top of page

13ನೆಯ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ಸಾಂಸ್ಕೃತಿಕ ಕಾರ್ಯಕ್ರಮ.

18 Jan 2025

ಚಿತ್ರದುರ್ಗ: 13ನೆಯ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಅಂಗವಾಗಿ ಆಯೋಜಿಸಲ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕನ್ನಡ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಡೋಲು ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಮನುಷ್ಯನಿಗೆ ಎನೇನು ಬೇಕು ಅದೆಲ್ಲವನ್ನು 12ನೇಯ ಶತಮಾನದಲ್ಲಿಯೇ ಬಸವಾದಿ ಶರಣರು ಎಲ್ಲ ವರ್ಗದವರನ್ನು ಒಳಗೊಂಡ ಸಂವಿಧಾನವನ್ನು ಕೊಟ್ಟರು. ಸಪ್ತಶುದ್ದಿಗಳ ಮೂಲಕ ಎಲ್ಲವನ್ನು ತಿದ್ದುವ ಕೆಲಸ ಮಾಡಿದರು. ಸಕಲ ಜೀವಿಗಳಿಗೂ ಲೇಸನ್ನೇ ಬಯಸುವ ಧರ್ಮ ಮಾನವ ಧರ್ಮ. ಅದು ಶರಣರ ಧರ್ಮವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷರಾದ ಡಾ. ಸಿದ್ಧರಾಮ ಬೆಲ್ದಾಳ ಶರಣರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಎಂ ಕೆ ತಾಜ್‌ಪೀರ್, ಅ.ಭಾ.ವೀ.ಲಿಂ.ಮ.ಸ. ಜಿಲ್ಲಾಧ್ಯಕ್ಷ ಶ್ರೀ ಮಹಡಿ ಶಿವಮೂರ್ತಿ, ಮೈಸೂರು ಜಿ.ಕ.ಸಾ.ಪ. ಮಾಜಿ ಅಧ್ಯಕ್ಷ ಶ್ರೀ ಎಂ ಚಂದ್ರಶೇಖರ್, ಹಿರಿಯ ಸಂಶೋಧಕ ಡಾ.ಬಿ.ನಂಜುಂಡಸ್ವಾಮಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಜಿಲ್ಲಾ ಡಾ.ಕೆ.ಎಂ.ವೀರೇಶ್, ಹರಗುರು ಚರಮೂರ್ತಿಗಳು ಉಪಸ್ಥಿತಿರಿದ್ದರು. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ
ಗಾನಯೋಗಿ ಪಂಚಾಕ್ಷರಿ ಸಂಗೀತ ಬಳಗದವರು "ಜಯದೇವ ಜ್ಯೋತಿ" ರೂಪಕ, ಮೈಸೂರು ನಿರಂತರ ಫೌಂಡೇಶನ್ ರವರು ಬಸವಣ್ಣನವರ ವಚನಾಧಾರಿತ "ಕೂಡಲ ಸಂಗಮ" ದೃಶ್ಯರೂಪಕ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಉಮೇಶ್ ಪತ್ತಾರ್ ಪ್ರಾರ್ಥಿಸಿ, ಪ್ರಕಾಶ್ ಕಲ್ಲಳ್ಳಿ ಸ್ವಾಗತಿಸಿ, ಶೋಭಾ ಮಲ್ಲಿಕಾರ್ಜುನ್ ನಿರೂಪಿಸಿ ಗೀತಾ ರುದ್ರೇಶ್ ವಂದಿಸಿದರು.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page