗಳ ಪ್ರಮುಖರು ದಯವಿಟ್ಟು ಬಿಡುವು ಮಾಡಿಕೊಂಡು ಬಂದು, ಜಯಂತ್ಯುತ್ಸವ ಯಶಸ್ವಿಯಾಗಿ ನಡೆಯಲು ತಮ್ಮ ಅಮೂಲ್ಯ ಸಲಹೆಗಳನ್ನು ನೀಡಲು ಈ ಮೂಲಕ ಕೋರಲಾಗಿದೆ.
ಸಭೆ ನಿಗದಿತ ಸಮಯಕ್ಕೆ ಸರಿಯಾಗಿ ಪ್ರಾರಂಭವಾಗುತ್ತದೆ ಮತ್ತು ಮುಗಿಯುತ್ತದೆ. ದಯವಿಟ್ಟು ಎಲ್ಲರೂ ಸಭೆಗೆ 10 ನಿಮಿಷ ಮೊದಲೇ ಬಂದು ಆಸೀನರಾಗಬೇಕಾಗಿ ಕೋರಿದೆ.