
19 Jan 2025
ವಿಷಯ-ಶರಣರು ಪ್ರತಿಪಾದಿಸಿದ ಜೀವನ ಮೌಲ್ಯಗಳು
ಚಿತ್ರದುರ್ಗ: 13ನೆಯ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಶರಣರು ಪ್ರತಿಪಾದಿಸಿದ ಜೀವನ ಮೌಲ್ಯಗಳು ವಿಚಾರ ಕುರಿತು ಚಿಂತನ ಗೋಷ್ಠಿಯ ಚಿಂತನ ಗೋಷ್ಠಿಯ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ಚಿಕ್ಕಮಗಳೂರು ಶ್ರೀ ಬಸವತತ್ವಪೀಠದ ಡಾ.ಬಸವಮರುಳಸಿದ್ಧ ಸ್ವಾಮಿಗಳು ಮಾತನಾಡಿ, ಧೈರ್ಯ ಎಂಬುದು ಅತಿ ದೊಡ್ಡ ಮೌಲ್ಯ. ಅದು ಆತ್ಮಸ್ಥೆöÊರ್ಯವನ್ನು ತುಂಬುವುದು. ಎಲ್ಲಾ ಒಳ್ಳೆಯ ಮೌಲ್ಯಗಳನ್ನು ರೂಢಿಸುತ್ತದೆ. ಎಲ್ಲರನ್ನೂ ಶರಣರನ್ನಾಗಿ ಕಾಣುವುದು ಮುಖ್ಯ ಅದರಿಂದ ಸಮಾನ ಭಾವನೆ ಮೂಡುವುದು. ಸಮಯ ಪಾಲನೆ, ಧೈರ್ಯ, ಶಿವಸ್ವರೂಪಿಯಾಗಿ ಈ 3 ಮೌಲ್ಯಗಳನ್ನು ಅಳವಡಿಸಿಕೊಂಡರೆ ಎಲ್ಲ ಕಾರ್ಯಗಳು ಸಿದ್ಧಿಯಾಗುವವು. ಬಸವಾದಿ ಶರಣರು ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಆದರ್ಶಗಳನ್ನು, ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಕಾಲಘಟ್ಟಕ್ಕೆ ಅನುಗುಣವಾಗಿ ತ್ರಿವಿಧ ದಾಸೋಹದ ಮೂಲಕ ಶರಣರು ತಿಳಿಸಿಕೊಟ್ಟಿದ್ದಾರೆ.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮೈಸೂರು ಕ.ರಾ.ಮು.ವಿ.ವಿ. ಕುಲಸಚಿವ ಡಾ. ಹೆಚ್ ವಿಶ್ವನಾಥ್ ಮಾತನಾಡಿ, ಭಕ್ತಿ, ಜೀವನ ಮೌಲ್ಯಗಳು ನಶಿಸುತ್ತಿವೆ. ಶರಣ ಸಾಹಿತ್ಯ ಪರಂಪರೆಯು ಅನೇಕ ಮಠಮಾನ್ಯಗಳ ಮಖಾಂತರ ಶೈಕ್ಷಣಿಕ, ಧಾರ್ಮಿಕ, ಆರ್ಥಿಕ, ದಾಸೋಹ ಕ್ಷೇತ್ರಕ್ಕೆ ಕಲ್ಯಾಣ ಕ್ರಾಂತಿಗೆ ಬುನಾದಿಯಾಗಿದೆ. ಶರಣ ಸಂಸ್ಕೃತಿಯಲ್ಲಿ ಮಹಿಳೆಯರಿಗೂ ಪೂರಕವಾದಂತಹ ಸನ್ನಿವೇಶಗಳನ್ನು ಸೃಷ್ಟಿ ಮಾಡಿತ್ತು. ಮಹಿಳಾ ಸಮಾಜಕ್ಕೆ ಸಮಾನತೆಯನ್ನು ಅಕ್ಕಮಹಾದೇವಿ, ಬಸವಾದಿ ಶರಣರು ನೀಡಿದ್ದಾರೆ.
