
28 Sept 2024
ಚಿತ್ರದುರ್ಗ, ಸೆ. 27 : ಶರಣು ಎಂದರೆ ಮರಣವಿಲ್ಲ. ನಮ್ಮ ಆಲೋಚನೆಗಳೆ ಆಧ್ಯಾತ್ಮ. ಜಯದೇವ ಜಗದ್ಗುರಗಳ ಆಲೋಚನೆ ಬಹಳ ದೊಡ್ಡದು. ಆಡು ಮುಟ್ಟದ ಸೊಪ್ಪಿಲ್ಲ, ಜಯದೇವ ಜಗದ್ಗುರುಗಳು ಮಾಡದ ಕೆಲಸವಿಲ್ಲ. ನಾವೆಲ್ಲ ಅವರು ಸಾಧಿಸಿ ತೋರಿದ ದಾರಿಯಲ್ಲಿ ಸಾಗುತ್ತ ಸತ್ಕಾರ್ಯ, ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಡಾ. ಬಸವಕುಮಾರ ಸ್ವಾಮೀಜಿ ತಿಳಿಸಿದರು.
ಶರಣಸಂಸ್ಕೃತಿ ಉತ್ಸವದ ಅಂಗವಾಗಿ ಶ್ರೀ ಜಗದ್ಗುರು ಮುರುಘಾರಾಜೇಂದ್ರ ಮಠದಲ್ಲಿ ಇಂದು ದೇಹದ ಆರೋಗ್ಯಕ್ಕೆ ಮನೆಯಲ್ಲೇ ಶುದ್ದೀಕರಣ ಮಾಡುವ ವಿಧಾನ ಕುರಿತಾದ ಪ್ರವಚನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶ್ರೀಗಳು ಮಾತನಾಡಿದರು.
ಯೋಗ ಗುರರುಗಳಾದ ವೈದ್ಯಶ್ರೀ ಚನ್ನಬಸವಣ್ಣ ಮಾತನಾಡಿ, ಪ್ರಸ್ತುತ ಜೀವನದಲ್ಲಿ ಆಹಾರ ಪದ್ಧತಿ ನಮ್ಮ ಪೂರ್ವಿಕರು ಸೇವಿಸುತ್ತಿದ್ದ ಆಹಾರ ಪದ್ಧತಿಗಳ ಬಗ್ಗೆ ತಿಳಿಸುತ್ತ. ಇಂದಿನ ದಿನಮಾನಗಳಲ್ಲಿ ಹೊಸಹೊಸ ಕಾಯಿಲೆ ಬರಲು ಮುಖ್ಯ ಕಾರಣ ಆಹಾರ ಪದ್ಧತಿ ಎಂಬದನ್ನು ಮನವರಿಕೆ ಮಾಡಿದರು.
ಪ್ರಕೃತಿಯಿಂದ ದೇಹ ರಚನೆಯಾಗಿದೆ. ದೇಹಶುದ್ಧಿಗೆ ಮದ್ದು ಶಿವಯೋಗ, ಮನಸ್ಸು ಪ್ರಸನ್ನವಾದರೆ ಮಾತ್ರ ಊಟ
ರುಚಿಸುತ್ತದೆ. ನಮ್ಮ ಶರೀರದ ಕ್ರಿಯಾಶಕ್ತಿ ಹಾಳಾಗಲು ಆಧುನಿಕ ಆಹಾರ ಪದ್ಧತಿ, ವಾತ, ಪಿತ್ತ, ಕಫಾ, ಸ್ಕೂಲಕಾಯ ಹೀಗೆ
ನಾನಾ ಕಾಯಿಲೆಗಳಿಂದ ಯಾವ ರೀತಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಹೇಳಿದರು.
ಕಾರ್ಯಕ್ರಮದಲ್ಲಿ ಬಸವಟಿವಿಮುಖ್ಯಸ್ಥರಾದ ಕೃಷ್ಣಪ್ಪ, ಬಸವೇಶ್ವರ ಆಸ್ಪತ್ರೆಯ ಮುಖ್ಯಸ್ಥರು, ಸಿಬ್ಬಂದಿ ವರ್ಗ ದವರು ಮತ್ತು ಶರಣ ಶರಣೆಯರು ಭಾಗವಹಿಸಿದ್ದರು.
ಜಮುರಾ ಕಲಾವಿದರು ಪ್ರಾರ್ಥಿಸಿದರು. ಶ್ರೀಮತಿ ಸಿದ್ದಗಂಗಮ್ಮ ಸ್ವಾಗತಿಸಿದರು.





