top of page

76ನೇ ಗಣರಾಜ್ಯೋತ್ಸವ - 2025

26 Jan 2025

ಭಾರತವನ್ನು ಸಾರ್ವಭೌಮ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಲು ನಾವೆಲ್ಲ ದೇಶಭಕ್ತಿ, ಧರ್ಮಶ್ರದ್ಧೆ, ವಿಚಾರ, ಅಭಿವ್ಯಕ್ತಿ ಮತ್ತು ಉಪಾಸನಾ ಸ್ವಾತಂತ್ರ್ಯದೊಂದಿಗೆ ಬದುಕಬೇಕಿದೆ ಎಂದು ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ ಹೇಳಿದರು.
ನಗರದ ಎಸ್.ಜೆ.ಎಂ. ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದ್ದ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರು ಮಾತನಾಡಿದರು.
ಇಂದು ವಿಶ್ವದಾದ್ಯಂತ ನೆಲೆಸಿರುವ ಭಾರತೀಯರಿಗೆ ಸಂತಸವಾಗಿದೆ. ಶತಮಾನಗಳಿಂದ ಪರಕೀಯರ ದಾಸ್ಯಕ್ಕೆ ಒಳಗಾಗಿದ್ದೆವು. 26 ಜನವರಿ 1950ರಂದು ಗಣರಾಜ್ಯವಾಯಿತು. ಇಂದಿನ ಯುವಕರು ಮುಂದೆ ನಾಡನ್ನು ಕಟ್ಟಬೇಕಿದೆ. ಜಗತ್ತಿನಲ್ಲಿಯೇ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶವು ವಿವಿಧತೆಯಲ್ಲಿ ಏಕತೆಯನ್ನು ಸಾರಿದೆ. ವಿವಿಧ ಸಂಸ್ಕೃತಿ, ಭಾಷೆ, ಜನಾಂಗವನ್ನು ಮೆಟ್ಟಿ ನಿಂತು ನಾವು ಭಾರತೀಯರು ಎನ್ನುವಂತೆ ಇದ್ದೇವೆ ಎಂದರು.
ಡಾ.ಬಿ ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂದು ಸಾರಿದೆ. ಯುವಸಮೂಹ ನಮ್ಮ ಹಕ್ಕು, ಕರ್ತವ್ಯವನ್ನು ನಿಭಾಯಿಸುತ್ತ ದೇಶಕ್ಕೆ, ಸಂಸ್ಥೆಗೆ ಏನು ಮಾಡಿದ್ದೇವೆ ಎಂಬುದನ್ನು ನೋಡಬೇಕಿದೆ. ಈ ಸಂಸ್ಥೆ ಕಟ್ಟಬೇಕಾದರೆ ಹಿಂದಿನವರು ಪಟ್ಟ ಶ್ರಮದ ಬಗ್ಗೆ ಯೋಚಿಸಬೇಕಿದೆ. ಎಲ್ಲ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ಕರ್ತವ್ಯ ನಿರ್ವಹಿಸಬೇಕು. ಆಡಳಿತ ಮಂಡಳಿಯು ವಿದ್ಯಾಪೀಠದ ಶಾಲಾಕಾಲೇಜುಗಳ ನೌಕರರಿಗೆ ಬರುವ ಏಪ್ರಿಲ್ 1 ರಿಂದ ಪರಿಷ್ಕೃತ ವೇತನವನ್ನು ಜಾರಿ ಮಾಡುವುದಾಗಿ ತಿಳಿಸಿದರು.
ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ, ಎಸ್.ಎನ್. ಚಂದ್ರಶೇಖರ್, ಶಾಲಾಕಾಲೇಜುಗಳ ಮುಖ್ಯಸ್ಥರುಗಳು ವೇದಿಕೆಯಲ್ಲಿದ್ದರು.
ಇದಕ್ಕು ಮುನ್ನ ಎಸ್.ಜೆ.ಎಂ. ವಿದ್ಯಾಪೀಠದ ಶಾಲಾ ಕಾಲೇಜುಗಳ 20 ತಂಡಗಳು ಆಕರ್ಷಕ ಪಥಸಂಚಲನ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ನಿವೃತ್ತ ನೌಕರರಿಗೆ, ಪಿಹೆಚ್.ಡಿ. ಪದವಿ ಪಡೆದವರಿಗೆ, ರ‍್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ, ಕ್ರೀಡಾ ಸಾಧಕರಿಗೆ, ರಾಷ್ಟಿçÃಯ ಹಾಗೂ ಅಂತಾರಾಷ್ಟಿçÃಯ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧ ಮಂಡಿಸಿದವರನ್ನು ಸನ್ಮಾನಿಸಲಾಯಿತು.
ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ದೇಶಭಕ್ತಿಯನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಅತ್ಯುತ್ತಮ ಪ್ರದರ್ಶನ ನೀಡಿದ ಎಸ್.ಜೆ.ಎಂ. ನರ್ಸಿಂಗ್ ಕಾಲೇಜು (ಪ್ರಥಮ), ಎಸ್.ಜೆ.ಎಂ. ಆಂಗ್ಲಮಾಧ್ಯಮ ಶಾಲೆ (ದ್ವಿತೀಯ) ಮತ್ತು ಎಸ್.ಜೆ.ಎಂ. ಪಾಲಿಟೆಕ್ನಿಕ್ (ತೃತೀಯ) ಬಹುಮಾನಗಳನ್ನು ನೀಡಲಾಯಿತು.
ಶಿಸ್ತಿನಿಂದ ಆಕರ್ಷಕ ಪಥಸಂಚಲನದಲ್ಲಿ ಭಾಗವಹಿಸಿದ ಪ್ರೌಢಶಾಲೆ ಹಂತದಲ್ಲಿ ಎಸ್.ಜೆ.ಎಂ. ಸಿ.ಬಿ.ಎಸ್.ಇ. ಬಾಲಕಿಯರ ಪ್ರೌಢಶಾಲೆಗೆ (ಪ್ರಥಮ), ಶ್ರೀ ಬೃಹನ್ಮಠ ಪ್ರೌಢಶಾಲೆಗೆ (ದ್ವಿತೀಯ) ಮತ್ತು ಎಸ್.ಜೆ.ಎಂ. ಆಂಗ್ಲಮಾಧ್ಯಮ ಶಾಲೆಯ ಬಾಲಕಿಯರ ತಂಡಕ್ಕೆ (ತೃತೀಯ) ಕಾಲೇಜು ಹಂತದಲ್ಲಿ ಎಸ್.ಜೆ.ಎಂ. ಫಾರ್ಮಸಿ ಕಾಲೇಜಿಗೆ (ಪ್ರಥಮ), ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಎನ್.ಸಿ.ಸಿ. ತಂಡಕ್ಕೆ (ದ್ವಿತೀಯ) ಮತ್ತು ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ತಂಡಕ್ಕೆ (ತೃತೀಯ) ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.
ಮಿಥುನ್‌ಕುಮಾರ್ ಎ.ಆರ್., ಸಹನ ಪಿ.ಎಸ್. ಮತ್ತು ದೀಪು ವಿ. ಇವರುಗಳು ಕಾರ್ಯಕ್ರಮವನ್ನು ನಿರೂಪಿಸಿದರು.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page