ಹಂಪಿ ವಿಶ್ರಾಂತ ಪ್ರಾಧ್ಯಾಪಕ ಡಾ. ಅಮರೇಶ ನುಗಡೋಣಿ ಮಾತನಾಡಿ, 900 ವರ್ಷದುದ್ದಕ್ಕೂ ವಚನ ಸಾಹಿತ್ಯವನ್ನು ಕೇಳುತ್ತಾ ಬಂದಿದ್ದೇವೆ. ಜನಸಾಮಾನ್ಯರು ಉದ್ದಾರ ಮಾಡುವುದಕ್ಕೆ ಸಮಾಜದಂಚಿನಿAದ ಹುಟ್ಟಿನ ವ್ಯಕ್ತಿಯವರೆಗೆ ಸಂಚಲನ ಮೂಡಿಸುವ ಶಕ್ತಿ ವಚನಗಳು ಹೊಂದಿವೆ. ವಚನ ಸಾಹಿತ್ಯ ತಾತ್ಪರ್ಯವೆಂದರೆ ಬಸವಾದಿ ಶರಣರ ಸಮತೆ ಮತ್ತು ಶ್ರಮತೆ ಮನುಷ್ಯರಲ್ಲಿ ತಾರತಮ್ಯ ಮೂಡಿದೆ. ಸಮಾನರಾಗಿ ಬಾಳುವುದಕ್ಕೆ ಅನುವು ಮಾಡಿಕೊಡಲು ವಚನ ಸಾಹಿತ್ಯ ಪ್ರಾಮುಖ್ಯತೆ ಹೊಂದಿದೆ. ಯಾವುದೇ ಧರ್ಮಗಳಲ್ಲಾಗಲೀ ಸ್ರೀಯರಿಗೆ ಸ್ಥಾನಮಾನಗಳಿರಲಿಲ್ಲ ಅಂತಹ ಸಮಯದಲ್ಲಿ ಮಹಿಳಾ ಸ್ವಾತಂತ್ರಕ್ಕೆ ಬಸವಾದಿ ಶರಣರು 9ನೇ ಶತಮಾನದಲ್ಲಿ ಶ್ರಮಿಸಿದರು ಮತ್ತು ವಚನ ಸಾಹಿತ್ಯ ರಚಿಸಿದರು ಎಂದರು.
ಕರ್ನಾಟಕ ರಾಜ್ಯ ಸಂಶೋಧನಾ ವೈಜ್ಞಾನಿಕ ಪರಿಷತ್ತ್ನ ಅಧ್ಯಕ್ಷರಾದ ಡಾ.ಹುಲಿಕಲ್ ನಟರಾಜ್ ವೈಚಾರಿಕ ಪ್ರಜ್ಞೆ ಬಗ್ಗೆ ಉಪನ್ಯಾಸ ನೀಡುತ್ತಾ 12 ನೇ ಶತಮಾನಗಳ ಹಿಂದೆ ವೈಚಾರಿಕ ಮೌಢ್ಯತೆ ತಾಂಡವವಾಡುತ್ತಿತ್ತು, ಬಸವಣ್ಣನವರ ಒಂದು ವಚನ ಕಳಬೇಡ ಕೊಲಬೇಡ ಎಂಬ ಒಂದು ವಚನವನ್ನು ಅನುಸರಿಸಿದ್ದರೇ ಇಂದು ಕಾನೂನಿನಡಿ ಅನೇಕ ಸೆಕ್ಷನ್‌ಗಳು ಬರುತ್ತಿರರಲಿಲ್ಲ. ಶೂನ್ಯದಿಂದ ಏನನ್ನು ಸೃಷ್ಠಿಮಾಡಲು ಸಾಧ್ಯವಿಲ್ಲ ವಿಜ್ಞಾನದಿಂದ ಸಾಬಿತಾಗಿದೆ. ಮೋಸಮಾಡುವ ಜನ ಇದ್ದಾರೆ ಮೋಸ ಹೋಗುವ ಜನರೂ ಇದ್ದಾರೆ. ಇಂತಹ ಅಭಿಮಾನಿಗಳು ಇಷ್ಟವಾಗುವುದಿಲ್ಲ ಅನುಯಾಯಿಗಳು ನಮಗೆ ಇಷ.