
9 Oct 2024
ದಾವಣಗೆರೆಯ ವಿರಕ್ತಮಠದ ಶಿವಯೋಗದ ಪ್ರಾತ್ಯಕ್ಷಿಕೆ ವಹಿಸಿದ್ದ ಡಾ.ಬಸವಪ್ರಭು ಸ್ವಾಮೀಜಿಯವರು ಮಾತನಾಡಿದ ವೈರಾಗ್ಯ ನಿಧಿಯಾದ ಅಕ್ಕಮಹಾದೇವಿಯವರು ಲೋಕದ ಚೇಷ್ಠೆಗೆ ರವಿ ಬೀಜವಾದಂತೆ ಕರಣಂಗಳ ಚೇಷ್ಠೆಗೆ ಮನವೇ ಬೀಜ. ಸೂರ್ಯೋದಯ ಆಗುತ್ತಲೇ ಜಗತ್ತಿನ ಚಟುವಟಿಕೆಗಳು ಪ್ರಾರಂಭವಾಗುತ್ತವೆ. ಹಾಗೇಯೆ ಮಾನವನಲ್ಲಿ ಕರಣಂಗಳ ಚೇಷ್ಠೆಗೆ ಮಾನವೇ ಬೀಜ ಎಂದಿದ್ದಾರೆ. ಅಕ್ಕನ ವಚನ ಅದು ನಿರ್ವಚನ ಎಂದು ಚನ್ನಬಸವಣ್ಣನವರು ಹೇಳಿದ್ದಾರೆ. ಮಾನವನ ಮನಸ್ಸು ಕರಣಂಗಳ ಚೇಷ್ಠೆಗೆ ಕಾರಣವಾಗಿದೆ. ಹಾಗಾಗಿ ಮನಸ್ಸನ್ನು ನಾವು ಗೆಲ್ಲಬೇಕು. ಮನಸ್ಸಿನ ಗುಣ ಚಂಚಲತೆ, ಮನಸ್ಸಿನ ಇನ್ನೊಂದು ಗುಣ ಚಪಲತೆ ಚಪಲ ಎಂದರೆ ಬೇಕು ಎನ್ನುವುದು. ನಾವು ಯಾವುದು ಬೇಡ ಎಂದುಕೊಳ್ಳುತ್ತೇವೆಯೋ ಅದು ಬೇಕು ಎನ್ನುತ್ತದೆ. ಅದೇ ಚಪಲತೆ ಇಂತಹ ಮನಸ್ಸನ್ನು ನಿಯಂತ್ರಣ ಮಾಡಬೇಕು. ಇದನ್ನು ಕಟ್ಟಿ ಹಾಕಲು 12 ನೇ ಶತಮಾನದ ಬಸವಣ್ಣನವರು ಇಷ್ಟಲಿಂಗ ನೀಡಿದರು. ಯಾರೂ ಇಷ್ಟಲಿಂಗವನ್ನು ಇಟ್ಟುಕೊಂಡು ದೃಷ್ಟಿದ್ಯಾನ ಮಾಡುತ್ತಾರೋ ಅವರ ಮನಸ್ಸು ಹೇಳಿದಂತೆ ಕೇಳುತ್ತದೆ. ಮನಸ್ಸು ಹೇಳಿದಂತೆ ನಾವು ಕೇಳಬಾರದು. ನಾವು ಹೇಳಿದಂತೆ ನಮ್ಮ ಮನಸ್ಸು ಕೇಳಬೇಕು. ಆಗ ಅವರು ಮಹಾನ್ ಸಾಧಕರಾಗಿ ಬೆಳೆಯುತ್ತಾರೆ. ಮನಸ್ಸು ಹೇಳಿದಂತೆ ನಾವು ಕೇಳಿದರೆ ಬದುಕಿನ ದಾರಿಯನ್ನು ತಪ್ಪಿಸುತ್ತದೆ. ಹೊಸದು ಕಂಡ ತಕ್ಷಣ ಮನಸ್ಸು ಬೇಕು ಬೇಕು ಎಂದು ಹಾತೊರೆಯುತ್ತದೆ. ಮನಸ್ಸು ಹೇಳಿದಂತೆ ಕೇಳಿದರೆ ಜೀವನ ನಡೆಸುವುದು ಕಷ್ಟವಾಗುತ್ತದೆ. ಆಗಾಗಿ ನಾವು ಇಂತಹ ಮನಸ್ಸನ್ನು ಗೆಲ್ಲಬೇಕು. ವೈರಿಗಳನ್ನು ಗೆಲ್ಲುವುದಕ್ಕಿಂತ ನಮ್ಮ ಮನಸ್ಸನ್ನು ಗೆದ್ದರೆ ನಾವೇ ಮಹಾತ್ಮರಾಗುತ್ತೇವೆ. ವೈರಿಗಳನ್ನು ಗೆದ್ದವನು ಶೂರನಾಗಬಹುದು. ಪರಾಕ್ರಮಿಯಾಗಬಹುದು, ಆದರೆ ನಿಜವಾದ ಪರಾಕ್ರಮಿ ಶೂರ ಯಾರು ಎಂದರೆ ತಮ್ಮ ಮನಸ್ಸನ್ನು ಗೆಲ್ಲುತ್ತಾನೋ ಅವರೆ. ಶೂರ, ಪರಾಕ್ರಮಿಗಳು ಶರಣರಾಗಿದ್ದಾರೆಂದರೆ 12 ನೇ ಶತಮಾನದ ಬಸವಣ್ಣನವರು ಹಾಗೂ ಶರಣ ಶರಣೇರಾಗಿದ್ದಾರೆ. ನಾವು ಸಹ ಅಂತರ ಸಾಧಕರಾಗಬೇಕೆಂದರೆ ನಮ್ಮ ಮನಸ್ಸನ್ನು ನಾವು ಗೆಲ್ಲಬೇಕು. ಬೆಳಿಗ್ಗೆ ಎದ್ದು ಯೋಗ ಮಾಡಲು ಹೋಗಬೇಕೆಂದು ಮನಸ್ಸಿಗೆ ಹೇಳಿ ಮಲಗಿ ಬೇಗ ಎದ್ದು ತಯಾರಾಗಿ ಮನಸ್ಸು ಮಾಡಿ ಶಿವಯೋಗಕ್ಕೆ ಬಂದಿದ್ದೀರಾ ಆಗಾಗಿ ನೀವು ಸಾಧಕರೆ ಎಂದರು. ಚಂಚಲತೆ ಮತ್ತು ಚಪಲತೆಯನ್ನು ಕಳೆದುಕೊಳ್ಳುವ ಏಕಾಗ್ರತೆ ಬೇಕು, ಶಿವಯೋಗ ಮಾಡುವುದರಿಂದ ದೃಷ್ಟಿ ದ್ಯಾನ ಮಾಡುವುದರಿಂದ ಏಕಾಗ್ರತೆ ಸಿಗುತ್ತದೆ. ಯಾವುದೇ ಕೆಲಸ ಮಾಡಲಿ ಅಲ್ಲಿ ಏಕಾಗ್ರತೆ ಮುಖ್ಯ ಚಾಲಕನಿಗೆ ಏಕಾಗ್ರತೆ ಇಲ್ಲದೆ ಹೋದರೆ ಅಪಘಾತವಾಗುತ್ತದೆ. ಆಗೆಯೇ ಮನಸ್ಸಿನ ಏಕಾಗ್ರತೆಗೆ ಶಿವಯೋಗ ಮುಖ್ಯ, ಆಗಾಗಿ ಪ್ರತಿ ನಿತ್ಯ ಮನೆಯಲ್ಲಿ ಶಿವಯೋಗ ಮಾಡೋಣ ನಮ್ಮ ಮನಸ್ಸನ್ನು ಗೆದ್ದು ಮಹಾತ್ಮರಾಗೋಣ ಮನಸ್ಸನ್ನು ಶಿವಯೋಗದಲ್ಲಿ ಕಟ್ಟಿ ಹಾಕಲು ಲಿಂಗ ಕಟ್ಟಿಕೊಳ್ಳೋಣ ಎಂದು ಹೇಳುತ್ತಾ ವಿಭೂತಿ ಧಾರಣೆ ವಚನಾಭಿಷೇಕ ಭಾವಶುದ್ದಿಯಿಂದ ಭಕ್ತಿ ಶುದ್ದಿಯಿಂದ ಇಷ್ಟ ಲಿಂಗಕ್ಕೆ ಪೂಜಿಸಿ ವಿಶ್ವಕ್ಕೆ ಕಲ್ಯಾಣವಾಗಲೆಂದರು.
ಕಾರ್ಯಕ್ರಮದಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ, ಚನ್ನಗಿರಿಯ ಶ್ರೀ ಹಾಲಸ್ವಾಮಿ ವಿರಕ್ತ ಮಠದ ಡಾ. ಬಸವ ಜಯಚಂದ್ರ ಸ್ವಾಮಿಗಳು ಇರಕಲ್ ಶಿವಶಕ್ತಿ ಪೀಠದ ಶ್ರೀ ಬಸವ ಪ್ರಸಾದ ಸ್ವಾಮಿಗಳು, ನಿಪ್ಪಾಣಿಯ ಶ್ರೀ ಮುರುಘಂದ್ರ ಮಠದ ಶ್ರೀ ಬಸವ ಮಲ್ಲಕಾರ್ಜುನ ಸ್ವಾಮಿಗಳು, ನಿಡಸೋಸಿಯ ಶ್ರೀ ದುರದುಂಡೇಶ್ವರ ಸಿದ್ದ ಸಂಸ್ಥಾನದ ಶ್ರೀ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಮುಖಂಡಿ ಬಸವಕೇಂದ್ರದ ರವಿ ಯಡಹಳ್ಳಿ, ದಾರವಾಡ ಬಸವಕೇಂದ್ರದ ಈಶ್ವರ್ ಸಾಣೆಕೊಪ್ಪ, ಬೀದರ್‌ನ ಕನ್ನಡ ಸಾಹಿತ್ಯಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಶ್ರೀ ಸುರೇಶ್ ಚನ್ನಶೆಟ್ಟಿ, ಸಿಂಧನೂರಿನ ಚಂದ್ರಶೇಖರ ಗೌಡ ಬಸವಕೇಂದ್ರದ ಶರಣಪ್ಪ ಮಿಠಾರೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿದರು. ಡಾ. ಬಸವಕುಮಾರ ಸ್ವಾಮೀಜಿಯವರು ಗೌರವ ಸಮರ್ಪಣೆ ನಡೆಸಿಕೊಟ್ಟರು.



