
8 Oct 2024
ಬೆಂಗಳೂರಿನ ಬಸವ ಸಮಿತಿ ಅಧ್ಯಕ್ಷರಾದ ಶ್ರೀ ಅರವಿಂದ ಜತ್ತಿ ಲಿಂಗಯೋಗದ ವೈಜ್ಞಾನಿಕತೆಯ ಬಗ್ಗೆ ಮಾತನಾಡುತ್ತಾ ಬದುಕೇ ಒಂದು ಯೋಗ, ಬದುಕು ಬಿಟ್ಟು ಯೋಗವಿಲ್ಲ. ಯೋಗ ಬಿಟ್ಟು ಬದುಕು ಇಲ್ಲ. ಯೋಗವೆಂದರೆ ದೈಹಿಕ ಯೋಗಕ್ಕೆ ಒಳಗಾಗುತ್ತೇವೆ. ಆದರೆ ಬಸವತತ್ವದಲ್ಲಿ ಬದುಕೇ ಒಂದು ಯೋಗ ಶಿವಯೋಗವೇ ಬೇರೆ ದೈಹಿಕ ಯೋಗವೇ ಬೇರೆ, ಎನ್ನುವುದು ಶರಣರ ದೃಷ್ಟಿಯಲ್ಲಿ ಅಂತರಂಗ ಮತ್ತು ಬಹಿರಂಗಗಳ ಒಂದು ಸಂಗಮ. ಅಂತರಂಗ ವಿಕಾಸಕ್ಕೆ ಬಸವಣ್ಣನವರು ನಮಗೆ ಇಷ್ಟ ಲಿಂಗವನ್ನು ಕೊಟ್ಟರೆ ಬಹಿರಂಗದ ವಿಕಾಸಕ್ಕೆ ನೀತಿ ಮೌಲ್ಯಗಳನ್ನು ಕೊಟ್ಟಿದ್ದಾರೆ. ಕೂಡಲ ಸಂಗಮ ದೇವ ಎಂಬ ಅಂಕಿತ ನಾಮವನ್ನು ಇಟ್ಟುಕೊಂಡಿದ್ದಾರೆ. ಅನೇಕ ವಚನಗಳಲ್ಲಿ ಇದಕ್ಕೆ ಉತ್ತರ ಕೊಡುತ್ತಾ ಬಂದಿದ್ದಾರೆ. ಇದನ್ನು ವೈಜ್ಞಾನಿಕವಾಗಿ ನೋಡುವುದಾದರೆ ಇದು ಸಹ ಒಂದು ಬೇರೆ ಧರ್ಮದಂತೇ ಔಪಚಾರಿಕತೆಯಿಂದ ಕೂಡಿದ್ದಾಗುತ್ತದೆ. ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ಧಿ ಇದೇ ಕೂಡಲ ಸಂಗಮ ನೊಲಿಸುವ ಪರಿ ಎಂದಿದ್ದಾರೆ. ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂಬ ವಚನದಲ್ಲಿ ಶರಣರು ಬೇಡ ಬೇಡ ಎಂದು ಹೇಳುತ್ತಾ ಇದನ್ನೇ ಮಾಡುತ್ತಾ ಬಂದಿದ್ದಾರೆ.
ನಿಜದೃಷ್ಟಿ ಕೋನದಲ್ಲಿ ಅಂತರಂಗ ಶುದ್ದಿ ಬಹಿರಂಗ ಶುದ್ಧಿ ಎರಡನ್ನು ಅಳವಡಿಸಿಕೊಂಡು ಕೂಡಲು ಆಗುವ ಸಂಗಮವೇ ಕೂಡಲ ಸಂಗಮದೇವ. ಸಂಸ್ಕೃತಿಗೆ ವೈರುದ್ಯವಾದ ಚಿಂತನೆಗಳು ಬಂದಾಗ ಎದುರಿಸುವ ಶಕ್ತಿ ನಮ್ಮ ಪೂಜ್ಯರ ಮಾರ್ಗದರ್ಶನದಿಂದ ಮಾತ್ರ ಸಾಧ್ಯ. ವಿದೇಶದ ಹತ್ತು ಭಾಷೆಗಳು ಅನುವಾದ ಮಾಡುವ ಕಾರ್ಯದಲ್ಲಿ ನಾನು ತೊಡಗಿದ್ದೇನೆ. ಮರುಘಾಮಠದ ಪರಂಪರೆ ಬಹಳ ಪವಿತ್ರವಾದುದು. ಇಂತಹ ಪರಂಪರೆಯುಳ್ಳ ಮುರುಘಾಮಠದ ಬಸವತತ್ವ ಧ್ವಜಾರೋಹಣ ಅವಕಾಶ ನೀಡಿದ ಡಾ. ಬಸವಕುಮಾರ ಸ್ವಾಮಿಜಿಯವರಿಗೆ ನಾನು ಅಬಾರಿಯಾಗಿರುತ್ತೇನೆ ಎಂದು ನುಡಿದರು.
ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿಯವರು ಮಾತನಾಡಿ ನಾಡಿನ ಯಾವ ಮಠಗಳಲ್ಲಿ ಬಸತತ್ವಗಳು ಕಾರ್ಯಕ್ರಮಗಳು ನಡೆಯುತ್ತವೆ ಎಂದು ತಿಳಿದುಕೊಂಡು ಅಲ್ಲಿಗೆ ಹೋಗಿ ಅಧ್ಯಯನ ಮಾಡಿ ಅವುಗಳನ್ನು ವಿಜಯ ಸಂದೇಶ ಪತ್ರಿಕೆಯ ಮೂಲಕ ನಾಡಿನ ಜನರಿಗೆ ಮುಟ್ಟಿಸುವ ಕೆಲಸವನ್ನು ಶ್ರೀ ಅರವಿಂದ ಜತ್ತಿಯವರು ಮಾಡುತ್ತಿದ್ದಾರೆ ಎಂದರು.
ದಾವಣಗೆರೆಯ ವಿರಕ್ತ ಮಠದ ಡಾ. ಬಸವಪ್ರಭು ಸ್ವಾಮೀಜಿ ಶಿವಯೋಗ ಪ್ರಾತ್ಯಾಕ್ಷಿಕೆ ನೀಡುತ್ತಾ ಮಾತನಾಡಿ ಸಾಮೂಹಿಕ ಶಿವಯೋಗದ ಶಕ್ತಿ ಅಪಾರ, ಒಳ್ಳೆಯ ಉದ್ದೇಶದಿಂದ ನಾವು ಪ್ರಾರ್ಥನೆ ಮಾಡಿದರೆ ನಮ್ಮೊಳಗಿನ ಇಷ್ಟಲಿಂಗ ಆಶೀರ್ವದಿಸುತ್ತಾನೆ. ಆದ್ದರಿಂದ ಪ್ರತಿ ನಿತ್ಯ ಶಿವಯೋಗ ಮಾಡೋಣ ನಮ್ಮ ಕಷ್ಟವನ್ನು ಲಿಂಗದ ಮುಂದೆ ಹೇಳೋಣ ಆ ಕಷ್ಟಗಳನ್ನು ನಿವಾರಣೆ ಮಾಡುವ ಶಕ್ತಿ ಶಿವಯೋಗದಲ್ಲಿದೆ ಎಂದರು. ಧ್ಯಾನದ ಮೂಲಕ ಸಮಾಧಾನವನ್ನು ಪಡೆಯೋಣ ಇಷ್ಟ ಲಿಂಗಕ್ಕೆ ವಿಭೂತಿ ಧಾರಣೆ ಮಾಡಿ ವಚನಾಭಿಷೇಕ ಮಾಡಿ ಭಾವ ಭಕ್ತಿಯಿಂದ ಶಿವಯೋಗ ನಡೆಸಿದರ. ಪ್ರತಿ ನಿತ್ಯ ಧ್ಯಾನ ಮಾಡುವುದರಿಂದ ಬದುಕಿನಲ್ಲಿ ಸುಖ, ಶಾಂತಿ ಲಭಿಸುತ್ತದೆ. ವಿಶ್ವಕ್ಕೆ ಕಲ್ಯಾಣವಾಗಲೆಂದು ಇಷ್ಟಲಿಂಗವನ್ನು ಪ್ರಾರ್ಥಿಸೋಣ ಎಂದರು.
ಕೊಡ್ಲಿಪೇಟೆಯ ಶ್ರೀ ಕಲ್ಲಳ್ಳಿ ಮಠದ ಶ್ರೀ ರುದ್ರಮುನಿಸ್ವಾಮಿಗಳು, ಚಿತ್ರದುರ್ಗದ ಛಲವಾದಿ ಗುರುಪೀಠದ ಶ್ರೀ ಬಸವನಾಗೀ ದೇವ ಸ್ವಾಮಿಗಳು, ತಂಗಡಗಿ ಹಡಪದ ಅಪ್ಪಣ್ಣದೇವರ ಗುರುಪೀಠದ ಶ್ರೀ ಅನ್ನದಾನಿ ಭಾರತೀಪ್ರಿಯ ಅಪ್ಪಣ್ಣ ಸ್ವಾಮಿಗಳು ತೆಲಸಂಗದ ಶ್ರೀ ಕುಂಬಾರ ಗುಂಡಯ್ಯ ಗುರುಪೀಠದ ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮಿಗಳು ಸಮಾರಂಭದ ಸಮ್ಮಖವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಳಿಯಾಳ ಬಸವಕೇಂದ್ರದ ಸುಮಂಗಲ, ಕಲಬುರ್ಗಿ ಜಾ.ಲಿಂ. ಮಹಿಳಾ ಘಟಕದ ಅಧ್ಯಕ್ಷರಾದ ಶರಣೆ ನಳಿನಿ ಮಹಾಗಾಂವಕರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿದರೆ ಡಾ. ಬಸವಕುಮಾರ ಸ್ವಾಮೀಜಿವರು ಸ್ವಾಗತ, ನಿರೂಪಣೆ ಹಾಗೂ ಶರಣು ಸಮರ್ಪಣೆ ನೆರವೇರಿಸಿದರು.





