
10 Jul 2025
ಚಿತ್ರದುರ್ಗ, ಜು. 10 – ಪ್ರತಿಯೊಂದು ಸಮಾಜವು ಸಮಾಜದ ಮುಖ್ಯವಾಹಿನಿಯಲ್ಲಿ ಶೈಕ್ಷಣಿಕ ಆರ್ಥಿಕ
ಸಾಮಾಜಿಕ ಅವಕಾಶಗಳನ್ನು ಪಡೆದುಕೊಳ್ಳಲು, ಸಂಘಟನೆಗೊಳ್ಳಲು, ಸಮಾನತೆಯನ್ನು ತರಲು ಸಂವಿಧಾನವು ಸೌಲಭ್ಯವನ್ನು ನೀಡಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಹೇಳಿದರು.
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮುರುಗಿ ಶಾಂತವೀರ ಸ್ವಾಮಿಗಳವರ ಲೀಲಾ ವಿಶ್ರಾಂತಿತಾಣದಲ್ಲಿAದು ನಡೆದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡುತ್ತ, ಗುರುಪೂರ್ಣಿಮೆಯಂದು ಹಡಪದ ಅಪ್ಪಣ್ಣ ಜಯಂತಿಯನ್ನು ಆಚರಿಸುತ್ತಿರುವುದು ಔಚಿತ್ಯಪೂರ್ಣವಾಗಿದೆ. ಶರಣ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿರುವವರನ್ನು ನೆನಪಿಸಿಕೊಳ್ಳುವ ಪ್ರವೃತ್ತಿ ನಮ್ಮಲ್ಲಿ ಸದಾ ಜಾಗೃತವಾಗಿರಬೇಕಿದೆ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿಯವರ ಜತೆಗೆ ಎಲೆಮರೆಯ ಕಾಯಿಯಂತಿದ್ದ ಅನೇಕ ವಚನಕಾರರನ್ನು ನೆನಪಿಸಿಕೊಂಡು ಅವರ ಜಯಂತಿಯನ್ನು ಆಚರಿಸುವುದು ಅತಿ ಅಗತ್ಯ ಎಂದರು.
ಪ್ರತಿಯೊಬ್ಬ ಶರಣರು ಸಾಮಾಜಿಕ ಮತ್ತು ವೃತ್ತಿಯಿಂದ ಆಯಾ ಸಮಾಜವನ್ನು ಪ್ರತಿನಿಧಿಸುತ್ತಿದ್ದರು. ವ್ಯಕ್ತಿಗಳು ಮಾಡುವ ಕಾಯಕದಿಂದ ಜಾತಿಯು ಮಾರ್ಪಟ್ಟಿದೆ. 12ನೇ ಶತಮಾನದಲ್ಲಿ ಕಾಯಕ ಜೀವಿಗಳ ಸಮ ಸಮಾಜ ನಿರ್ಮಾಣಗೊಂಡಿತ್ತು. ವಚನ ಚಳುವಳಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಹಡಪದ ಅಪ್ಪಣ್ಣನವರು ಬಸವಣ್ಣನವರ ಆಪ್ತಕಾರ್ಯದರ್ಶಿಯಾಗಿದ್ದರು. ಅವರು 250ಕ್ಕೂ ಹೆಚ್ಚು ವಚನಗಳನ್ನು ಅಪ್ಪಣ್ಣಪ್ರಿಯ ಚನ್ನಬಸವಣ್ಣ ಎಂಬ ಅಂಕಿತನಾಮದಿಂದ ರಚಿಸಿದ್ದಾರೆ. ಇವರ ಸತಿ ಲಿಂಗಮ್ಮ ಸಹ ಅನೇಕ ವಚನಗಳನ್ನು ಬರೆದಿದ್ದಾರೆ. ಪ್ರತಿಯೊಂದು ಸಮಾಜದಲ್ಲಿಯೂ ಅನೇಕ ಪಂಗಡಗಳಿದ್ದು ನಾವೆಲ್ಲ ಒಂದೇ ಎಂಬ ಭಾವನೆಯನ್ನು ಮೂಡಿಸಿಕೊಂಡಾಗ ಸಮಾಜಮುಖಿಯಾಗಲು ಸಾಧ್ಯ ಎಂದು ತಿಳಿಸಿದರು.
