top of page

ವಿಚಾರ ಘೋಷ್ಟಿ ದಿನ - 3

7 Oct 2024

ಛಲವಾದಿ ಗುರುಪೀಠದ ಶ್ರೀ ಬಸವನಾಗಿ ದೇವ ಸ್ವಾಮಿಗಳು ಮಾತನಾಡಿ ಗುರು ಲಿಂಗ ವಿಭೂತಿ ಜಂಗಮ ಪದಗಳ ಬಳಕೆ ಅಮೋಘವಾದ ಪದದ ಬಳಕೆಯಾಗಿದೆ. ಶಿವ ಯೋಗ ವಚನಗೋಷ್ಠಿ ಕೆವಲ ಕೆಲವೇ ವ್ಯಕ್ತಿಗಳಿಗೆ ಸಿಮಿತವಾಗದೆ ಎಲ್ಲ ವ್ಯಕ್ತಿಗಳಿಗೂ ಇದೂ ದೊರೆಯಬೇಕು. ಲಿಂಗದ ಶಕ್ತಿ, ಪ್ರಸಾದ, ಪಾದೋದಕದ ಶಕ್ತಿ ಎಲ್ಲರಿಗೂ ತಿಳಿಯವಂತಹದಗಲಿ. ಗುರು ಎಂದರೆ ದೇಹ ಅರ್ಪಿಸಬೇಕು, ಲಿಂಗ ಎಂದರೆ ಮನ: ಎಂದ ಅರ್ಥ, ಜಂಗಮ ಎಂದರೆ ಪ್ರಾಣ ಎಂದು ಅರ್ಥ. ಇವು ಎಲ್ಲವೂಗಳನ್ನು ಅರ್ಥ ಮಾಡಿಕೊಳ್ಳುವನೇ ವ್ಯಕ್ತಿ. ಜ್ಞಾನದ ಅರಿವು ಪ್ರತಿಯೊಬ್ಬರು ರೂಪಿಸಿಕೊಳ್ಳಬೇಕು ಇವುಗಳನ್ನು ಬಳಸಿಕೊಂಡಗ ಮಾತ್ರ ತತ್ವಜ್ಞಾನಿಗಳಗುತ್ತೇವೆ. ಶಿವಪತ ಸಂಪದಿಸಿವುದಕ್ಕೆ ಎಂಟು ಅವರಣಗಳನ್ನು ಕಾಣುತ್ತೇವೆ, ಇವಗಳನ್ನು ಸಂಪಾದಿಸಬೇಕಾದರೆ ವ್ಯಕ್ತಿಗಳಲ್ಲಿ ಆಧ್ಯಾತ್ಮಿಕ ಜ್ಞಾನದ ಅರಿವು ಮುಖ್ಯ ಎಂದು ನುಡಿದರು.
ಬೆಂಗಳೂರಿನ ಪ್ರಾಂಶುಪಾಲರಾದ ಶೀಲಾದೇವಿ ಮಳಿಮಟ್ ಮಾತನಾಡಿ ಪಾದೋದಕ ವೆಂಬದು ಪರಮಾತ್ಮನ ಚಿದ್ರೂಪ, ಪಾದೋದಕ ವೆಂಬದು ವೈಜ್ಞಾನಿಕವಾಗಿ ತೆಗೆದುಕೊಳ್ಳಬಹುದು. ಆಧ್ಯಾತ್ಮಿಕವಾಗಿಯೂ ಪಾದೋದಕವನ್ನು ಗಳಿಸಬಹುದು. ಪಾದೋದಕ ಪವಿತ್ರತೆಯ ಸಂಕೇತ, ಉದಕ ಜಲತತ್ವದ ಸಂಕೇತ, ಪಾದೋದಕ ಎಂಬುದು ಲಿಂಗದ ಮೇಲೆ ಹಾಕಿರುವ ನೀರಿನ ಹನಿ ನಮ್ಮ ತಲೆಯ ಮೇಲಿನ ಪೀನಲ್ ಗ್ರಂಥಿ, ಮೆಲಟಾನ್ ಎಂಬ ಗ್ರಂಥಿಯ ಮೂಲಕ ನಮ್ಮನ್ನು ರಕ್ಷಿಸುತ್ತದೆ. ಪಾದೋದಕದ ಅರ್ಥ ನಮಗೆ ಗೋತ್ತಿರದೆ ಇದ್ದಾಗ ನಾವು ಖಿನ್ನತೆಗೆ ಹೋಗುತ್ತೇವೆ. ಇದರಿಂದ ನಾವು ಹೊರಗೆ ಬರಬೇಕೆಂದರೆ ಪಾದೋದಕದ ಕ್ರಿಯೇ ನಮಗೆ ಗೋತ್ತಿರಬೇಕು. ಪಾದೋದಕದ ಮೂಲಕ ನಮಗೆ ಗೋತ್ತಾಗದೆ ಹಾಟ್ಟೋನ್‌ಗಳು ಸೃಷ್ಟಿಯಾಗುತ್ತವೆ. ನಾವು ಪಾದೋದಕವನ್ನು ನಮ್ಮಲ್ಲಿರುವ ಅಂತರಂಗ ಬಹಿರಂಗದ ಶುದ್ದಿಗೆ ಬಳಸಬೇಕು. ಪಾದೋದಕ ಯಾರ ಅನುಭವಕ್ಕೆ ಬರುತ್ತದೆಯೋ ಅವರನ್ನು ಸ್ಮೃತಿ ಎಂದು ಯಾರ ಅನುಭವಕ್ಕೆ ಬರುವುದಿಲ್ಲವೋ ಅವರನ್ನು ಅಗೋಚರ ಎಂದು ಕರೆಯುತ್ತೇವೆ. ಪಾದೋದಕ ಕೇವಲ ನೀರಲ್ಲ ಅದು ಅಮೃತ, ಇದು ಜ್ಞಾನಿಗಳಿಗೆ ಹಾಗೂ ಆಧ್ಯಾತ್ಮಾತ ವ್ಯಕ್ತಿ ಪಡೆಯಲು ಸಾಧ್ಯ. ಸರಿಯಾದ ಆಚಾರದ ಮೂಲಕ ಪಾದೋದಕ ಮಾಡಿದರೆ ಜ್ಞಾನ ಸಿಗುರುವುದು ಎಂದು ನುಡಿದರು.
ಬೆಂಗಳೂರಿನ ನಿವೃತ್ತ ಪ್ರಾಂಶುಪಾಲರಾದ ಸಿ ಕೆ ಜಗಧೀಶ ಮಾತನಾಡಿ ಪ್ರಸಾದ ಮೂರು ಆಯಾಮಗಳನ್ನು ತಿಳಿಸಿದರು. ಪ್ರಸಾದ ನಾವು ಸೇವಿಸಿತ್ತಿರು ಆಹಾರವಲ್ಲ, ವಚನಕಾರರು ಹೇಳುವಂತೆ, ಪೂರ್ಣವಾಗಿರುವ ಶಬ್ದ ರಸ, ರೂಪ, ಗಂಧ. ಈ ವಿಶ್ವವನ್ನು ಜಂಗಮವೆಂದು ಕರೆದರು. ಸುಬುದ್ದಿಯೆಂಬ ಜ್ಞಾನದ ಮೂಲಕ ಅಂತರಂಗದಲ್ಲಿ ಅರ್ಥಸಿ ಅದನ್ನು ಗುರುಲಿಂಗಕ್ಕೆ ಅರ್ಪಿಸಬೇಕು. ಯಾವ ವ್ಯಕ್ತಿ ಕಷ್ಟ-ಸುಖ ನೆಮ್ಮದಿ ವಿಚಾರಗಳನ್ನು ಹೊಂದಿರುತ್ತಾನೊ ಅದನ್ನೆ ಶಿವ ಕೊಟ್ಟ ಪ್ರಸಾದ ಎನ್ನುವರು. ಪ್ರತಿಯಂದರಲ್ಲಿಯೂ ಶಿವನ ಅಂಶವನ್ನು ಕಾಣಬಹುದು. ಇಡಿ ಜಗತ್ತು ಶಿವನ ಪ್ರಸಾದ ಎಂಬ ಭಾವನೆ ನಮಗೆ ಬರಬೇಕು ಪ್ರಭುದೇವರ ವಚನದಂತೆ ಅನುಭಾವದಿಂದ ಹುಟ್ಟಿತು ಲಿಂಗ, ಅನುಭಾವದಿಂದ ಹುಟ್ಟಿತು ಜಂಗಮ, ಅನುಭಾವದಿಂದ ಹುಟ್ಟಿತು ಪ್ರಸಾದ ಜೀವತ್ಮರ ಸಂಬಂದ ಹುಟ್ಟಿತು ಪ್ರಸಾದದ ಮೂಲಕ ಎನ್ನುಬಹುದು. ಸಮಾಜದ ವ್ಯಕ್ತಿಗಳಲ್ಲಿ ವೈರಾಗ್ಯ, ಒಲಿಮೆ ಇವು ಅಧಿಕವಾಗಬಾರದು. ಅದು ತನು ಮನ ಶುದ್ದಿಯಾಗಿರಬೇಕು ಇದು ಪ್ರಸಾದ ವಾಗಿರುತ್ತದೆ ಎಂದ ನುಡಿದರು.
