top of page

ಮುರುಘಾಮಠದಲ್ಲಿ ಏಪ್ರಿಲ್ 28, 29 ಮತ್ತು 30ರಂದು ಬಸವ ಜಯಂತಿ ಕಾರ್ಯಕ್ರಮಗಳು

9 Apr 2025

ಮುರುಘಾಮಠದಲ್ಲಿ ಏಪ್ರಿಲ್ 28, 29 ಮತ್ತು 30ರಂದು ಬಸವ ಜಯಂತಿ ಕಾರ್ಯಕ್ರಮಗಳು
ಚಿತ್ರದುರ್ಗ, ಏ. 9 ಬಸವಾದಿ ಶಿವಶರಣರ ತತ್ವ ಮೌಲ್ಯ, ಸಿದ್ಧಾಂತ ಒಂದು ಕಾಲಕ್ಕೆ, ಸೀಮೆ, ಜನಾಂಗಕ್ಕೆ ಸೇರಿದ್ದಾಗಿಲ್ಲ, ಅಂದಿನ ಕಾಯಕ, ವಚನ ಚಳುವಳಿಯ ನೇತೃತ್ವ ವಹಿಸಿದ್ದ ಬಸವಣ್ಣನವರಂತೂ ಸರ್ವ ಸಮಾಜಗಳನ್ನು ಆದರಿಸಿ, ಅನುಸರಿಸುವ ವ್ಯಕ್ತಿತ್ವವುಳ್ಳವರು. ಅಂತಹ ಮಹಾಮಾನವತಾವಾದಿಯ ನಡೆ ನುಡಿಯನ್ನು ಅನುಸರಿಸಿದ್ದೇ ಅದಲ್ಲಿ ನಾಡು, ಸುಭಿಕ್ರ, ಆರೋಗ್ಯಪೂರ್ಣ. ಸಮ ಸಮಾಜದ ನಿರ್ಮಾಣಕ್ಕೆ ಕಾರಣವಾಗಬಹುದು ಎನ್ನುವುದು ಸೇರಿದವರ ಬಹುತೇಕ ಆನಿಸಿಕೆಯಾಗಿತ್ತು.
ಇಲ್ಲಿನ ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಕದ ವತಿಯಿಂದ ಇದೇ ಏಪ್ರಿಲ್ 28, 29 ಹಾಗೂ 30ರಂದು ಮೂರು ದಿನಗಳ ತಾಲ ಬಸವ ಜಯಂತಿ ಆಚರಿಸುವ ಸಲುವಾಗಿ ಪೂರ್ವಭಾವಿಯಾಗಿ ಸಭೆ ಇಲ್ಲಿನ ಅನುಭವ ಮಂಟಪದಲ್ಲಿ ನಡೆಯಿತು. ಸೇರಿದವರು ಅನೇಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ನತ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರಸ್ವಾಮಿಗಳು ಮಾತನಾಡಿ, ಬಸವಣ್ಣನವರನ್ನು ಎರಡು ರೀತಿಯಲ್ಲಿ ಅನುಸಂಧಾನ ಮಾಡುವುದಿದೆ. ಒಂದು ಶೈವ ಮತ್ತೊಂದು ಶಕ್ತಿಯಾಗಿ, ಮೂರ್ತಿರೂಪದಲ್ಲಿ ಅವರನ್ನು ನಾಲ್ಕು ಕಾಲಿನ ಎತ್ತಿನ ರೂಪದಲ್ಲಿ ನೋಡುವುದು ಕೈವ ಪದ್ಧತಿಯಾದರೆ, ಆತನನ್ನು ಶಕ್ತಿಯಾಗಿ ನೋಡುವುದರಲ್ಲಿ ಬಸವಣ್ಣ ಎತ್ತಲ್ಲ, ಬದಲಿಗೆ, ಕೆಳಗೆ ಬಿದ್ದವರನ್ನು ಎತ್ತುವ ಕೆಲಸವನ್ನು ಮಾಡಿದ್ದಾರೆ. ತನ್ನ ಸಾಧನೆ, ಕತೃತ್ವ ಶಕ್ತಿಯಿಂದ ಅನೇಕ ಆಯಾಮಗಳಿಂದ ಬಸವಣ್ಣ ಈ ನಾಡಿಗೆ ಬಹುದೊಡ್ಡ ಕೊಡುಗೆ ನೀಡುವ ಮೂಲಕ ಸಮಾಜದ ಶಕ್ತಿಯಾಗಿದ್ದಾರೆ. ಅಂತಹ ಪ್ರಬಲ ಶಕ್ತಿ ಸದಾಕಾಲ ನಮ್ಮೊಂದಿಗಿದ್ದರೆ ನಾವು ಜೀವನದಲ್ಲಿ ಸೋಲುವುದಿಲ್ಲ. ಹಾಗೆ ನೋಡಿದರೆ ಅವರು ಕೇವಲ ಕರ್ನಾಟಕಕ್ಕೆ ಸಾಂಸ್ಕೃತಿಕ ನಾಯಕನಲ್ಲ. ಅವರು ಇಡೀ ವಿಶ್ವದ ನಾಯಕ ಎಂದರು.
ಕಳೆದ 900 ವರ್ಷಗಳ ಹಿಂದೆ ಜಗತ್ತೇ ಮೆಚ್ಚಿ ಆದರಿಸುವಂತಹ ಸಂಸತ್ತನ್ನು ನೀಡಿ ಹೋಗಿರುವುದು ಸಾಮಾನ್ಯ ಮಾತಲ್ಲ, ಅವರು ಸಂಕಷ್ಟಗಳನ್ನೆಮರಿಸಿ, ಅನುಭವಿಸಿ ಒಂದು ತತ್ವ ಸಿದ್ಧಾಂತವನ್ನು ಈ ನಾಡಿಗೆ ಕೊಟ್ಟು ಹೋಗಿದ್ದಾರೆ. ಬೃಹನ್ಮಠದ ಆಡಳಿತ ಮಂಡಳಿಯ ಅಧ್ಯಕ್ಷರ ಆಶೆಯದಂತೆ ಈ ಬಾರಿಯೂ ಮೂರುದಿನಗಳ ಕಾಲ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಅದರ್ಶವಾಗಿ ಆಚರಿಸುವ ಮೂಲಕ ಅವರನ್ನು ನೆನಪಿಸಿಕೊಳ್ಳುವ ಕಾರ್ಯವಾಗಬೇಕಾಗಿದೆ. ಜಯಂತಿಯ ಸಂದರ್ಭದಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರಬಂಧ, ವಚನಗಾಯನು ಕಂಠಪಾಠ, ವೇಷಭೂಷಣ ಸ್ಪರ್ಧೆ ಸೇರಿದಂತೆ ತತ್ವಧಾರಿತವಾಗಿ ಏನು ಬೇಕೋ ಅದನ್ನೆಲ್ಲವನ್ನು ನಾವು ನೀವೆಲ್ಲರೂ ಸೇರಿ ಮಾಡೋಣ, ಶ್ರೀಮಠದ ವತಿಯಿಂದ ಈ ಹಿಂದೆ ಪ್ರಕಟಗೊಳ್ಳುತ್ತಿದ್ದ 'ಸತ್ಯಶುದ್ಧ ಕಾಯಕ" ತ್ರೈಮಾಸಿಕ ಪತ್ರಿಕೆಯನ್ನು ಜಯಂತಿ ಸಂದರ್ಭದಲ್ಲಿ ಬಿಡುಗಡೆಗೊಳಿಸುವ ತಯಾರಿ ನಡೆದಿದೆ. ವಚನಕಾರರ ವಚನಗಳ ಕಿರುಹೊತ್ತಿಗೆಯನ್ನು ಪ್ರಕಟಿಸುವ ಆಶಯವಿದೆ ಎಂದರು.
