top of page

ಶರಣಸಂಸ್ಕೃತಿ ಉತ್ಸವದಲ್ಲಿ ಮಹಿಳಾ ಕ್ರೀಡೆ

9 Sept 2024

ಚಿತ್ರದುರ್ಗ, ಸೆ. 9 - ಚಿತ್ರದುರ್ಗ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆಯುವ ಶರಣಸಂಸ್ಕೃತಿ ಉತ್ಸವದಲ್ಲಿ ಮಹಿಳಾ ಕ್ರೀಡಾಕೂಟದಲ್ಲಿ ಸ್ಪೂನ್ ಅಂಡ್ ಲೆಮನ್, ಹಗ್ಗ-ಜಗ್ಗಾಟ, ಮ್ಯೂಜಿಕಲ್ ಚೇರ್, ಮಡಿಕೆ ಹೊಡೆಯುವುದು, ಬಕೆಟ್ ಇನ್ ದ ಬಾಲ್, ಫೋಬಾಲ್, ಶರಣ-ಶರಣೆಯರ ವೇಷಭೂಷಣ ಸ್ಪರ್ಧೆಯನ್ನು ಏರ್ಪಡಿಸಲು ಶ್ರೀಮಠದಲ್ಲಿಂದು ನಡೆದ ಮಹಿಳಾ ಕ್ರೀಡಾಕೂಟ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
20-50 ವಯೋಮಾನದ ಮಹಿಳೆಯರು ಹಾಗೂ 50ರ ವಯೋಮಾನದ ನಂತರದ ಮಹಿಳೆಯರು ಪಾಲ್ಗೊಳ್ಳಬಹುದಾಗಿದ್ದು, ವಿಜೇತರಿಗೆ ಪ್ರಥಮ ಬಹುಮಾನ 3 ಸಾವಿರ ರೂ. ದ್ವಿತೀಯ ಬಹುಮಾನ 2 ಸಾವಿರ ರೂ. ಹಾಗು ತೃತೀಯ ಬಹುಮಾನ 1 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಕ್ರೀಡಾಸಕ್ತರು ಆಧಾರ್ ಕಾರ್ಡ್‌ನೊಂದಿಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಕ್ರೀಡಾಕೂಟದ ಮಹಾಪೋಷಕರಾದ ಡಾ. ಬಸವ ಕುಮಾರ ಸ್ವಾಮಿಗಳು, ಡಾ. ಬಸವಪ್ರಭು ಸ್ವಾಮಿಗಳು, ಮಹಿಳಾ ಕ್ರೀಡಾಕೂಟದ ಅಧ್ಯಕ್ಷೆ ಶ್ರೀಮತಿ ರುದ್ರಾಣಿ ಗಂಗಾದರ್, ಶ್ರೀಮತಿ ದೇವಿಕುಮಾರಿ, ಶ್ರೀಮತಿ ಮೋಕ್ಷ ರುದ್ರಸ್ವಾಮಿ, ಶ್ರೀಮತಿ ಆಶಾ ಹಾಲಪ್ಪನಾಯಕ, ಶ್ರೀಮತಿ ಪುಷ್ಪವಲ್ಲಿ, ಶ್ರೀಮತಿ ಸುಮಾ ರಾಜಶೇಖರ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page