top of page

ಮುರುಘಾಮಠದಲ್ಲಿ ನಡೆದ ಶರಣಸಂಸ್ಕೃತಿ ಉತ್ಸವ ಸಮಿತಿ ಸಭೆ

6 Sept 2024

ಚಿತ್ರದುರ್ಗ : ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ಶರಣಸಂಸ್ಕೃತಿ ಉತ್ಸವ ಸಮಿತಿಯ ಪೂರ್ವಭಾವಿ
ಸಭೆ ನಡೆಯಿತು. ಶ್ರೀ ಜಯದೇವ ಜಗದ್ಗುರುಗಳ 150ನೇ ಜಯಂತೋತ್ಸವದ ಅಂಗವಾಗಿ ಜಯದೇವ ಜಗದ್ಗುರುಗಳ ಬೆಳ್ಳಿ ಮೂರ್ತಿಯನ್ನು ಮಾಡಿಸಬೇಕೆಂದು ತೀರ್ಮಾನಿಸಲಾಯಿತು. ಈ ಬಾರಿ ಗುರುಗಳ ಉತ್ಸವವನ್ನು ಅದ್ದೂರಿಯಾಗಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಬೇಕೆಂದು ತೀರ್ಮಾನಿಸಲಾಯಿತು. ಪಟೇಲ್ ಶಿವಕುಮಾರ್‌ರವರು ಮಾತನಾಡಿ ಶ್ರೀ ಜಯದೇವ್ ಜಗದ್ಗುರುಗಳ ಹಬ್ಬವನ್ನು ನಾಡಹಬ್ಬದ ರೀತಿಯಲ್ಲಿ ಬೃಹನ್ಮಠದ ಘನತೆಯನ್ನು ಹೆಚ್ಚಿಸಿದ ಮಹಾನುಭಾವರ ಜಯಂತಿ ಅರ್ಥಪೂರ್ಣವಾಗಿ ನಡೆಯಬೇಕೆಂದು ಆಶ್ರಯ ವ್ಯಕ್ತಪಡಿಸಿದರು. ಸಮಾಜದ ಅಧ್ಯಕ್ಷ ಎಸ್‌ಎಂಎಲ್ ತಿಪ್ಪೇಸ್ವಾಮಿ, ಕೆ.ಸಿ. ನಾಗರಾಜ್, ಕೆ.ಎಂ.ವೀರೇಶ್, ಶಶಿಧರ್‌ಬಾಬು, ಶ್ರೀಮತಿ ದೇವಿಕುಮಾರಿ, ರುದ್ರಣಿ ಗಂಗಾಧರ್, ವಿವಿಧ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page