
9 Oct 2024
ಜಯದೇವ ಜಗದ್ಗುರುಗಳ ಬಗ್ಗೆ ಹಲವಾರು ಮಾತುಗಳನ್ನು ಸಾಮಾಜಿಕವಾಗಿ ಶೈಕ್ಷಣಿಕವಾಗಿ ದಾರ್ಮಿಕವಾಗಿ ಎಲ್ಲಾ ರಂಗಗಳಲ್ಲೂ ಮಾಹಿತಿ ಸಂಗ್ರಹಿಸಿ ಅಕ್ಷರ ರೂಪ ಕೊಟ್ಟು ಎರಡು ಕೃತಿಗಳನ್ನು ಸಿದ್ದಪಡಿಸಿದ ಧಾರವಾಡದ ಸಾಹಿತಿಗಳಾದ ಡಾ. ಎಸ್.ಆರ್. ಗುಂಜಾಳ ರವರು ಇಂದಿನ ವಿಚಾರ ಸಂಕಿರಣದ ಪ್ರಮುಖ ರೂವಾರಿಗಳಾಗಿದ್ದಾರೆ ಎಂದು ಡಾ. ಬಸವಕುಮಾರ ಸ್ವಾಮಿಗಳು ತಿಳಿಸಿದರು.
ಚಿತ್ರದುರ್ಗದ ಸಂಶೋಧಕರಾದ ಡಾ. ಬಿ. ರಾಜಶೇಖರಪ್ಪ ನವರು ಶೂನ್ಯಪೀಠ ಮುರುಘಾ ಪರಂಪರೆಯಲ್ಲಿ ಜಯದೇವ ಜಗದ್ಗುರುಗಳು ಎಂಬ ವಿಚಾರ ಸಂಕೀರ್ಣದಲ್ಲಿ ಮಾತನಾಡುತ್ತಾ ಶೂನ್ಯ ಪೀಠ ಮುರುಘಾ ಪರಂಪರೆ ಅಲ್ಲಮ ಪ್ರಭುಗಳಿಂದ ಶಾಂತವೀರ ಮುರುಘಾಶ್ರೀ ಗಳವರೆಗೆ ಬಂದಿರುತಂಹದ್ದು ಶೂನ್ಯ ಪೀಠ ಪರಂಪರೆ ಬೇರೆಯಲ್ಲ, ಮುರುಘಾ ಪರಂಪರೆ ಬೇರೆಯಲ್ಲ, ಈ ಪರಂಪರೆಯವರು ಧಾರ್ಮಿಕ ವಿಧಿ ವಿಧಾನಗಳಿಗೆ ಮಾತ್ರ ಸೀಮಿತವಾಗಲಿಲ್ಲ. ಸಮಾಜಮುಖಿ ಕಾರ್ಯಗಳನ್ನು ಕೈಗೆತ್ತಿಕೊಂಡರು. ಮೊಟ್ಟ ಮೊದಲ ಪ್ರಸಾದ ನಿಲಯಗಳ ಜನಕ ಮಹಾಲಿಂಗಸ್ವಾಮಿಗಳಾದರೆ ಈ ಬೀಜವನ್ನು ಹೆಮ್ಮರವಾಗಿ ಬೆಳೆಸಿದವರು ಜಯದೇವ ಜಗದ್ಗುರುಗಳು ಬರಗಾಲದ ಸಂದರ್ಭದಲ್ಲಿ ಮಠದ ದವಸ ದಾನ್ಯಗಳನ್ನು ಜನರಿಗೆ ಗಂಜಿ ಮಾಡಿ ಹಂಚಿದವರು ಹೆಬ್ಬಾಳದ ಸ್ವಾಮಿಗಳು ಇದೇ ಕಾರ್ಯವನ್ನು ಸೂಕ್ತವೆಂದು ಜಯದೇವ ಶ್ರೀಗಳು ಮುಂದುವರೆಸಿಕೊಂಡು ಹೋದರು. ಹಲವು ಸಮಾಜ ಮುಖಿ ಕಾರ್ಯಗಳಿಗೆ ಉದಾರವಾಗಿ ದಾನವನ್ನು ನೀಡಿದ ಹೆಗ್ಗಳಿಕೆ ಜಯದೇವ ಜಗದ್ಗುರುಗಳದಾಗಿದೆ. ಮಠದ ಭೂಮಿಯನ್ನು ಬರೇ ಲಿಂಗಾಯಿತರೆ ಸಾಗುವಳಿ ಮಾಡುತ್ತಿದ್ದರೆ ಜಯದೇವ ಜಗದ್ಗುರುಗಳು ಎಲ್ಲಾ ವರ್ಗದವರು ಮಾಡಲಿ ಎಂದು ಎಲ್ಲರಿಗೂ ಸಾಗುವಳಿ ಮಾಡಲು ಅವಕಾಶ ನೀಡಿದರು. ಶ್ರೀ ಮಠದ ಅನೇಕ ದೂರುಗಳನ್ನು ನಿವಾರಣೆ ಮಾಡುವಂತಹ ನ್ಯಾಯಾಲಯವು ಕೂಡ ಆಗಿತ್ತು. ತಪ್ಪು ಮಾಡಿದವರಿಗೆ ದಂಡವನ್ನು ವಿಧಿಸುತ್ತಿದ್ದರು. ಹರ್ಡೆಕರ್ ಮಂಜಪ್ಪನವರನ್ನು ಲಿಂಗಾಯತರಲ್ಲ ಎಂದು ದೂರವಿಟ್ಟಾಗ ಅವರನ್ನು ಅಥಣಿಗೆ ಕರೆಸಿಕೊಂಡು ಲಿಂಗಧಾರಣೆಯನ್ನು ಮಾಡಿದವರು. ಎಲ್ಲಾ ಸಮುದಾಯದವರು ಶ್ರೀಗಳ ಬಗ್ಗೆ ಅಪಾರವಾದ ಗೌರವವನ್ನು ಇಟ್ಟುಕೊಂಡಿದ್ದಾರೆ. ದಲಿತರನ್ನು ಸವರ್ಣಿಯವರು ತಿರಸ್ಕರಿಸಿ ನೀರನ್ನು ಕೊಡದೇ ಇದ್ದಾಗ ಅವರು ಜಯದೇವ ಶ್ರೀಗಳಿಗೆ ಬಂದು ದೂರು ಕೊಟ್ಟಾಗ ಅವರಿಗೆ ನೀರನ್ನು ಕೊಟ್ಟು ಊಟವನ್ನು ಮಾಡಿಸಿ ಅವರ ಬಗ್ಗೆ ಒಂದು ಬಾಷಣವನ್ನೇ ಮಾಡಿದವರು ಜಯದೇವ ಜಗದ್ಗರುಗಳು ಎಂದು ಹೇಳಿದರು.
ಧಾರವಾಡದ ಸಂಶೋಧಕರಾದ ಡಾ. ಲಕ್ಷ್ಮಣ ತೆಲಗಾವಿ ಯವರು ಅರಮನೆ-ಗುರುಮನೆ ಎನ್ನುವ ವಿಷಯ ಮಂಡನೆ ಮಾಡುತ್ತಾ ವಿಜಯನಗರಕ್ಕೆ ಶ್ರೀ ಕೃಷ್ಣದೇವರಾಯ ಹೇಗೋ ಹಾಗೆಯೇ ಚಿತ್ರದುರ್ಗಕ್ಕೆ ಭರಮಣ್ಣ ನಾಯಕ ಅವರ ಭಕ್ತಿಯ ಪ್ರೀತಿಗೆ ಒಲಿದು ಬಂದವರೇ ಮುರುಘಾಶಾಂತವೀರ ಸ್ವಾಮಿಗಳು. ಮುರುಘಾಸ್ವಾಮಿಗಳು ಇಲ್ಲಿ ನೆಲಸದೇ ಇದ್ದಿದ್ದರೆ ಚಿತ್ರದುರ್ಗದ ಸಾಂಸ್ಕೃತಿಕ ಪರಂಪರೆ ನಾಡಿನಲ್ಲಿ ಮೇರು ಶಿಖರವನ್ನು ತಲುಪುತ್ತಿರಲಿಲ್ಲ. ಚಿತ್ರದುರ್ಗದ ಭರಮಣ್ಣನಾಯಕನಿಗೂ ಮುರುಘಾ ಮಠಕ್ಕೂ ನೇರ
ಸಂಪರ್ಕ ಇತ್ತು ಎಂಬುದಕ್ಕೆ ಮ್ಯೂಸಿಯಂನಲ್ಲಿರುವ ಘಂಟೆಯೇ ಸಾಕ್ಷಿಯಾಗಿದೆ. ಅದರಲ್ಲಿ ಅಧಿಕೃತ ಶಾಸನವಿದೆ ಎಂದು ತಿಳಿಸಿದರು.