ಶ್ರೀಮಠದ ಶ್ರೀ ಮುರುಘಂದ್ರ ಸ್ವಾಮಿಗಳು ಹಾಗೂ ಹರಗುರು ಚರಮೂರ್ತಿಗಳು, ವಿವಿಧ ಸಮಾಜಗಳ ಮುಖಂಡರುಗಳಾದ ಆರ್. ಶ್ರೀನಿವಾಸ್, ಅಧ್ಯಕ್ಷರು, ಹಡಪದ ಸಮಾಜ, ಗೋಪಿನಾಥ್, ಗೋವಿಂದರಾಜ್, ಶ್ರೀನಿವಾಸ್, ಧರ್ಮಣ್ಣ ವಿ., ಶ್ರೀನಿವಾಸ್, ರೋ। ವೀರೇಶ್, ವಿಶ್ವನಾಥ ಸ್ವಾಮಿ, ಸಾಯಿನಾಥ್ ವಕೀಲರು, ರುದ್ರಪ್ಪ ಗೌಳಿ ಜಾಲಿಕಟ್ಟೆ, ಟಿ.ವಿ. ಮುರುಗೇಶ್ ಶಿವಸಿಂಪಿ ಸಮಾಜ, ಶ್ರೀಮತಿ ಅನಿತಾ ಮುರುಗೇಶ್ ಅಧ್ಯಕ್ಷರು, ಮಹಿಳಾ ಶಿವಸಿಂಪಿ ಸಮಾಜ, ಮಂಜುನಾಥ, ನಾಗರಾಜ್ ಸಂಗಂ, ಉಪಾಧ್ಯಕ್ಷರು, ಹೇಮರೆಡ್ಡಿ ಮಲ್ಲಮ್ಮ ಸಮಾಜ, ಕೆಂಚವೀರಪ್ಪ ಅಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ, ಹನುಮಂತಪ್ಪ ಕಮ್ಮಾರ ಸಮಾಜದ ಮುಖಂಡರು, ರಾಷ್ಟ್ರೀಯ ಬಸವದಳದ ವೀರೇಶ್ ತಿಮ್ಮಪ್ಪಯ್ಯನಹಳ್ಳಿ, ನಂದೀಶ್ ನಿವೃತ್ತ ಪ್ರಾಧ್ಯಾಪಕರು, ಹೆಚ್. ಕುಬೇರಪ್ಪ ನಿವೃತ್ತ ಉಪನ್ಯಾಸಕರು, ಶಂಕ್ರಪ್ಪ ನಿವೃತ್ತ ಯೋಜನಾ ನಿರ್ದೇಶಕರು, ಶ್ರೀಮತಿ ಮಹಾಂತಮ್ಮ, ಶ್ರೀಮತಿ ಗೀತಾ ರುದ್ರೇಶ್, ಶ್ರೀಮತಿ ಜಯಶೀಲ ವೀರಣ್ಣ, ಜಯಪ್ಪ ಒನಕೆ ಓಬವ್ವ ಸಮಾಜ, ಎಸ್. ಆನಂದ್ ಪ್ರಾಧ್ಯಾಪಕರು, ಆಕಾಶವಾಣಿ ಪ್ರಸಾರಾಂಗ ವಿಭಾಗದ ಶಿವಪ್ರಕಾಶ್, ಗುರುಕುಲದ ವಿದ್ಯಾರ್ಥಿಗಳು, ಶ್ರೀಮಠದ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮವನ್ನು ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಲ್. ಈಶ್ವರಪ್ಪ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ನಿರ್ವಹಿಸಿದರು.
ಜಮುರಾ ಕಲಾಲೋಕದ ಸಂಗೀತ ಕಲಾವಿದ ಉಮೇಶ್ ಪತ್ತಾರ್ ವಚನ ಪ್ರಾರ್ಥನೆ ಮಾಡಿದರು. ಸಮಾಜಶಾಸ್ತç ಉಪನ್ಯಾಸಕ ಗಿರೀಶ್ ಟಿ.ಎಸ್. ಸ್ವಾಗತಿಸಿದರು. ವಿಶ್ವನಾಥ್ ಸಿ.ಎಂ ನಿರೂಪಿಸಿದರು. ಮಧು ಶರಣು ಸಮರ್ಪಣೆ ಮಾಡಿದರು.