top of page

ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ - 2025

19 Mar 2025

ನಗರದ ಎಸ್.ಜೆ.ಎಂ. ಕಾನೂನು ಮಹಾವಿದ್ಯಾಲಯದಲ್ಲಿ ಮಾ. 15ರಂದು ಶನಿವಾರ ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು ಆಚರಿಸಲಾಯಿತು.
ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶ್ರೀ ಎಚ್. ಬಿಲ್ಲಪ್ಪನವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಭಾರತೀಯ ಸಾಕ್ಷ ಅಧಿನಿಯಮ 104 ರಿಂದ 120ರವರೆಗಿನ ಮಾಹಿತಿಯನ್ನು ಕಾನೂನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ. ತಿಪ್ಪೇಸ್ವಾಮಿ ವಕೀಲರು ಮಾತನಾಡುತ್ತ, ಗ್ರಾಹಕ ಹಕ್ಕುಗಳ ಕಾಯ್ದೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಎಸ್. ದಿನೇಶ್ ಪ್ರಾಂಶುಪಾಲರು ಎಸ್.ಜೆ.ಎಂ. ಕಾನೂನು ಮಹಾವಿದ್ಯಾಲಯ ಇವರು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಪಿಎಚ್.ಡಿ. ಪದವಿ ಪೂರೈಸಿದ ಡಾ. ಕೆ.ಎನ್ ವಿಶ್ವನಾಥ್ ಇವರನ್ನು ಸನ್ಮಾನಿಸÀಲಾಯಿತು. ಕಾನೂನು ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ಕಾನೂನು ಮಹಾವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಂಜುಳಾ ಪ್ರಾರ್ಥಿಸಿದರು. ಅಮಿಷ ಸ್ವಾಗತಿಸಿದರು. ಗಣ್ಯರ ಪರಿಚಯವನ್ನು ಕುಮಾರಿ ಕೀರ್ತನ ನಡೆಸಿದರು. ವಿಶ್ವಪ್ರಭು ನಿರೂಪಿಸಿದರು. ಕು. ಸಂಗೀತ ವಂದಿಸಿದರು.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page