ಸಭೆಯ ಸಮ್ಮುಖ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮಿಗಳವರು ಮಾತನಾಡಿ, ಈ ನಾಡಿನಲ್ಲಿ ಬಸವ ಜಯಂತಿಯನ್ನು ಮುರುಘಾಮಠದ ಶಾಖಾಮಕವಾದ ದಾವಣಗೆರೆ ವಿರಕ್ತಮಠದಲ್ಲಿ ಮೃತ್ಯುಂಜಯ ಅಪ್ಪಗಳ ನೇತೃತ್ವದಲ್ಲಿ ಹರ್ಡೇಕರ್ ಮಂಜಪ್ಪನವರು ಮೊದಲಿಗೆ ಆರಂಭಿಸಿದ್ದು ವಿಶೇಷ ಶ್ರೀಮಠವು ಬಸವತತ್ವದ ಅನುಸರಣೆ ಮತ್ತು ಪ್ರಸಾರಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡು ಮುಂಚೂಣಿಯಲ್ಲಿದೆ ಎಂದರು. ಬಸವಣ್ಣ ಒಂದು ಮಹಾಬೆಳಕು ಆ ಬೆಳಕಿನಲ್ಲಿ ನಾವುಗಳೆಲ್ಲರೂ ಸಾಗಬೇಕಿದೆ. ಆ ತತ್ವ ಚಿರನೂತನವಾದದ್ದು, ಅವುಗಳ ಅನುಸರಿಸರಿಕೆಯಲ್ಲಿ ನಾವು ಸದಾ ಮುಂದಿರಬೇಕೆಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಸಂಶೋಧಕ, ಸಾಹಿತಿ, ವಿದ್ವಾಂಸರು ಆದ ಡಾ. ಜಿ ರಾಜಶೇಖರಪ್ಪ ಅವರು ಮಾತನಾಡಿ ಬಹು ಹಿಂದಿನಲೂ ಬಸವ ಜಯಂತಿಯನ್ನು ಶ್ರೀಮಠವು ಆಚರಿಸಿಕೊಂಡು ಬಂದಿದೆ. ಆ ಎಲ್ಲ ಕಾರ್ಯಕ್ರಮಗಳು ಯಥಾವತ್ತಾಗಿ ನಡೆಯುತ್ತಾ ಬಂದಿವೆ ಎಂದರು.
ಹಿರಿಯ ಪತ್ರಕರ್ತ, ಕವಿ, ಬಿ.ಎಸ್. ಉಜ್ಜನಪ್ಪ ಮಾತನಾಡಿ, ಬಸವಣ್ಣ ಅಂದರೇನೆ ಆದರ್ಶ, ಆದರ್ಶಕ್ಕೆ ಚ್ಯುತಿ ಬಾರದಂತೆ ಆಡಂಬರ ರಹಿತವಾಗಿ ಆದರ್ಶದೇ ಮೈವೆತ್ತಂತೆ ಜಯಂತಿ ಆಚರಣೆ ಕಾರ್ಯಕ್ರಮಗಳು ಜರುಗಬೇಕೆಂದು ಅನಿಸಿಕೆ ವ್ಯಕ್ತಪಡಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ನಿರಂಜನಮೂರ್ತಿ ಮಾತನಾಡಿ, ಸರ್ವರ ಸಮಾನತೆಗಾಗಿ ಶ್ರಮಿಸಿದ ಬಸವಣ್ಣನವರ ಕೊಡುಗೆ ಆಶಯಗಳನ್ನು ಜನತೆಗೆ ತಿಳಿಸುವ ಕೆಲಸ ಸರ್ವರ ಸಹಭಾಗಿತ್ವದಲ್ಲಿ ಆಚರಿಸುವಂತಾಗಬೇಕೆಂದು ಸಲಹೆ ನೀಡಿದರು.
ಜಿಲ್ಲಾ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ವೀರೇಶ್ ಮಾತನಾಡಿ, ಎಲ್ಲರೂ ಒಟ್ಟಾಗಿ ಆಚರಿಸಿದರೆ ಅದಕ್ಕೊಂದು ಅರ್ಥ ಬರುತ್ತದೆ. ಎಲ್ಲರೂ ಸೇರಿ ಆಚರಿಸೋಣ. ಅದಕ್ಕೆ ತಕ್ಕ ವ್ಯವಸ್ಥೆ ಮಾಡಿಕೊಳ್ಳೋಣ ಎಂದು ಹೇಳಿದರು.
ಲೇಖಕ ಎಚ್. ಆನಂದಕುಮಾರ್ ಮಾತನಾಡಿ, ಚಿತ್ರದುರ್ಗ ಮುರುಘಾಮಠದಿಂದ ಬಸವತತ್ವ ಆಚರಣೆಗಾಗಿ ಒಂದು ಸಂದೇಶ ನೀಡಿದರೆ ಅದು ವ್ಯಾಪಕವಾಗಿ ಚರ್ಚೆಯಾಗುತ್ತದೆ. ಅಂತ ನಿಲುವು ಶ್ರೀಮಠದ್ದಾಗಿದೆ ಎಂದು ಎಂದು ಹೇಳಿದರು.
