top of page

ವಿಶ್ವ ಪರಿಸರ ದಿನ -2025

28 May 2025

ವಿಶ್ವ ಪರಿಸರ ದಿನ ಅಂಗವಾಗಿ
ಮೇ 30ರಿಂದ ಜೂ. 5ರವರೆಗೆ ಸಸಿ ನಡೆವ ಸಪ್ತಾಹ
ಚಿತ್ರದುರ್ಗ, ಮೇ 28 ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತ ಬಂದಿದ್ದು, ಪ್ರತಿವರ್ಷ ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ, ಕಾಳಜಿ ಮತ್ತು ಜಾಗೃತಿಯನ್ನು ಮೂಡಿಸುತ್ತ ಸಾರ್ವಜನಿಕ ಸ್ಥಳಗಳು, ವಿದ್ಯಾಸಂಸ್ಥೆಗಳು ಹಾಗೂ ಶ್ರೀಮಠದ ವಿವಿಧ ಸಂಸ್ಥೆಗಳ ಆವರಣದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಮೂಲಕ ಸುಂದರ ಪರಿಸರ ನಿರ್ಮಾಣದ ಕೈಂಕರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.
ಪ್ರಸಕ್ತ ವರ್ಷ ವಿಶ್ವ ಪರಿಸರ ದಿನದ ಅಂಗವಾಗಿ ದಿ. 30.05.2025 ರಿಂದ 05.06.2025ರವರೆಗೆ ನಗರದ ಆಯ್ದ ಪ್ರದೇಶಗಳಲ್ಲಿ ಅರಣ್ಯ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ವಿವಿಧ ಸಮಾಜಗಳು, ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸಸಿ ನೆಡುವ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ.
ಮೇ 30ರಂದು ಶುಕ್ರವಾರ ಬೆಳಗ್ಗೆ 7.00 ಗಂಟೆಗೆ ಗಾಂಧಿನಗರದ ಐಯುಡಿಪಿ ಲೇಔಟ್‌ನಲ್ಲಿ ಸಪ್ತಾಹದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಸಪ್ತಾಹವನ್ನು ಉದ್ಘಾಟಿಸುವರು. ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಮಹಾಸ್ವಾಮಿಗಳು, ಶ್ರೀ ಮಾದಾರಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಸಂಸದ ಗೋವಿಂದ ಎಂ. ಕಾರಜೋಳ, ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ. ಕೆ.ಎಂ. ವೀರೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ತಾಜಪೀರ್, ನಗರಸಭೆ ಸದಸ್ಯ ಭಾಸ್ಕರ್ ಅವರುಗಳು ಮುಖ್ಯಅತಿಥಿಗಳಾಗಿ ಭಾಗವಹಿಸುವರು.
ಮೇ 31 ರಂದು ಬೆಳಗ್ಗೆ 7.00 ಗಂಟೆಗೆ ಚಂದ್ರವಳ್ಳಿ ಪ್ರದೇಶ ಮತ್ತು ಎಸ್.ಜೆ.ಎಂ. ಪದವಿ ಕಾಲೇಜು ಆವರಣದಲ್ಲಿ ನಡೆಯುವ ಸಸಿ ನೆಡುವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಗಳು, ಬೋವಿ ಗುರುಪೀಠ, ಡಾ. ಬಸವಪ್ರಭು ಸ್ವಾಮಿಗಳು, ವಿರಕ್ತಮಠ ದಾವಣಗೆರೆ ಇವರುಗಳು ವಹಿಸುವರು. ಮುಖ್ಯಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್. ಮಾಜಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ, ಜಿಲ್ಲಾ ರಕ್ಷಣಾಧಿಕಾರಿ ರಂಜಿತ್ ಕುಮಾರ್ ಭಂಡಾರು, ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪೃಥ್ವಿ ವಿಜಯಕುಮಾರ್, ರಾಘವೇಂದ್ರ ವಿದ್ಯಾಸಂಸ್ಥೆಯ ಶ್ರೀನಿವಾಸ್, ಮಾತೃಶ್ರೀ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಿ.ಎಲ್, ಪ್ರಶಾಂತ್ ಅವರುಗಳು ಭಾಗವಹಿಸುವರು.