ಧಾರವಾಡದ ಸಂಶೋಧಕರಾದ ಡಾ. ಲಕ್ಷ್ಮಣ ತೆಲಗಾವಿ ಯವರು ಅರಮನೆ-ಗುರುಮನೆ ಎನ್ನುವ ವಿಷಯ ಮಂಡನೆ ಮಾಡುತ್ತಾ ವಿಜಯನಗರಕ್ಕೆ ಶ್ರೀ ಕೃಷ್ಣದೇವರಾಯ ಹೇಗೋ ಹಾಗೆಯೇ ಚಿತ್ರದುರ್ಗಕ್ಕೆ ಭರಮಣ್ಣ ನಾಯಕ ಅವರ ಭಕ್ತಿಯ ಪ್ರೀತಿಗೆ ಒಲಿದು ಬಂದವರೇ ಮುರುಘಾಶಾಂತವೀರ ಸ್ವಾಮಿಗಳು. ಮುರುಘಾಸ್ವಾಮಿಗಳು ಇಲ್ಲಿ ನೆಲಸದೇ ಇದ್ದಿದ್ದರೆ ಚಿತ್ರದುರ್ಗದ ಸಾಂಸ್ಕೃತಿಕ ಪರಂಪರೆ ನಾಡಿನಲ್ಲಿ ಮೇರು ಶಿಖರವನ್ನು ತಲುಪುತ್ತಿರಲಿಲ್ಲ. ಚಿತ್ರದುರ್ಗದ ಭರಮಣ್ಣನಾಯಕನಿಗೂ ಮುರುಘಾ ಮಠಕ್ಕೂ ನೇರ ಸಂಪರ್ಕ ಇತ್ತು ಎಂಬುದಕ್ಕೆ ಮ್ಯೂಸಿಯಂನಲ್ಲಿರುವ ಘಂಟೆಯೇ ಸಾಕ್ಷಿಯಾಗಿದೆ. ಅದರಲ್ಲಿ ಅಧಿಕೃತ ಶಾಸನವಿದೆ ಎಂದು ತಿಳಿಸಿದರು.
ಬೆಂಗಳೂರಿನ ಬಿ.ಎಂ. ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಬೈರಮಂಗಲ ರಾಮೇಗೌಡ ರವರು ಜಯದೇವ ಜಗದ್ಗುರುಗಳ ಸಾಹಿತ್ಯ ಸಂಸ್ಕೃತಿ ವಿಷಯ ಮಂಡನೆ ಮಾಡುತ್ತಾ ನೂರಾರು ವರ್ಷಗಳ ಹಿಂದೆಯೇ ಹೃದಯಾಘಾತಕ್ಕೆ ಒಳಗಾಗುವ ಜನವರನ್ನು ಕಂಡು ಬೆಂಗಳೂರಿನಲ್ಲಿ ಜಯದೇವ ಹೃದ್ರೋಗಾಲಯವನ್ನು ತೆರೆಯಲು ಕಾರಣರಾದವರು ಪೀಠದ ಸ್ವಾಮಿಗಳಾಗಿದ್ದರು ದೂರ ದೃಷ್ಟಿಯುಳ್ಳವರಾಗಿದ್ದರು. ಸುತ್ತು ಮತ್ತು ಕಟ್ಟು ಎಂದು ತಮ್ಮ ಗುರುಗಳ ಅದರ್ಶಕ್ಕೆ ತಕ್ಕಂತೆ ಪೀಠದಲ್ಲಿ ಕುಳಿತುಕೊಳ್ಳದೆ ನಾಡಿನಾದ್ಯಂತ ತಿರುಗಾಡಿ ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡಿದರು. ಒಳ್ಳೆಯ ಸಾಹಿತ್ಯ ರಚಿಸಲು ಪ್ರೇರಣೆ ಬೇಕು. ನಾಗರೀಕತೆಗೆ ಉದಾರವಾಗಿರುವಂತೆ ಜನರನ್ನು ಪ್ರೀತಿಸುವಂತಹ ಸಾಹಿತ್ಯ ರಚನೆ ಒಳಗೊಂಡಿರಬೇಕು. ಎಂದು ಆಶಿಸಿದವರು ಜಯದೇವ ಜಗದ್ಗರುಗಳು. 