12 Apr 2025
ಚಿತ್ರದುರ್ಗ, ಏ. 11 ನಗರದ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವತಿಯಿಂದ ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ಏಪ್ರಿಲ್ 12 ರಿಂದ 18ರವರೆಗೆ ಎನ್.ಎಸ್.ಎಸ್. ಶಿಬಿರವನ್ನು ಆಯೋಜಿಸಲಾಗಿದೆ.
ಏ. 12ರಂದು ಶನಿವಾರ ಸಂಜೆ 6.30 ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದ್ದು, ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ ಸಮಾರಂಭದ ಗೌರವಾಧ್ಯಕ್ಷತೆ ವಹಿಸಲಿದ್ದು, ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ದಿವ್ಯಸಾನ್ನಿಧ್ಯ ವಹಿಸುವರು. ಲಕ್ಷ್ಮೀಸಾಗರ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸರಸ್ವತಿ ಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯಅತಿಥಿಗಳಾಗಿ ದಾವಣಗೆರೆ ವಿವಿ ಕಾರ್ಯಕ್ರಮ ಸಂಯೋಜಕ ಡಾ. ಅಶೋಕ್ ಕುಮಾರ್, ಕೆ.ಸಿ. ನಾಗರಾಜ್, ಕೆಡಿಪಿ ಸದಸ್ಯರು, ಚಿತ್ರದುರ್ಗ, ಡಿವೈಎಸ್ಪಿ ದಿನಕರ್ ಪಿ.ಕೆ., ವಲಯ ಅರಣ್ಯಾಧಿಕಾರಿ ಶ್ರೀಮತಿ ಉಷಾರಾಣಿ, ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಸುನೀತ ನಾಗರಾಜ್, ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಲ್. ಈಶ್ವರಪ್ಪ, ನಿವೃತ್ತ ಪ್ರಾಚಾರ್ಯ ಪ್ರೊ. ಸಿ. ಬಸವರಾಜಪ್ಪ, ಎಸ್.ಜೆ.ಎಂ. ವಿದ್ಯಾಪೀಠದ ಶೈಕ್ಷಣಿಕ ಕಾರ್ಯನಿರ್ವಾಹಣಾಧಿಕಾರಿ ಎನ್. ಚಲುವರಾಜು, ಪ್ರಾಧ್ಯಾಪಕರಾದ ಎಂ.ಎಸ್. ಪರಮೇಶ್ವರ, ವಾಲ್ಮೀಕಿ ಮಹಾವೇದಿಕೆಯ ರಾಜ್ಯಾಧ್ಯಕ್ಷ ರಾಜಣ್ಣ, ಅ.ಭಾ.ವೀ.ಮ. ನಿರ್ದೆಶಕಿ ಶ್ರೀಮತಿ ಮಧುಶ್ರೀ ಬಸವನಗೌಡ್ರು ಇವರುಗಳು ಭಾಗವಹಿಸುವರು.