
1 Aug 2025
ಮುರುಘಾ ಗುರುಪರಂಪರೆಯ ಪೀಠಾಧಿಪತಿಗಳಾಗಿದ್ದ ಮೂರು ಸಾವಿರದ (ಸಣ್ಣ) ಶ್ರೀ ಗುರುಪಾದ ಮುರುಘರಾಜೇಂದ್ರ ಮಹಾಸ್ವಾಮಿಗಳವರ ವ್ಯಕ್ತಿತ್ವ ಸಾಧನೆಯ ಪಥ ದರ್ಶನ ಚಿಂತನ ಇಂದು ನಡೆಯಿತು.
ಇಂದು ಮುರುಘಾ ಗುರುಪರಂಪರೆಯ ಮೂರು ಸಾವಿರದ (ಸಣ್ಣ)ಶ್ರೀ ಗುರುಪಾದ ಮುರುಘರಾಜೇಂದ್ರ ಮಹಾಸ್ವಾಮಿಗಳವರ ವ್ಯಕ್ತಿತ್ವ ಸಾಧನೆಯ ಪಥ ದರ್ಶನದ ವಿಷಯಾವಲೋಕನ , ವಚನಾಭಿಷೇಕ ಇತ್ಯಾದಿ ವಿಶೇಷ ಕಾರ್ಯಕ್ರಮಗಳು
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮುಂಜಾನೆಯಿಂದ ಮೂಲ ಕರ್ತೃವಿನ ಶ್ರೀಮಠದ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ನಡೆಯಿತು.
ಬಸವ ಮುರುಘೇಂದ್ರ ಶ್ರೀಗಳವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ,ಭಕ್ತರು,ಆಭಿಮಾನಿಗಳು,ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು. ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆ.ಕುಮಾರಸ್ವಾಮಿ ವಿಷಯಾವಲೋಕನ ನಡೆಸಿಕೊಟ್ಟರು.ಧಾರವಾಡದ ಡಾ.ಅಕ್ಕಮಹಾದೇವಿ ಸಿರಿಯಣ್ಣನವರ ಹಾಗೂ ಚಿತ್ರದುರ್ಗದ ಯೋಗವನ ಬೆಟ್ಟದ ಸಿಬ್ಬಂದಿ ಇಂದಿನ ಸೇವಾಕರ್ತರಾಗಿದ್ದರು.