top of page

Sharana Sanskriti Utsava 2024 05.10.2024 Schedule and SriMutt Lighting Photos

4 Oct 2024

ಬೆಳಿಗ್ಗೆ 7.30 ಗಂಟೆಗೆ ಶ್ರೀಮಠದ ಅನುಭವಮಂಟಪದಲ್ಲಿ ಸಹಜ ಶಿವಯೋಗ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಗುರುಮಠಕಲ್ ಖಾಸಾ ಮುರುಘಾಮಠದ ಶ್ರೀಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು ನಡೆಸಿಕೊಡಲಿದ್ದು, ರಾವಂದೂರು, ಶ್ರೀ ಮುರುಘಮಠದ ಶ್ರೀ ಮ.ನಿ.ಪ್ರ. ಮೋಕ್ಷಪತ್ನಿ ಸ್ವಾಮಿಗಳು, ಹುಲಸೂರು ಶ್ರೀ ಗುರುಬಸವೇಶ್ವರ ವಿರಕ್ತಮಠದ ಶ್ರೀ ಮ.ನಿ.ಪ್ರ. ಶಿವಾನಂದ ಸ್ವಾಮಿಗಳು, ಹಾವೇರಿ ಹೊಸಮಠದ ಶ್ರೀ ಬಸವ ಶಾಂತಲಿಂಗಸ್ವಾಮಿಗಳು, ಶಿರಗುಪ್ಪ ಬಸವಕೇಂದ್ರದ ಶ್ರೀ ಬಸವಭೂಷಣ ಸ್ವಾಮಿಗಳು ಸಾನ್ನಿದ್ದ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಿಗ್ಗಾವಿ ಸಮಾಜಸೇವಕರಾದ ಶ್ರೀ ಡಿ.ಎಸ್.ಮಾಳಗಿ, ಹಾವೇರಿ ಬಸವಕೇಂದ್ರದ ಶ್ರೀಮತಿ ಶೋಭಾತಾಯಿ ಮಾಗ್ತಾವಿ ಆಗಮಿಸಲಿದ್ದಾರೆ.
ಬೆಳಿಗ್ಗೆ 10.00 ಗಂಟೆಗೆ ಜಯದೇವ ಕಪ್ ಕ್ರೀಡಾಕೂಟದಲ್ಲಿ ಜಿಲ್ಲಾಮಟ್ಟದ ಪ್ರೌಢಶಾಲಾ ವಿಭಾಗದ್ದ ಬಾಲಕ ಹಾಗೂ ಬಾಲಕಿಯರ ಹೊನಲು ಬೆಳಕಿನ ಕಬ್ಬಡಿ, ಖೋಖೋ, ವಾಲಿಬಾಲ್ಸ್ ಮತ್ತು ಹ್ಯಾಂಡ್ಸ್ ಬಾಲ್ಸ್ ಪಂದ್ಯಾವಳಿಗಳ ಅಂಗವಾಗಿ ಆಯೋಜಿಸಿರುವ ಮೋಟಾರ್ ಬೈಕ್ ಜಾಥಾದ ಸಾನ್ನಿಧ್ಯವನ್ನು ಡಿ.ಕಲ್ಲೆರೆ ಅಲ್ಲಮಪ್ರಭು ಸಂಸ್ಥಾನಮಠದ ಶ್ರೀ ತಿಪ್ಪೇರುದ್ರಸ್ವಾಮಿಗಳು, ನರಸಿಂಹರಾಜಪುರ ಬಸವಕೇಂದ್ರದ ಶ್ರೀ ಬಸವಯೋಗ ಪ್ರಭುಸ್ವಾಮಿಗಳು ವಹಿಸಲ್ಲಿದ್ದು, ಶಾಸಕರಾದ ಶ್ರೀ ಕೆ.ಸಿ.ವೀರೇಂದ್ರ(ಪಪ್ಪಿ) ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದು, ಮುಖ್ಯ ಅತಿಥಿಯಾಗಿ ನಗರಸಭೆ ಅಧ್ಯಕರಾದ ಶ್ರೀಮತಿ ಸುಮಿತರಾಘವೇಂದ್ರ ಭಾಗವಹಿಸಲಿದ್ದು, ಮೋಟಾರ್ ಬೈಕ್‌ ಜಾಥಾವು ಕನಕ ವೃತ್ತದಿಂದ ಪ್ರಾರಂಭವಾಗಿ ಬುರುಜಿನಹಟ್ಟಿ ವೃತ್ತ, ಚಿಕ್ಕಪೇಟೆ, ದೊಡ್ಡಪೇಟೆ, ರಂಗಯ್ಯನಬಾಗಿಲ್ಲು, ಮದಕರಿ ವೃತ್ತ, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಪ್ರಧಾನ ಅಂಚೆಕಛೇರಿ, ಕೆ.ಎಸ್.ಆರ್.ಟಿ.ಸಿ.ಬಸ್ ಸ್ಟ್ಯಾಂಡ್, ಬಿ.ಡಿ.ರಸ್ತೆ, ಜೆ.ಎಂ.ಐ.ಟಿ.ವೃತ್ತದಿಂದ ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನರದಲ್ಲಿ ಕೊನೆಗೊಳ್ಳಲಿದೆ.
ಬೆಳಿಗ್ಗೆ 10.00ಗಂಟೆಗೆ ಅಲ್ಲಮಪ್ರಭು ಸಂಶೋಧನಾಕೇಂದ್ರದಲ್ಲಿ ವಚನ ಕಮ್ಮಟ್ಟ ಗೋಷ್ಠಿ-1 ಆಷ್ಟಾವರಣ ವಿಚಾರದಲ್ಲಿ ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪ್ರಾದೋದಕ, ಪ್ರಸಾದ ಕುರಿತು ಕಡೂರಿನ ಡಾ.ಮಂಜುನಾಥ್, ಉಳವಿ ಶ್ರೀ ಚೆನ್ನಬಸವೇಶ್ವರ ಮಹಾಮಠದ ಶ್ರೀ ಬಸವಲಿಂಗಮೂರ್ತಿ ಸ್ವಾಮಿಗಳು, ಚಿಗರಹಳ್ಳಿ ಶ್ರೀ ಮರುಳಶಂಕರದೇವ ಗುರುಪೀಠದ ಶ್ರೀ ಸಿದ್ಧಬಸವ ಕಬೀರ ಸ್ವಾಮಿಗಳು. ಬೆಂಗಳೂರಿನ ಶ್ರೀ ಪ್ರಕಾಶ ಜಿಂಗ್ಲಾಡೆ, ಶ್ರೀ ಬಿ ಎಂ ಮೂರ್ತಿ, ಮೈಸೂರಿನ ಶ್ರೀ ಬಿ ಎನ್ಸ್ ಲಿಂಗರಾಜು, ಬೆಂಗಳೂರಿನ ಶ್ರೀಮತಿ ಶೀಲಾದೇವಿ ಮಳೀಮಠ, ಡಾ.ಸಿಕೆ. ಜಗದೀಶ್ ಶಿಕ್ಷಣ ಮಾಲಿಕೆಯ ಉಪನ್ಯಾಸ ನೀಡುವರು.
ಬೆಳಿಗ್ಗೆ 10.30 ಗಂಟೆಗೆ ಅನುಭವ ಮಂಟಪದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯವನ್ನು ಹೆಬ್ಬಾಳು ಶ್ರೀ ವಿರಕ್ತಮಠದ ಶ್ರೀ ನಿ.ಪ್ರ.ಸ್ವ. ಮಹಾಂತರುದೇಶ್ವರ ಸ್ವಾಮಿಗಳು ವಹಿಸಲಿದ್ದು, ಕಾರ್ಯಕ್ರಮದ ಸಮುಖವನ್ನು ಕನಕಪುರ ಶ್ರೀ ಮರಳೇಗವಿಮಠದ ಶ್ರೀ ನಿ.ಪ್ರ.ಸ್ವ. ಚರಮೂರ್ತಿ ಮುಮ್ಮಡಿ ಶಿವರುದ್ರಸ್ವಾಮಿಗಳು ಹಾಗೂ ಹೊಸದುರ್ಗ ಶ್ರೀ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮಿಗಳು ವಹಿಸುವರು. ಮುಖ್ಯ ಅತಿಥಿಗಳಾಗಿ ಬೆಂಗಳೂರು ಸಪ್ನ ಬುಕ್ಸ್ ಹೌಸ್ ಕನ್ನಡ ವಿಭಾಗದ ಮುಖ್ಯಸ್ಥ ಶ್ರೀ ದೊಡ್ಡಗೌಡ, ಅ.ಭಾ.ವೀ.ಲಿಂ. ಮಹಾಸಭಾ ಬೆಂಗಳೂರು ಜಿಲ್ಲೆ ಅಧ್ಯಕ್ಷ ಶ್ರೀ ಎಸ್.ಗುರುಸ್ವಾಮಿ, ಮೈಸೂರು ಜಾಗತಿಕ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಶ್ರೀ ಮಹಾದೇವಪ್ಪ, ಭರಮಸಾಗರದ ಶ್ರೀ ಟಿ.ಆ‌ರ್.ಚನ್ನೇಶ್, ಶ್ರೀ ಎನ್.ಟಿ.ಬಸಣ್ಣ ಆಗಮಿಸಲಿದ್ದು, ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕರಾದ ಶ್ರೀ ಕೆ.ಜಿ.ಸಿದ್ದಲಿಂಗ ಪ್ರಸಾದ್‌ರವರನ್ನು ಸನ್ಮಾನಿಸಲಾಗುವುದು.