17 ನೇ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀಗಳು ಹಾಡಿದ ಆಶಯದ ಮಾತುಗಳು ಇವೇ ಆಗಿವೆ. ಸಾಹಿತ್ಯ ಕೃತಿಯೊಂದನ್ನು ಹೊರತರಲು ಬೆಳಗೆರೆ ಜಾನಕಮ್ಮ ಪ್ರಯತ್ನಿಸುವ ಸಂದರ್ಭದಲ್ಲಿ ಜಯದೇವ ಶ್ರೀಗಳು ರೂ. 1001/- ಹಣವನ್ನು ನೀಡಿ ಅವರ ಮೊದಲ ಕೃತಿ ಕಲ್ಯಾಣ ವನ್ನು ಪ್ರಕಟಿಸಲು ಕಾರಣವಾಯಿತು. ಮುಂದೆ ಜಾನಕಮ್ಮನವರು 90 ಕೃತಿಗಳನ್ನು ಪ್ರಕಟಿಸಿದರು ಇದಕ್ಕೆ ಕಾರಣ ಜಯದೇವ ಶ್ರೀಗಳ ಸಾಹಿತ್ಯದ ಬಗೆಗಿನ ಪ್ರೀತಿಯಾಗಿದೆ ಎಂದು ತಿಳಿಸಿದರು.
ಬೆಳಗಾವಿಯ ಸಾಹಿತಿಗಳಾದ ಶ್ರೀ ಪ್ರಕಾಶ್ ಗಿರಿಮಲ್ಲಣ್ಣನವರು ಜಯದೇವ ಜಗದ್ಗುರುಗಳ ಬಾಲ್ಯ ಮತ್ತು ಶಿಕ್ಷಣ ಎನ್ನುವ ವಿಷಯ ಮಂಡನೆ ಮಾಡಿ ಮಾತನಾಡುತ್ತಾ 1000 ಪುಟಗಳ ಬೃಹತ್ ಗ್ರಂಥವನ್ನು ಕೇವಲ ಒಂದು ತಿಂಗಳಲ್ಲಿ ಪ್ರಕಟಿಸುವುದು ಮಹಾತ್ ಕಾರ್ಯವಾಗಿತ್ತು. ಅದು ಇಂದು ಸಾಧ್ಯವಾಗಿದೆ ಲೋಕ ಮಾನ್ಯ ಬಾಲಗಂಗಾಧರ ತಿಲಕ್ ರಿಂದಲೇ ಜಯದೇವ ಜಗದ್ಗರುಗಳು ಪ್ರಶಂಸೆಗೆ ಒಳಗಾಗಿದ್ದರೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಶ್ರೀ ಮೃತ್ಯುಂಜಯ ರುಮಾಲೆ, ಡಾ ಎಸ್.ಆರ್. ಗುಂಜಾಳ, ಶ್ರೀ ಕೆ.ಎಲ್. ರಾಜಶೇಖರ್ ಇವರನ್ನು ಸನ್ಮಾನಿಸಲಾಯಿತು.
ವಿಶ್ವಗುರು ಬಸವ ಭಾರತ ಎಂಬ ಪತ್ರಿಕೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಉಜ್ಜಿನಿಪ್ಪ ಮತ್ತು ಕೆ.ಇ.ಬಿ ಷಣ್ಮುಖಪ್ಪ ಹಾಗೂ ಮಠದ ಸದ್ಭಕ್ತರು ಉಪಸ್ಥಿತರಿದ್ದರು.
ನಿರೂಪಣೆ: ಕುಮಾರಿ ಕಾವೇರಿ ಸ್ವಾಗತ: ನವೀನ್ ಮಸ್ಕಲ್ ಆಕಾಶವಾಣಿ ಚಿತ್ರದುರ್ಗ.