ಜೂ. 1ರಂದು ಬೆಳಗ್ಗೆ 7.00 ಗಂಟೆಗೆ ಪಿ.ಎನ್.ಸಿ. ಶೀಬಾರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶ್ರೀ ಬಸವ ಕೃಷ್ಣ ಯಾದವಾನಂದ ಸ್ವಾಮಿಗಳು, ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ನಗರಸಭೆ ಅಧ್ಯಕ್ಷೆ ಶ್ರೀಮತಿ ಸುಮಿತಾ ಬಿ.ಎನ್. ಆಯುಕ್ತ ಶ್ರೀಮತಿ ರೇಣುಕಾ ಎಂ.. ಡಿಡಿಪಿಐ ಮಂಜುನಾಥ್, ಮದಕರಿನಾಯಕ ವಿದ್ಯಾಸಂಸ್ಥೆ ಕಾರ್ಯದರ್ಶಿ ಸಂದೀಪ್ ಅವರುಗಳು ಮುಖ್ಯಅತಿಥಿಗಳಾಗಿ ಭಾಗವಹಿಸುವರು.
ಜೂ. 2 ರಂದು ಸೋಮವಾರ ಬೆಳಗ್ಗೆ 7.00 ಗಂಟೆಗೆ ಎಸ್.ಜೆ.ಎಂ.ಐ.ಟಿ, ಆವರಣದಲ್ಲಿ ನಡೆಯುವ ಕಾಠ್ಯಕ್ರಮದಲ್ಲಿ ಶ್ರೀ ಇಮ್ಮಡಿ ಬಸವ ಕೇತೇಶ್ವರ ಮಹಾಸ್ವಾಮಿಗಳು, ಶ್ರೀ ಬಸವ ನಾಗಿದೇವ ಸ್ವಾಮಿಗಳು ದಿವ್ಯಸಾನ್ನಿಧ್ಯ ವಹಿಸುವರು. ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಜಿಲ್ಲಾ ಅರಣ್ಯಾಧಿಕಾರಿ ಶ್ರೀಮತಿ ಅನುಪಮಾ. ಅಮ್ಮ ಪಬ್ಲಿಕ್ ಸ್ಕೂಲ್ ಮುಖ್ಯಸ್ಥ ಹೆಚ್.ಆನಂದಪ್ಪ, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಸತ್ಯನಾರಾಯಣ ಶೆಟ್ಟಿ, ಪಾರ್ಶ್ವನಾಥ ವಿದ್ಯಾಸಂಸ್ಥೆ ಅಧ್ಯಕ್ಷ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳುವರು. ಪಾಟಿಯಾತ್
ಜೂ. 3ರಂದು ಮಂಗಳವಾರ ಬೆ. 7.00 ಗಂಟೆಗೆ ಶೀಬಾರದ ಶ್ರೀ ಗುರುಪಾದಸ್ವಾಮಿಗಳ ದನಗಳ ಜಾತ್ರಾ ಸ್ಥಳದಲ್ಲಿ ಸಸಿ ನೆಡುವ ಕಾಠ್ಯಕ್ರಮ ನಡೆಯಲಿದ್ದು, ಶ್ರೀ ಬಸವ ಮಾಚಿದೇವ ಸ್ವಾಮಿಗಳು, ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮಿಗಳು ದಿವ್ಯಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಹೆಚ್. ಆಂಜನೇಯ, ಕಂಪಳರಂಗಸ್ವಾಮಿ ವಿದ್ಯಾಸಂಸ್ಥೆಯ ರಮೇಶಪ್ಪ, ಎಸ್.ಆರ್.ಎಸ್. ವಿದ್ಯಾಸಂಸ್ಥೆಯ ಲಿಂಗಾರೆಡ್ಡಿ ಬಿ.ಎ.. ಸಂತ ಜೋಸೇಫರ ಕಾನ್ವೆಂಟ್ನ ವ್ಯವಸ್ಥಾಪಕ ಶಶಿಂತ, ವಿಶ್ವಮಾನವ ವಿದ್ಯಾಸಂಸ್ಥೆಯ ನೀಲಕಂಠ ದೇವರು, ಜಲೀಲ್ ಸಾಬ್. ನಮ್ಮ ಎಕ್ಸ್‌ಫರ್ಟ್‌ನ ಪ್ರಾಂಶುಪಾಲ ಅರುಣ್ ಕುಮಾರ್ ಅವರುಗಳು ಭಾಗವಹಿಸುವರು.