್ಟ ವಾಮಾಚಾರ, ಮಾಟ ಮಂತ್ರ ಎಂಬುAದೆÀಲ್ಲಾ ಸುಳ್ಳು ಬಸವಣ್ಣನವರ ಅನುಯಾಯಿಗಳಾಗಿದ್ದರೆ ತಾವುಗಳು ಪಂಚ ಅಂಗಗಳ ಕಡೆ ಗಮನ ಕೊಟ್ಟ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಿ. ಇಂದಿನ ಮಕ್ಕಳಿಗೆ ವೈಜ್ಞಾನಿಕವಾದ ಅರಿವನ್ನು ಮೂಡಿಸಬೇಕು. ವಾಮಾಚಾರಗಳಿಂದ ದೂರವಿರುವುದನ್ನು ಕಲಿಸಿ, ಮನೆಗಳಲ್ಲಿ ಟಿ.ವಿ ಮಾಧ್ಯಮಗಳನ್ನು ಮೋಬೈಲ್ ಒಳಕೆಯನ್ನು ದೂರ ಮಾಡಿಸಿ. ಸಂಸ್ಕೃತಿ, ಸಾಹಿತ್ಯ ಮತ್ತು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಮೂಡಿಸಿ ಎಂದು ಕರೆ ನೀಡಿದರು.
ಪ್ರಾಧ್ಯಾಪಕ ಡಾ.ಸೀ.ಚ.ಯತೀಶ್ವರ ಮತನಾಡಿ, 12ನೆಯ ಶತಮಾನ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಕಾಲವಾಗಿತ್ತು. ಸ್ವರ್ಗ, ನರಕ ಎಂಬ ಭಾವನೆಯಿಂದ ಸಮಾಜ ತೆವಳುತ್ತಿದೆ. ಶರಣರ ಅಮೂಲ್ಯ ಕೊಡುಗೆಗಳನ್ನು ನಾವು ಮರೆ ಮಾಡುತ್ತಿದ್ದೇವೆ. ಕಾಯಕದ ವಿಚಾರವನ್ನು ವಚನದ ಮೂಲಕ ತಿಳಿಸಿದರು. ಅಂತಹ ವಿಚಾರಗಳನ್ನು ನಾವು ಅಳವಡಿಸಿಕೊಳ್ಳದೆ ಸಾಗುತ್ತಿದ್ದೇವೆ. ಕಾಯಕ ಸಾರವನ್ನು ತಿಳಿದು ಅದರಂತೆ ಜೀವನ ನಡೆಸಿದರೆ ಮಾತ್ರ ಬದುಕು ಅರ್ಥಪೂರ್ಣ ಸಾಧ್ಯ. ಕಾಯಕದ ಮೂಲಕ ಶ್ರಮ, ಶ್ರಮದ ಮೂಲಕ ಬೆಳೆ, ಬೆಳೆಯ ಮೂಲಕ ದಾಸೋಹ ಮಾಡಿದರೆ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡಿ, ಅವಕಾಶಗಳ ನಿರ್ಮಾಣವೇ ಅಭಿವೃದ್ಧಿ. ದಾಸೋಹ ಎಂದರೆ ನೀಡಿಕೆಯ, ಹಂಚಿಕೊಳ್ಳುವ, ಮಂಥನ ಮಾಡಿಕೊಳ್ಳುವ ಕ್ರಿಯೆ. ಕಾಯಕ, ವೈಚಾರಿಕ, ಸತ್ಯ ಶುದ್ಧಪೂರಕವಾಗಿರಬೇಕು. ಅದರಿಂದ ಬಂದ ಹೂಡಿಕೆಯೇ ದಾಸೋಹವಾಗುತ್ತದೆ. ಇಂದಿನ ಕಾಲಮಾನದ ಜನರು ಸಂಪತ್ತು, ಅಧಿಕಾರ ಎಲ್ಲ ನಮಗೇ ಇರಲಿ ಎಂಬ ಸ್ವಾರ್ಥಭಾವನೆ ಹೊಂದಿರುತ್ತಾರೆ. ಹನ್ನೆರಡನೇ ಶತಮಾನದ ಬಸವಾದಿ ಶರಣರ ವಚನಗಳು ಇಂತಹವುಗಳಿಗೆ ಮಾರ್ಗವನ್ನು ಸೂಚಿಸುವಂತವುಗಳಾಗಿವೆ. ಹಂಚಿಕೆಯ ನ್ಯಾಯವು ಸಂಘರ್ಷಣೆಗೆ ಕಾರಣವಾಗಬಾರದು. ಮೌಢ್ಯಗಳಿಂದ ದೂರವಿರಬೇಕೆಂದು ನುಡಿದರು.
ಕಾರ್ಯಕ್ರಮದಲ್ಲಿ ಮೈಸೂರು ಸಿದ್ಧರಹಳ್ಳಿ ಪಾರಮಾರ್ಥ ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಸಮ್ಮೇಳನಾಧ್ಯಕ್ಷರಾದ ಡಾ.ಸಿದ್ದರಾಮ ಬೆಲ್ದಾಳ ಶರಣರು, ಮರ್ಚೆಂಟ್ಸ್ ಬ್ಯಾಂಕ್ ಅಧ್ಯಕ್ಷ ಶ್ರೀ ಎಸ್.ಆರ್.¯ಕ್ಷಿö್ಮಕಾಂತ್‌ರೆಡ್ಡಿ, ಸಾಹಿತಿ ಡಾ.ಮೀರಾಸಾಬಿಹಳ್ಳಿ ಶಿವಣ್ಣ, ಶ್ರೀ ಜೆ.ಎಂ.ಜಯಕುಮಾರ್, ಸಾಹಿತಿ ಶ್ರೀ ಚಂದ್ರಶೇಖರ ತಾಳ್ಯ, ಹಿರಿಯ ಪತ್ರಕರ್ತ ಶ್ರೀಟಿ.ಕೆ.ಬಸವರಾಜ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ ದಿನೇಶ್‌ಗೌಡಗೆರೆ, ಶ್ರೀ ಲಿಂಗರಾಜು, ಪ್ರಗತಿಪರ ಚಿಂತಕ ಶ್ರೀ ಹೆಚ್ ಆನಂದಕುಮಾರ್, ಶ್ರೀ ಪಾಲನೇತ್ರ, ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ್ಷ ಡಾ.ಸಿ.ಸೋಮಶೇSರ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೆ.ಎಂ.ವೀರೇಶ್ ಉಪಸ್ಥಿತರಿದ್ದರು.
ಲಾಸಿಕ ಫೌಂಡೇಶನ್ ಶ್ವೇತಾ ಭಟ್ ಮತ್ತು ತಂಡದವರು ರೂಪಕ, ಶ್ರೀ ಎಸ್.ಎಸ್.ಹಿರೇಮಠ್ ತಂಡದವರಿAದ ವಚನದಲ್ಲಿ ಜನಪದಗೀತೆ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕೆ.ಎಸ್.ಮೂರ್ತಿ ಸ್ವಾಗತಿಸಿ, ಉಷಾಕಿರಣ್, ನವೀನ್ ಮಸ್ಕಲ್ ನಿರೂಪಿಸಿ, ನೇತ್ರಾವತಿ ವಂದಿಸಿದರು.



