top of page
25 Sept 2024
ಚಿತ್ರದುರ್ಗ, ಸೆ.25 ಚಿತ್ರದುರ್ಗ ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಶ್ರೀ ಜಗದ್ಗುರು ಜಯದೇವ - ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತ್ಯುತ್ಸವ ಹಾಗೂ ಶರಣಸಂಸ್ಕೃತಿ ಉತ್ಸವ 2024ರ ಅಂಗವಾಗಿ ಜಯದೇವ ಜಂಗೀ ಕುಸ್ತಿ ಏರ್ಪಡಿಸಲಾಗಿದ್ದು. ಅದರ ಪೂರ್ವಭಾವಿ ಸಭೆಯನ್ನು ದಿನಾಂಕ 26.09.2024ರ ಗುರುವಾರ ಸಂಜೆ 5:00 ಗಂಟೆಗೆ ಶ್ರೀಮುರುಘಾಮಠದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳವರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಕುಸ್ತಿಪಟುಗಳು, ಕ್ರೀಡಾಭಿಮಾನಿಗಳು ಆಗಮಿಸಿ ತಮ್ಮ ಸಲಹೆ ಸಹಕಾರ ನೀಡಬೇಕೆಂದು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9845396588 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಶ್ರೀಮಠದ ಪ್ರಕಟಣೆಯಲ್ಲಿ ಕೋರಲಾಗಿದೆ
bottom of page