ಅಪರಾಹ್ನ 3.00 ಗಂಟೆಗೆ ವಚನ ಕಮ್ಮಟ್ಟ ಪರೀಕ್ಷೆಯ ಥ್ಯಾಂಕ್ಸ್ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭದ ಸಮ್ಮುಖ್ಯವನ್ನು ಹಿರೇ ಮಾಗಡಿ ಶ್ರೀ ವಿರಕ್ತಮಠದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮಿಗಳು, ವಿಜೂರಿ ಶ್ರೀಮುರುಘರಾಜೇಂದ್ರ ವಿರಕ್ತಮಠದ ಶ್ರೀ ಮುರುಪೇಂದ್ರ ಕೋರುಣೇಶ್ವರ ಸ್ವಾಮಿಗಳು, ಹೆಗ್ಗುಂದ ಶ್ರೀ ವನಕಲ್ಸ್ ಮಲ್ಲೇಶ್ವರ ಮಠದ ಡ್ರಾ.ಬಸವ ರಮಾನಂದ ಸ್ವಾಮಿಗಳು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಎಸ್.ಜೆ.ಸೋಮಶೇಖರ್ ಆಗಮಿಸುವರು.
ಅಪರಾಹ್ನ 4.00ಗಂಟೆಗೆ ಶ್ರೀಜಯದೇವಕಪ್ ಪಂದ್ಯಾವಳಿಯ ಅಂಗವಾಗಿ ಶ್ರೀ ಮನ್ನಹಾರಾಜ್ ನಿರಂಜನ ಜಗದ್ಗುರು ಜಯದೇವ ಶ್ರೀಗಳ ಬೆಳ್ಳಿಮೂರ್ತಿಯ ಪಲ್ಲಕ್ಕಿ ಉತ್ಸವ ಹಾಗೂ ಪಥ ಸಂಚಲನ ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದರಾದ ಶ್ರೀ ಗೋವಿಂದ ಎಂ ಕಾರಜೋಳ ನೆರವೇರಿಸಲಿದ್ದು, ಘನುಪಸ್ಥಿತಿ ಶಾಸಕರಾದ ಶ್ರೀ ಕೆ.ಸಿ.ವೀರೇಂದ್ರ(ಪಪ್ಪಿ). ಪಲ್ಲಕ್ಕಿ ಉತ್ಸವ ಹಾಗೂ ಪಕ್ಷ ಸಂಚಲನವು ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾಗಿ ಬಸವಮಂಟಪರಸ್ತೆ, ರಂಗಯ್ಯನ್ನ ಬಾಗಿಲು, ದೊಡ್ಡಪೇಟೆ, ಚಿಕ್ಕಪೇಟೆ, ಬುರುಜಿನ ಹಟ್ಟಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ನೀಕಂಠೇಶ್ವರ ದೇವಸ್ಥಾನ. ಗಾಂದಿ ವೃತ್ತ, ಬಿ.ಡಿ.ರಸ್ತೆ ಮೂಲಕ ಹಳೆಯ ಮಾಧ್ಯಮಿಕ ಶಾಲಾ ಆವರಣ ತಲುಪುವುದು.
ಸಂಜೆ 6.00 ಗಂಟೆಗೆ ಹಳೆಯ ಮಾಧ್ಯಮಿಕ ಶಾಲಾ ಆವರಣದಲ್ಲಿ ಶ್ರೀ ಜಯದೇವಪ್ಪ ಹೊನಲು ಬೆಳಕಿನ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಸಮುಖವನ್ನು ಚಿತ್ರದುರ್ಗ ಶ್ರೀ ಸಿದ್ಧರಾಮೇಶ್ವರ ಸಂಸ್ಥಾನದ ಶ್ರೀ ಜಗದ್ಗುರು ಇಮ್ಮಡ್ಲಿ ಸಿದ್ಧರಾಮ ಮಹಾಸ್ವಾಮಿಗಳು ಹಾಗೂ ಚಿತ್ರದುರ್ಗ ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಜಗದ್ಗುರು ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮಿಗಳು ವಹಿಸಲಿದ್ದು, ಕ್ರೀಡಾಕೂಟವನ್ನು ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ಉದ್ಘಾಟಿಸಲಿದ್ದು, ಹೊನಲು ಬೆಳಕಿನ ಉದ್ಘಾಟನೆಯನ್ನು ಶಿವಮೊಗ್ಗ ಸಂಸದ ಶ್ರೀ ಬಿ ವೈ ರಾಘವೇಂದ್ರ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಲಿಡ್ಕರ್ ನಿಗಮದ ಅಧ್ಯಕ್ಷ ಶ್ರೀ ಮುಂಡರಗಿ ನಾಗರಾಜ್, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀ ಜಿ ಎಸ್ ಮಂಜುನಾಥ್, ಮಾಜಿ ಸಂಸದರಾದ ಶ್ರೀ ಬಿ.