ಜೂ. 4ರಂದು ಬೆಳಗ್ಗೆ 7.00 ಗಂಟೆಗೆ ಎಸ್.ಜೆ.ಎಂ. ದಂತ ಮಹಿಳಾ ಹಾಸ್ಟೆಲ್ ಆವರಣದಲ್ಲಿ ಆಯೋಜಿಸಲಾಗಿದ್ದು, ಶ್ರೀ ಬಸವ ಹರಳಯ್ಯ ಸ್ವಾಮಿಗಳು ದಿವ್ಯಸಾನ್ನಿಧ್ಯ ವಹಿಸುವರು. ಮುಖ್ಯಅತಿಥಿಗಳಾಗಿ ಜಿ.ಪಂ. ಮುಖ್ಯಕಾರನಿರ್ವಹಣಾಧಿಕಾರಿ ಎಸ್.ಜೆ. ಸೋಮಶೇಖರ್, ಪಿಯು ಡಿಡಿ ಕೆ. ತಮ್ಮಯ್ಯ, ರಾಜ್ಯಸಭೆ ಮಾಜಿ ಸದಸ್ಯ ಹೆಚ್. ಹನುಮಂತಪ್ಪ, ಮಾಜಿ ಸಂಸದ ಜಿ. ಜನಾರ್ದನಸ್ವಾಮಿ, ಡಾನ್‌ ಬಾಸ್ಕೋ ವಿದ್ಯಾಸಂಸ್ಥೆ ಪ್ರಾಂಶುಪಾಲ ಪ್ರವೀಣ್ ಅವರುಗಳು ಪಾಲ್ಗೊಳ್ಳುವರು.
ಜೂ. 5ರಂದು ಬೆಳಗ್ಗೆ 7.00 ಗಂಟೆಗೆ ಎಸ್.ಜೆ.ಎಂ. ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ನಡೆಯುವ ಸಪ್ತಾಹ ಸಮಾರೋಪದಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ ಅಧ್ಯಕ್ಷತೆ ವಹಿಸುವರು. ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಮುಖ್ಯಅತಿಥಿಗಳಾಗಿ ಡಾ. ಪಿ.ಎಸ್. ಶಂಕರ್, ಚಂದ್ರಶೇಖರ್ ಎಸ್.ಎನ್.. ವಿಧಾನಪರಿಷತ್ ಸದಸ್ಯರುಗಳಾದ ಡಿ.ಟಿ. ಶ್ರೀನಿವಾಸ್, ಚಿದಾನಂದಗೌಡ ಎಂ.. ಡಿವೈಎಸ್ಪಿ ದಿನಕರ್ ಪಿ.ಕೆ.. ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಸಿಇಓ ಎಂ.ಸಿ. ರಘುಚಂದನ್, ಪ್ರಕೃತಿ ವಿದ್ಯಾಸಂಸ್ಥೆಯ ಕಾವ್ಯದರ್ಶಿ ಕಾರ್ತಿಕ್, ನೂತನ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಜಿ. ಇವರುಗಳು ಭಾಗವಹಿಸಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page