ವೀರಶೈವ ಸಮಾಜದ ಕಾರ್ಯದರ್ಶಿ ಪಿ.ವೀರೇಂದ್ರಕುಮಾರ್ ಮಾತನಾಡುತ್ತಾ, ಶ್ರೀಮಠ ಹಾಗೂ ಸಮಾಜ ಒಂದಾಗಿ ಆಚರಿಸಿಕೊಂಡು ಬರುತ್ತಿದ್ದು, ಎಲ್ಲವೂ ಸಹ ವ್ಯವಸ್ಥಿತ ರೀತಿಯಲ್ಲಿ ಇಂದಿನ ಯುವಪೀಳಿಗೆಯನ್ನು ಗಮನದಲ್ಲಿರಿಸಿಕೊಂಡು ಕಾರ್ಯಕ್ರಮವನ್ನು ರೂಪಿಸಬೇಕೆಂದು ಹೇಳಿದರು.
ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೆಸ್ವಾಮಿ ಮಾತನಾಡಿ, ಇನ್ನೂ ಕೆಲವು ಕಚೇರಿಗಳಲ್ಲಿ ಬಸವಣ್ಣನವರ ಫೋಟೋಗಳನ್ನು ಹಾಕಿಲ್ಲ, ಹಾಕಿಸುವ ವ್ಯವಸ್ಥೆ ಆಗಬೇಕೆಂದರು.
ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ನಾಗರಾಜ ಸಂಗಮ್ ಮಾತನಾಡಿ, ಚಿಕ್ಕ ಮಕ್ಕಳಿಂದ ಮುದುಕರವರೆಗೂ ಎಲ್ಲರೂ ಅನುಸರಿಸುವಂತಹ ಬಸವತತ್ವವನ್ನು ನಾವು ಚಿಕ್ಕಮಕ್ಕಳಿಗೆ ಕಡ್ಡಾಯವಾಗಿ ಹೇಳುವ, ಪಾಲನೆ ಮಾಡುವ ನಿಟ್ಟಿನಲ್ಲಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕೆಂದು ಹೇಳಿದರು. ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಬಿ.ಟಿ. ನಂದೀಶ್, ಡಾ. ಯಶೋದ ರಾಜಶೇಖರಪ್ಪ ಸೇರಿದಂತೆ ಮತ್ತಿತರರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಮಾಜಗಳ ಮುಖಂಡರುಗಳಾದ ಷಡಾಕ್ಷರಯ್ಯ, ಕುಬೇರಪ್ಪ, ಶಶಿಧರಬಾಬು, ಶ್ರೀಮತಿ ವಿಜಯಲಕ್ಷ್ಮಿ. ಶ್ರೀಮತಿ ಗೀತಾ ಮುರುಗೇಶ್, ಶ್ರೀಮತಿ ಜಯಶೀಲ, ಮಹಮ್ಮದ್ ಸಾಧಿಕ್ ಸೇರಿದಂತೆ ಅನೇಕ ಮುಖಂಡರು ವೇದಿಕೆಯಲ್ಲಿದ್ದರು. ವಿವಿಧ ಸಮಾಜಗಳ ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಎಸ್.ಜೆ.ಎಂ. ವಿದ್ಯಾಪೀಠದ ಶಾಲಾ ಕಾಲೇಜುಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗದವರು ಭಾಗವಹಿಸಿದ್ದರು.
ಜಮುರಾ ಕಲಾವಿದ ಉಮೇಶ್ ಸಂಗಪ್ಪ ಪತ್ತಾರ್ ವಚನ ಗೀತೆಗಳನ್ನು ಹಾಡಿದರು. ಪ್ರಾಚಾರ್ಯ ಡಾ. ಎಲ್. ಈಶ್ವರಪ್ಪ ಸ್ವಾಗತಿಸಿದರು. ಡಾ. ನವೀನ್ ಮಸ್ಕಲ್ ಕಾರ್ಯಕ್ರಮ ನಿರ್ವಹಿಸಿ ಶರಣು ಸಮರ್ಪಣೆ ಮಾಡಿದರು.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page