ಎನ್.ಚಂದಪ್ಪ, ಚಿತ್ರದುರ್ಗ ಕೆ.ಡಿ.ಪಿ.ಸದಸ್ಯರಾದ ಶ್ರೀ ಕೆ.ಸಿ.ನಾಗರಾಜ್, ಜಿಲ್ಲಾಧಿಕಾರಿಗಳಾದ ಶ್ರೀ ಟಿ.ವೆಂಕಟೇಶ್, ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಶ್ರೀ ರಂಜಿತ್ ಕುಮಾರ್ ಬಂಡಾರು. ಕೆ.ಪಿ.ಸಿ.ಸಿ. ಸದಸ್ಯ ಡಾ.ಬಿ.ತಿಪ್ಪೇಸ್ವಾಮಿ, ರಾಜ್ಯ ವಕ್ಸ್ ಬೋರ್ಡ್ ಅಧ್ಯಕ್ಷರಾದ ಶ್ರೀ ಕೆ ಅನ್ವರ್ ಬಾಷಾ, ಚಲನಚಿತ್ರ ನಿರ್ಮಾಪಕ್ಷ ಶ್ರೀ ಛಲವಾದಿ ಕುಮಾರ, ಖ್ಯಾತ ನಿರ್ದೇಶಕ ಶ್ರೀ ನಾಗಶೇಖರ್, ಖ್ಯಾತ ಚಲನಚಿತ್ರ ಕಲಾವಿದ್ದ ಶ್ರೀ ಶ್ರೀನಗರ ಕಿಟ್ಟಿ, ಬಿ.ಜೆ.ಪಿ.ಮುಖಂಡ ಡಾ.ಕಾಂತಿಕಿರಣ್, ಕುರುಬರ ಸಂಘದ ಅಧ್ಯಕ್ಷರಾದ ಶ್ರೀ ಶ್ರೀರಾಮ್ ಎಸ್, ಕಾಂಗ್ರೆಸ್ ಮುಖಂಡ ಶ್ರೀ ಸೈಯದ್ ಅನೀಸ್, ವೀರಶೈವ ಲಿಂಗಾಯತ ಯುವವೇದಿಕೆ ಅಧ್ಯಕ್ಷರಾದ ಶ್ರೀ ಮಂಜುನಾಥ್ ಹೆಚ್ ಎಂ(ದಾಳಿಂಬೆ), ಶಿವಮೊಗ್ಗದ ಯುವಮುಖಂಡ ಶ್ರೀ ಶ್ರೀಕಾಂತ್ ಆಗಮಿಸಲಿದ್ದು, ಕಾರ್ಯಕ್ರಮದಲ್ಲಿ ಕರಾಟೆ ಗ್ರಾಂಡ್ ಮಾಸ್ಟರ್ ಡಾ.ಪ್ರವೀಣ್‌ರಂಕ, ಖ್ಯಾತ ಕರಾಟೆ ಮತ್ತು ಕುಸ್ತಿ ಪಟ್ಟು ಶ್ರೀಮತಿ ಅಂಜು ಎಸ್, ಬೆಂಗಳೂರು ಅರ್ಪಿತಾ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀ ಲಗ್ಗೆರೆ ನಾರಾಯಣಸ್ವಾಮಿ, ಕೊರೊನ್ಹಾ ವಾರಿಯರ್ ಶ್ರೀ ಲಿಂಗರಾಜ್, ಶ್ರೀ ದಿನೇಶ್, ಕರಾಟೆಪಟು ಶ್ರೀ ಗಿರೀಶ್ ಎಂ ಇವರನ್ನು ಸನ್ಮಾನಿಸಲಾಗುವುದು.
ಸಾಂಸ್ಕೃತಿಕ ಸಂಭ್ರಮದಲ್ಲಿ ಅಂಜನಾ ನೃತ್ಯ ಕಲಾಕೇಂದ್ರದ ಡ್ಯಾನಂದಿನಿ ಶಿವಪ್ರಕಾಶ್ ಮತ್ತು ತಂಡದವರಿಂದ ನೃತ್ಯ ಪ್ರದರ್ಶನ, ರೋಣದ ಅರುಣೋದಯ ಕಲಾಸಂಘದ ಶ್ರೀ ಶಂಕ್ರಣ್ಣ ಸಂಕಣ್ಣನವರ್‌ ಮತ್ತು ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ.

SJM Vidyapeeta is committed to transforming lives through education and is committed to providing accessible and affordable education to all.

Get in Touch

Thanks for submitting!

Registration Office

Admissions Office

© 2024 by Shakti Prasad, System Analyst, BMCH

bottom of page