top of page
25 Feb 2025
ಮುರುಘಾಮಠದಲ್ಲಿ
ಶಿವರಾತ್ರಿ ವಿಶೇಷ ಕಾರ್ಯಕ್ರಮ
ಚಿತ್ರದುರ್ಗ, ಫೆ. 25 : ನಗರದ ಶ್ರೀ ಜಗದ್ಗುರು
ಮುರುಘರಾಜೇಂದ್ರ ಬೃಹನ್ಮಠದಲ್ಲಿ ಇದೇ 26ರ ಬುಧವಾರ
ರಾತ್ರಿ 8 ಗಂಟೆಯಿಂದ 12 ಗಂಟೆಯವರೆಗೆ ಶಿವರಾತ್ರಿ
ಪ್ರಯುಕ್ತ ಮುರುಗಿಯ ಶಾಂತವೀರ
ಮುರುಘರಾಜೇಂದ್ರ ಮಹಾಸ್ವಾಮಿಗಳವರ ಕರ್ತೃವಿನ
ಗದ್ದುಗೆಯಲ್ಲಿ ವಚನಾಭಿಷೇಕ, ಸಹಜ ಶಿವಯೋಗ, ವಚನ
ಸಂಗೀತ, ಭಜನೆ ಕಾರ್ಯಕ್ರಮ ಅದರೊಂದಿಗೆ ಪ್ರಸಾದದ
ವ್ಯವಸ್ಥೆಯನ್ನೂ ಏರ್ಪಡಿಸಲಾಗಿದೆ ಎಂದು ಶ್ರೀಮಠದ ಪ್ರಕಟಣೆ
ತಿಳಿಸಿದೆ. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ
ಶಿವಯೋಗಿ.ಸಿ.ಕಳಸದ ಐ.ಎ.ಎಸ್.(ನಿ), ಸದಸ್ಯರಾದ ಡಾ. ಬಸವಕುಮಾರ
ಮಹಾಸ್ವಾಮಿಗಳವರು ಉಪಸ್ಥಿತರಿರುವರು. ಎಂದಿನAತೆ
ಶ್ರೀಮಠದ ಅಭಿಮಾನಿಗಳು, ಭಕ್ತರು ಆಗಮಿಸಬೇಕೆಂದೂ
ಸಹ ಕೋರಿದೆ.
bottom of page