ಹಾಸನದ ಕೊಟ್ರೇಶ ಎಸ್ ಉಪ್ಪಾರ ಮಾತನಾಡಿ ಸ್ಥಾವರಲಿಂಗ ಎಂದರೆ ಶಂಕರ ಲಿಂಗ ಪೂಜೆ ಮಾಡುವುದು, ರಾಮ ಲಕ್ಷಣ ಲಿಂಗ ಪೂಜೆ ಮಾಡುವುದು, ರಾವಣ ಲಿಂಗ ಪೂಜೆ ಮಾಡುವದು ಇವರು ಶಿವನ ಲಿಂಗ ಪೂಜೆ ಆರಾದಕರು. ಯಾರಿಗೆ ಹುಟ್ಟು ಸಾವು ಇರುವುದಿಲ್ಲವೋ ಅವನಿಗೆ ಶಿವ ಎಂದು ಕರೆಯತ್ತೇವೆ. ಆಚಾರರು ತಿಳಿಸುವಾಗ ಶುದ್ಧವಾದ ಮನಸ್ಸೆ ಲಿಂಗ ಎನ್ನುವರು. ಲಿಂಗವನ್ನು ಅರ್ಥ ಮಾಡಿಕೊಳ್ಳಲಿಲ್ಲ ಎಂದರೆ ನಮಗೆ ಏನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಾವು ಶಿವನನ್ನು ಪೂಜಿಸಬೇಕು ಆದರೆ ಅದಕ್ಕೆ ಮಧ್ಯವರ್ತಿಗಳ ಏಕೆ. ನಾವು ಲಿಂಗಧಾರಣೆ ಮಾಡಿಕೊಂಡು ಬೇರೆಂದು ಕಲ್ಲಿಗೆ ಪೂಜಿಸುವುದರಲ್ಲಿ ಅರ್ಥವಿಲ್ಲ. ಪಂಚಚಾರದ ಅರ್ಥ ಸ್ಥಾವರಲಿಂಗ -ಶೈವರ ಉಪಸ್ಯ ವಸ್ತು ಚರ ಲಿಂಗ ಕೆಲವೇ ಶೈವ ಪಂಕ್ತಿಯರ ಉಪಸ್ಯ ಇಷ್ಟ ಲಿಂಗ- ಲಿಂಗಾಯತ ಧರ್ಮಿಯರ ಉಪಸ್ಯ ವಸ್ತು, ಶರಣ ಎಂದ ಶಬ್ದ ಎಲ್ಲರಿಗೂ ಮಿಗಿಲಾದ್ದದು, ಆಸೆ ಆಕಾಂಕ್ಷೆಗಳನ್ನು ಕೈಬಿಟ್ಟು ಜೀವನ ನಡೆಸುವುದ ಅದರ ಅರ್ಥವಾಗಿದೆ. ದೇವರೆಂದರೆ ತನ್ನ ತಾನೂ ಅರಿದೋಡೆ ಅವನೆ ದೆವ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಡಾ ಬಸವಕುಮಾರ ಸ್ವಾಮಿಜಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಸವ ವಾಹಿಯ ಶ್ರೀ ಕೃಷ್ಣಪ್ಪನವರು ನಡೆಸಿಕೊಟ್ಟರು.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page